ಸಾಂಸ್ಕೃತಿಕ ಮುನ್ನೋಟ: ‘ಆದದ್ದೆಲ್ಲಾ ಒಳಿತೇ..?’ ನಾಟಕ ಪ್ರದರ್ಶನ
‘ಆದದ್ದೆಲ್ಲಾ ಒಳಿತೇ..?’ ನಾಟಕಬೆಂಗಳೂರು: ಕ್ರಿಯೇಟಿವ್ ಥಿಯೇಟರ್ ವತಿಯಿಂದ ಆಗಸ್ಟ್ 2ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಆದದ್ದೆಲ್ಲಾ ಒಳಿತೇ..?’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಸುಂದರ್ ಅವರು ರಚಿಸಿದ್ದು, ಪ್ರಮೋದ್ ಶಿಗ್ಗಾಂವ್ ಅವರ ನಿರ್ದೇಶನವಿದೆ. ಕಲಾವಿದರಾದ ಲಕ್ಷ್ಮಿ ಚಂದ್

‘ಆದದ್ದೆಲ್ಲಾ ಒಳಿತೇ..?’ ನಾಟಕಬೆಂಗಳೂರು: ಕ್ರಿಯೇಟಿವ್ ಥಿಯೇಟರ್ ವತಿಯಿಂದ ಆಗಸ್ಟ್ 2ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಆದದ್ದೆಲ್ಲಾ ಒಳಿತೇ..?’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಸುಂದರ್ ಅವರು ರಚಿಸಿದ್ದು, ಪ್ರಮೋದ್ ಶಿಗ್ಗಾಂವ್ ಅವರ ನಿರ್ದೇಶನವಿದೆ. ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್, ರಾಮಕೃಷ್ಣ ಕನ್ನರಪಾಡಿ ಹಾಗೂ ಸೌಮ್ಯಾ ಗಂಗಟಕರ್ ಅವರು ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ಗೀತೆಗಳಿಗೆ ಗಜಾನನ ಟಿ. ನಾಯಕ ಅವರು ಸಂಗೀತ ನೀಡಿದ್ದು, ಎಂ.ಡಿ. ಪಲ್ಲವಿ ಮತ್ತು ತಂಡದವರು ಹಾಡಿದ್ದಾರೆ.ಮಧ್ಯಮ ವರ್ಗದ ಗಂಡ–ಹೆಂಡತಿ ನಡುವಿನ ದೈನಂದಿನ ಕಚ್ಚಾಟ, ಪೈಪೋಟಿ, ಅವರ ಅತ್ತೆಗಿರಿ–ಮಾವನಗಿರಿಯ ಆಶಯಗಳು ತರುವ ತಾಪತ್ರಯ, ಕರ್ನಾಟಕದ ಸಣ್ಣ ಹಳ್ಳಿಯ ಹೆಣ್ಣೊಂದು ಬಹುಭಾಷಿಕರಿರುವ ಮುಂಬೈನ ಫ್ಲ್ಯಾಟ್ಗೆ ಭೇಟಿ ನೀಡಿದಾಗ ಆಗುವ ಅವಾಂತರಗಳು, ಸಂಪ್ರದಾಯಸ್ಥ ಮನೆತನದ ಹುಡುಗಿ ಫ್ರೆಂಚ್ ಹುಡುಗನನ್ನು ಮದುವೆಯಾಗಿ ಮನೆಗೆ ಕರೆತಂದಾಗ ಉಂಟಾಗುವ ಫಜೀತಿ ಈ ನಾಟಕದ ವಸ್ತು ಎಂದು ಆಯೋಜಕರು ತಿಳಿಸಿದ್ದಾರೆ. –0–‘ಎರಡೆರಡ್ಲಾ ಐದು’ ನಾಟಕ ಬೆಂಗಳೂರು: ಸಂಚಲನ ಮೈಸೂರು ಸಂಸ್ಥೆಯು ಇದೇ 30ರಂದು ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಎರಡೆರಡ್ಲಾ ಐದು’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಶ್ಷೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಅವರು ಈ ನಾಟಕ ನಿರ್ದೇಶಿಸಿದ್ದಾರೆ. 1975ರ ಆಸುಪಾಸಿನಲ್ಲಿ ನಡೆಯುವ ಈ ಕಥೆ, ಕೃಷ್ಣಮೂರ್ತಿ ಎಂಬ ಒಬ್ಬ ಪ್ರಾಮಾಣಿಕ ಸರ್ಕಾರಿ ನೌಕರನ ಆರ್ಥಿಕ ಮತ್ತು ಸಾಮಾಜಿಕ ಸಮರವನ್ನು ಹಂತ ಹಂತವಾಗಿ ಈ ನಾಟಕವು ಬಿತ್ತರಿಸುತ್ತದೆ.ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. ಸಂಪರ್ಕಕ್ಕೆ: 9845075762ನೂಪುರ ಆರಾಧನೋತ್ಸವ ಬೆಂಗಳೂರು: ನಾಟ್ಯ ನಿನಾದ ನೃತ್ಯಾಲಯ ಟ್ರಸ್ಟ್ ಇದೇ 31ರಂದು ಸಂಜೆ 6 ಗಂಟಗೆ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ನೂಪುರ ಆರಾಧನೋತ್ಸವ ಹಮ್ಮಿಕೊಂಡಿದೆ. ಚೇತನ್ ಗಂಗಟ್ಕರ್ ಹಾಗೂ ಚಂದ್ರಪ್ರಭ ಚೇತನ್ ಅವರ ಶಿಷ್ಯರಾದ ಧುತಿಶ್ರೀ ಎಂ., ಗುಂಜನ್ ಕುಲ್ಹನ್, ಹನ್ಶಿತಾ ಕೆ., ಶ್ರಾವ್ಯಾ, ಪ್ರಣವಿ ಜಗದೀಶ್, ಸಂಯುಕ್ತಾ ಉಡಪಿ, ಸಾನ್ವಿ ಹರೀಶ್, ಯುಕ್ತಿ ಎನ್. ಅವರು ಶಾಸ್ತ್ರೀಯ ನೃತ್ಯ ಪ್ರಸ್ತುತಪಡಿಸಲಿದ್ದಾರೆ. ಅರ್ಥ ನೃತ್ಯ ಕಲಾಮಂದಿರದ ಸ್ಮಿತಾ ಶ್ರೀಪತಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.–0– ‘ಗುರುಸ್ಮೃತಿ’ ಸಂಗೀತ ಉತ್ಸವಬೆಂಗಳೂರು: ಸ್ವರ ಸೌರಭ ಸಂಗೀತ ಅಕಾಡೆಮಿಯು ಆಗಸ್ಟ್ 1 ಮತ್ತು 2ರಂದು ವೈಯಾಲಿಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ‘ಗುರುಸ್ಮೃತಿ’ ಶೀರ್ಷಿಕೆಯಡಿ ಆರ್.ಆರ್. ಕೇಶವಮೂರ್ತಿ ಸಂಗೀತ ಉತ್ಸವ ಹಮ್ಮಿಕೊಂಡಿದೆ. 1ರಂದು ಸಂಜೆ 6 ಗಂಟೆಗೆ ‘ಮಾ ಭವಾನಿ’ ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ಅನಂತ್ ಎ. ಕುಲಕರ್ಣಿ ಅವರಿಂದ ಕೊಳಲು ವಾದನ ನಡೆಯಲಿದೆ. ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿ.ಬಾಬು ಮತ್ತು ಸುಮಾ ಸುಧೀಂದ್ರ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಿಂದೂಸ್ತಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಅವರಿಗೆ ‘ಸಾಧನಾಚಾರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಬಳಿಕ ಅವರಿಂದ ಸಂಗೀತ ಕಛೇರಿ ನಡೆಯಲಿದೆ. ತಬಲಾದಲ್ಲಿ ವಿಶ್ವನಾಥ್ ನಾಕೋಡ್ ಹಾಗೂ ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಅವರು ಸಾಥ್ ನೀಡಲಿದ್ದಾರೆ. 2ರಂದು ಬೆಳಿಗ್ಗೆ 10 ಗಂಟೆಗೆ ‘ಕೃಷ್ಣಂ ವಂದೇ ಜಗದ್ಗುರುಂ’ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯಲಿದ್ದು, ವಿಶಾಖಾ ಹರಿ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ. ಪಿಟೀಲಿನಲ್ಲಿ ಎಚ್.ಎಂ. ಸ್ಮಿತಾ, ಮೃದಂಗದಲ್ಲಿ ಅರ್ಜುನ್ ಗಣೇಶ್ ಹಾಗೂ ಘಟದಲ್ಲಿ ತಿರುಚ್ಚಿ ಕೃಷ್ಣಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಸುರಭಿ ಮತ್ತು ಪ್ರಣತಿ ಅವರಿಂದ ಗಾಯನ ನಡೆಯಲಿದೆ. ಸಂಜೆ 6ಕ್ಕೆ ‘ದಾಸರು ಕಂಡ ಶ್ರೀಕೃಷ್ಣ’ ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾಭೂಷಣ ಅವರಿಂದ ಗಾಯನ ಹಾಗೂ ಸತ್ಯನಾರಾಯಣ ರಾಜು ಅವರಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಕೊಳಲಿನಲ್ಲಿ ಸಂದೀಪ್ ವಸಿಷ್ಠ, ಮೃದಂಗದಲ್ಲಿ ವಿಕ್ರಮ್ ಭಾರದ್ವಾಜ್, ಸಿತಾರದಲ್ಲಿ ಶ್ರೀನಿವಾಸ ಎಚ್.ಪಿ., ನಟುವಾಂಗದಲ್ಲಿ ಭಾರತಿ ನಾರಾಯಣ, ಪಿಟೀಲಿನಲ್ಲಿ ರಂಜನ್ ಬ್ಯೂರಾ ಹಾಗೂ ತಬಲಾದಲ್ಲಿ ಕಾರ್ತಿಕ್ ಭಟ್ ಅವರು ಸಾಥ್ ನೀಡಲಿದ್ದಾರೆ. ‘ಜತೆಗಿರುವನು ಚಂದಿರ’ ನಾಟಕಬೆಂಗಳೂರು: ಸಂಕಲ್ಪ ರಂಗ ತಂಡವು ಇದೇ 31ರಂದು ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಜಯಂತ ಕಾಯ್ಕಿಣಿ ಅವರು ರಚಿಸಿದ ಈ ನಾಟಕವನ್ನು, ಹುಲುಗಪ್ಪ ಕಟ್ಟೀಮನಿ ಅವರು ನಿರ್ದೇಶಿಸಿದ್ದಾರೆ. ಈ ನಾಟಕ ಮುಸ್ಲಿಂ ಸಮುದಾಯದ ಕುಟುಂಬವೊಂದರ ಸುತ್ತಲೂ ನಡೆಯುತ್ತದೆ. ಭಾರತದ ವಿಭಜನೆಯ ಹಿನ್ನೆಲೆಯನ್ನು ಈ ಕಥೆ ಹೊಂದಿದೆ. ನಾಟಕದ ಟಿಕೆಟ್ ಬುಕ್ ಮೈ ಶೋದಲ್ಲಿ ಲಭ್ಯ.‘ಪಂಡಿತ್ ಶೇಷಾದ್ರಿ ಗವಾಯಿ’ ಸಂಗೀತೋತ್ಸವಬೆಂಗಳೂರು: ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆಯು ಆಗಸ್ಟ್ 2ರಂದು ಮಧ್ಯಾಹ್ನ 2 ಗಂಟಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಪಂಡಿತ್ ಶೇಷಾದ್ರಿ ಗವಾಯಿ’ ಸಂಗೀತೋತ್ಸವ ಹಮ್ಮಿಕೊಂಡಿದೆ. ಈ ಸಮಾರಂಭದಲ್ಲಿ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಗೆ ‘ಪಂಚಾಕ್ಷರ ಕೃಪಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬಳಿಕ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ. ರಾಜೇಂದ್ರ ನಾಕೋಡ್, ಸತೀಶ್ ಕೊಳ್ಳಿ ಅವರು ವಾದ್ಯ ಸಹಕಾರ ನೀಡಲಿದ್ದಾರೆ. ಇದಕ್ಕೂ ಮೊದಲು ಪೂರ್ಣ ಆಚಾರ್ಯ ಮತ್ತು ತಂಡದವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ. ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಂದ ಗಾಯನ, ವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪುನೀತ್ ರಾಣಾಪೂರ್, ವಿನೀತ್ ರಾಣಾಪೂರ್, ಭೀಮಾಶಂಕರ ಹೇಮನೂರ್ ವಾದ್ಯ ಸಹಕಾರ ನೀಡಲಿದ್ದಾರೆ. ‘ತಾಲ್ ಯಾತ್ರಾ’ ಸಂಗೀತ ನೃತ್ಯ ಸಂಗಮಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಆಗಸ್ಟ್ 1ರಂದು ಮಧ್ಯಾಹ್ನ 2 ಗಂಟೆಯಿಂದ ಕನಕಪುರ ರಸ್ತೆಯಲ್ಲಿರುವ ಶಂಕರ ಫೌಂಡೇಷನ್ನ ಢಮರು ಸಭಾಂಗಣದಲ್ಲಿ ‘ತಾಲ್ ಯಾತ್ರಾ’ ಸಂಗೀತ ನೃತ್ಯ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿನೀತ್ ರಾಣಾಪೂರ್ ಅವರಿಂದ ಸಂಗೀತ ಸಂಗಮ ಕಾರ್ಯಕ್ರಮ ನಡೆಯಲಿದೆ. ಫೌಂಡೇಷನ್ ವಿದ್ಯಾರ್ಥಿಗಳಿಂದ ಸಮೂಹ ವಾದ್ಯ ಸಂಗಮ, ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾವೇದಿಕೆ ಶಿಷ್ಯವೃಂದದಿಂದ ಸಮೂಹ ಗಾನ ಸಂಗಮ ಹಮ್ಮಿಕೊಳ್ಳಲಾಗಿದೆ. ಸುಧಾಂಶು ಕುಲಕರ್ಣಿ, ಸತೀಶ್ ಹಂಪಿಹೊಳಿ ಹಾಗೂ ಸಂತೋಷ್ ಕುಲಕರ್ಣಿ ಅವರಿಂದ ವಾದ್ಯ ಸಂಗಮ, ಪೂರ್ಣಾ ಆಚಾರ್ಯ ಮತ್ತು ಶಿಷ್ಯ ವೃಂದದಿಂದ ಕಥಕ್ ನೃತ್ಯ ಸಂಗಮ, ಆನೂರು ಅನಂತಕೃಷ್ಣ ಶರ್ಮ ಹಾಗೂ ವೃಂದದಿಂದ ಲಯ ಲಾವಣ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ನೂಪುರ ಆರಾಧನೋತ್ಸವಪರ್ವೀನ್ ಸುಲ್ತಾನಾ‘ಜತೆಗಿರುವನು ಚಂದಿರ’ ನಾಟಕದ ದೃಶ್ಯಸಂಗೀತಾ ಕಟ್ಟಿಆನೂರು ಅನಂತಕೃಷ್ಣ ಶರ್ಮ