ಶಿರೂರು ವೀರಭದ್ರಪ್ಪ ಮೂರ್ತಿ ಅನಾವರಣ, ಪುಸ್ತಕ ಬಿಡುಗಡೆ 15ಕ್ಕೆ
ಕುಕನೂರು: ‘ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಅವರ ಮೂರ್ತಿ ಮೆರವಣಿಗೆಯು ಆಗಸ್ಟ್ 7, 15ರಂದು ನೂತನ ಮೂರ್ತಿ ಅನಾವರಣ, ಜೀವನಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಧ್ವಜಾರೋಹಣ ಹಮ್ಮಿಕೊಳ್ಳಲಾಗಿದೆ’ ಎಂದು ಶಿರೂರು ವೀರಭದ್ರಪ್ಪ ಅಭಿಮಾನಿ ಬಳಗದ ಹಿರಿಯ ಮುಖಂಡ ಸತ್ಯನಾರಾಯಣ ಹರಪನಹಳ್ಳಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ದಿ.ಶಿರೂರು ವೀರಭದ್ರಪ್ಪ ಅವರು ಪ್ರಾಮ
ಕುಕನೂರು: ‘ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಅವರ ಮೂರ್ತಿ ಮೆರವಣಿಗೆಯು ಆಗಸ್ಟ್ 7, 15ರಂದು ನೂತನ ಮೂರ್ತಿ ಅನಾವರಣ, ಜೀವನಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಧ್ವಜಾರೋಹಣ ಹಮ್ಮಿಕೊಳ್ಳಲಾಗಿದೆ’ ಎಂದು ಶಿರೂರು ವೀರಭದ್ರಪ್ಪ ಅಭಿಮಾನಿ ಬಳಗದ ಹಿರಿಯ ಮುಖಂಡ ಸತ್ಯನಾರಾಯಣ ಹರಪನಹಳ್ಳಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ದಿ.ಶಿರೂರು ವೀರಭದ್ರಪ್ಪ ಅವರು ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿಯಾಗಿ ಜನಮನ ಗೆದ್ದಿದ್ದರು. ಅವರ ಸ್ಮರಣಾರ್ಥ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಬೇಕೆಂಬ ಉದ್ದೇಶದಿಂದ ಅಭಿಮಾನಿ ಬಳಗವು ಸ್ವಯಂಪ್ರೇರಿತ ದೇಣಿಗೆ ಸಂಗ್ರಹಿಸಿ ಮೂರ್ತಿ ಪ್ರತಿಷ್ಠಾಪನೆಗೆ ಒಮ್ಮತದ ನಿರ್ಧಾರ ಕೈಗೊಂಡಿದೆ’ ಎಂದರು.‘ಆ.7ರಂದು ಬೆಳಿಗ್ಗೆ ರಾಘಪ್ಪಜ್ಜನ ಮಠದಿಂದ ಬಾಜಾ-ಭಜಂತ್ರಿಗಳೊಂದಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಮೂರ್ತಿ ಮೆರವಣಿಗೆ ನಡೆಸಿ ವೃತ್ತದವರೆಗೆ ಕೊಂಡೊಯ್ಯಲಾಗುತ್ತದೆ. 15ರಂದು ಬೆಳಿಗ್ಗೆ 11ಗಂಟೆಗೆ ಶಿರೂರು ವೀರಭದ್ರಪ್ಪ ಅವರ ಮೂರ್ತಿ ಅನಾವರಣ ನಡೆಯಲಿದೆ’ ಎಂದು ಹೇಳಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260730-35-2028130140