ಸಿಬ್ಬಂದಿ ಸಂಖ್ಯೆ ಕಡಿತಕ್ಕೆ ಮುಂದಾದ ಬಿಎಂಡಬ್ಲ್ಯು
ಫ್ರಾಂಕ್ಫರ್ಟ್ (ಜರ್ಮನಿ): ಪ್ರೀಮಿಯಂ ವರ್ಗದ ಕಾರುಗಳ ತಯಾರಿಕಾ ಕಂಪನಿ ಬಿಎಂಡಬ್ಲ್ಯು, 2027ರ ಅಂತ್ಯದ ವೇಳೆಗೆ ಅಂದಾಜು 8 ಸಾವಿರ ಸಿಬ್ಬಂದಿಗೆ ಐಚ್ಛಿಕವಾಗಿ ಉದ್ಯೋಗ ತೊರೆಯಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಕಂಪನಿಯ ಮೂಲವೊಂದು ತಿಳಿಸಿದೆ.ಕಂಪನಿಯ ಒಟ್ಟು 40 ಸಾವಿರ ಉದ್ಯೋಗಿಗಳಿಗೆ ಐಚ್ಛಿಕವಾಗಿ ಕೆಲಸ ತೊರೆಯುವ ಅವಕಾಶ ನೀಡಲಾಗುತ್ತದೆ. ಉದ್ಯೋಗಿಗಳ ಸಂಖ್ಯ

ಫ್ರಾಂಕ್ಫರ್ಟ್ (ಜರ್ಮನಿ): ಪ್ರೀಮಿಯಂ ವರ್ಗದ ಕಾರುಗಳ ತಯಾರಿಕಾ ಕಂಪನಿ ಬಿಎಂಡಬ್ಲ್ಯು, 2027ರ ಅಂತ್ಯದ ವೇಳೆಗೆ ಅಂದಾಜು 8 ಸಾವಿರ ಸಿಬ್ಬಂದಿಗೆ ಐಚ್ಛಿಕವಾಗಿ ಉದ್ಯೋಗ ತೊರೆಯಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಕಂಪನಿಯ ಮೂಲವೊಂದು ತಿಳಿಸಿದೆ.ಕಂಪನಿಯ ಒಟ್ಟು 40 ಸಾವಿರ ಉದ್ಯೋಗಿಗಳಿಗೆ ಐಚ್ಛಿಕವಾಗಿ ಕೆಲಸ ತೊರೆಯುವ ಅವಕಾಶ ನೀಡಲಾಗುತ್ತದೆ. ಉದ್ಯೋಗಿಗಳ ಸಂಖ್ಯೆಯನ್ನು ಅಂತಿಮವಾಗಿ ಒಟ್ಟು ಎಂಟು ಸಾವಿರದಷ್ಟು ಕಡಿಮೆ ಮಾಡಲಾಗುತ್ತದೆ ಎಂದು ಗೊತ್ತಾಗಿದೆ.ಜಾಗತಿಕವಾಗಿ ಕಂಪನಿ 1.54 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮಂಡಳಿಯ ಜೊತೆ ಆರು ವಾರ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲವು ಬುಧವಾರ ತಿಳಿಸಿದೆ.ವಿದ್ಯುತ್ ಚಾಲಿತ ವಾಹನಗಳಿಂದ ಬರುವ ಅಲ್ಪ ವರಮಾನ, ಅಮೆರಿಕದ ಸುಂಕ ಮತ್ತು ಚೀನಾದ ಸ್ಪರ್ಧೆಯು ನೌಕರರ ಸಂಖ್ಯೆ ಕಡಿಮೆ ಮಾಡುವ ತೀರ್ಮಾನಕ್ಕೆ ಕಾರಣ ಎಂದು ತಿಳಿಸಿದೆ.ಜರ್ಮನಿಯ ಫೋಕ್ಸ್ವ್ಯಾಗನ್ ಕಂಪನಿಯು ಸಹ ಸಿಬ್ಬಂದಿ ಸಂಖ್ಯೆಯನ್ನು 1 ಲಕ್ಷದಷ್ಟು ಕಡಿತಗೊಳಿಸಲು ಮುಂದಾಗಿದೆ.
Read the complete story at Prajavani