ಕನ್ನಡ ಚಿತ್ರರಂಗ ರೈತರ ಪರ ಇರಲಿದೆ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ
ಬೆಂಗಳೂರು: ‘ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಕನ್ನಡ ಚಿತ್ರರಂಗ ದನಿ ಎತ್ತಿದೆ. ಕನ್ನಡ ಚಿತ್ರರಂಗವು ಕಾವೇರಿ ವಿಚಾರದಲ್ಲಿ ರೈತರ ಜೊತೆಗಿರಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕನ್ನಡ ಚಿತ್ರರಂಗದ ಒಗ್ಗಟ್ಟು ಚೆನ್ನಾಗಿದೆ. ಭಾಷೆ, ನೆಲ, ಜಲದ ವಿಚಾರವಾಗಿ ಎಲ್ಲರ ಧ್ವನಿ ಒಂ

ಬೆಂಗಳೂರು: ‘ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಕನ್ನಡ ಚಿತ್ರರಂಗ ದನಿ ಎತ್ತಿದೆ. ಕನ್ನಡ ಚಿತ್ರರಂಗವು ಕಾವೇರಿ ವಿಚಾರದಲ್ಲಿ ರೈತರ ಜೊತೆಗಿರಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕನ್ನಡ ಚಿತ್ರರಂಗದ ಒಗ್ಗಟ್ಟು ಚೆನ್ನಾಗಿದೆ. ಭಾಷೆ, ನೆಲ, ಜಲದ ವಿಚಾರವಾಗಿ ಎಲ್ಲರ ಧ್ವನಿ ಒಂದೇ ಆಗಿದೆ. ರಾಜ್ಕುಮಾರ್ ಅವರು ಈ ಹಾದಿಯನ್ನು ಹಾಕಿಕೊಟ್ಟಿದ್ದಾರೆ. ರೈತರ ಋಣ, ಭಾಷೆಯ ಋಣ ನಮ್ಮ ಮೇಲಿದೆ. ಭಾಷೆ ಇದ್ದರೆ ಕನ್ನಡ ಚಿತ್ರರಂಗ ಉಳಿಯುತ್ತದೆ. ಎಲ್ಲ ಕಲಾವಿದರೂ ಈ ಹೋರಾಟಕ್ಕೆ ಬರಲೇಬೇಕು. ವಾಣಿಜ್ಯ ಮಂಡಳಿಯು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಸರ್ಕಾರ ಒಳ್ಳೆಯದನ್ನೇ ಮಾಡುತ್ತಿದೆ’ ಎಂದು ಹೇಳಿದರು.‘ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವಾಗ ಅವೈಜ್ಞಾನಿಕ ತೀರ್ಪು ನೀಡಲಾಗಿದೆ. ಇದರ ವಿರುದ್ಧ ಮಂಡ್ಯ, ಮೈಸೂರಿನ ರೈತರು ಹೋರಾಟ ಮಾಡುತ್ತಿದ್ದಾರೆ. ಸಮಸ್ಯೆ ಬಂದಾಗ ಚಿತ್ರರಂಗ ಸದಾ ಸ್ಪಂದಿಸಿದೆ. ರಾಜ್ಯದ ವಿರುದ್ಧ ತೀರ್ಪು ಬಂದರೆ ರೈತರ ಪರ ನಿಂತು ಹೋರಾಟಕ್ಕೆ ಇಳಿಯಬೇಕಾಗುವುದು ಅನಿವಾರ್ಯವಾಗುತ್ತದೆ’ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದರು.