ಇಡೀ ಸರ್ಕಾರ ದೆಹಲಿಯಲ್ಲಿಲ್ಲ, ಎಲ್ಲ ಸಚಿವರು ರಾಜ್ಯದಲ್ಲೇ ಇದ್ದಾರೆ; ಹರಿಪ್ರಸಾದ್
ನವದೆಹಲಿ: ಇಡೀ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ಬೀಡುಬಿಟ್ಟಿಲ್ಲ, ಮುಖ್ಯಮಂತ್ರಿಗಳು ಮಾತ್ರ ಸಂಸದರ ಸಭೆಗೆ ಹಾಗೂ ಕೇಂದ್ರದಿಂದ ಬರಬೇಕಿರುವ ಅನುದಾನದ ಕುರಿತು ಚರ್ಚಿಸಲು ದೆಹಲಿಗೆ ಬಂದಿದ್ದಾರೆ, ಉಳಿದೆಲ್ಲಾ ಸಚಿವರು ರಾಜ್ಯದಲ್ಲೇ ಇದ್ದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾ

ನವದೆಹಲಿ: ಇಡೀ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ಬೀಡುಬಿಟ್ಟಿಲ್ಲ, ಮುಖ್ಯಮಂತ್ರಿಗಳು ಮಾತ್ರ ಸಂಸದರ ಸಭೆಗೆ ಹಾಗೂ ಕೇಂದ್ರದಿಂದ ಬರಬೇಕಿರುವ ಅನುದಾನದ ಕುರಿತು ಚರ್ಚಿಸಲು ದೆಹಲಿಗೆ ಬಂದಿದ್ದಾರೆ, ಉಳಿದೆಲ್ಲಾ ಸಚಿವರು ರಾಜ್ಯದಲ್ಲೇ ಇದ್ದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದೆಹಲಿ ಪ್ರವಾಸದ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದರು.ಮುಖ್ಯಮಂತ್ರಿಗಳು ದೆಹಲಿಗೆ ಬಂದಿರುವುದು ರಾಜ್ಯ ಸಂಸದರ ಸಭೆ ನಡೆಸಿ, ಕೇಂದ್ರದಿಂದ ಬರಬೇಕಿರುವ ಬಾಕಿ ಅನುದಾನದ ಕುರಿತು ಚರ್ಚೆ ಮಾಡಲು. ಆದರೆ ಕೆಲ ಕೇಂದ್ರ ಸಚಿವರು ಇನ್ನೂ ಭೇಟಿಗೆ ಸಮಯ ನೀಡಿಲ್ಲ ಎಂದರು. ಸಂಪುಟದ ವಿಷಯವಾಗಿ ಈಗಾಗಲೇ ಚರ್ಚೆಯಾಗಿದ್ದು, ಹೈಕಮಾಂಡ್ನಿಂದ ಅನುಮತಿ ಸಿಗಬೇಕಿದೆ ಅಷ್ಟೇ. ಇಂದು ಸಂಜೆ ವೇಳೆಗೆ ಹೈಕಮಾಂಡ್ ಭೇಟಿಗೆ ಸಮಯ ನಿಗದಿಯಾಗುವ ಸಾಧ್ಯತೆಯಿದೆ ಎಂದು ಹರಿಪ್ರಸಾದ್ ತಿಳಿಸಿದರು.ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂತೋಷ್ ಅವರು ಬಿಜೆಪಿಗೆ ಆರ್ಎಸ್ಎಸ್ನಿಂದ ದೇಣಿಗೆಯಾಗಿ ಬಂದವರು. ಕೇವಲ ಬಿಜೆಪಿಯನ್ನು ನಿಯಂತ್ರಿಸುವ ಏಕೈಕ ಉದ್ದೇಶದಿಂದ ಅವರನ್ನು ನಾಗಪುರದಿಂದ ಇಲ್ಲಿಗೆ ಕಳುಹಿಸಲಾಗಿದೆ. ನೋಂದಣಿಯಾಗದ ಯಾವುದೇ ಸಂಘಟನೆಯ ಸಲಹೆ ಅಥವಾ ಸೂಚನೆಗಳನ್ನು ಪಡೆಯುವ ಅಗತ್ಯ ಕಾಂಗ್ರೆಸ್ಗೆ ಇಲ್ಲ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಬದಲು ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದಲ್ಲಿ ಉದ್ಭವಿಸಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಯೋಚಿಸಲಿ ಎಂದು ಹರಿಪ್ರಸಾದ್ ಸಲಹೆ ನೀಡಿದರು.