ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಮತ್ತೊಂದು ʻಚಿನ್ನʼದ ಬೇಟೆ – ದಿಲೀಪ್ಗೆ ಚಿನ್ನ, ಶ್ರೀಶಂಕರ್ಗೆ 2ನೇ ರಜತ ಪದಕ
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತೀಯ ಕ್ರೀಡಾಪಟುಗಳ ಪ್ರಾಬಲ್ಯ ಮುಂದುವರಿದಿದ್ದು, ಪ್ಯಾರಾ ಅಥ್ಲೆಟಿಕ್ಸ್ನಲ್ಲಿ (Para Athletics) ಐತಿಹಾಸಿಕ ಸಾಧನೆ ಮಾಡಿದೆ. A dream finish for India! Dilip Mahadu Gavit blazes to a Games Record of 10.71s to win gold, while Mohammed Basil Morssinganakath clai

ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತೀಯ ಕ್ರೀಡಾಪಟುಗಳ ಪ್ರಾಬಲ್ಯ ಮುಂದುವರಿದಿದ್ದು, ಪ್ಯಾರಾ ಅಥ್ಲೆಟಿಕ್ಸ್ನಲ್ಲಿ (Para Athletics) ಐತಿಹಾಸಿಕ ಸಾಧನೆ ಮಾಡಿದೆ. A dream finish for India! Dilip Mahadu Gavit blazes to a Games Record of 10.71s to win gold, while Mohammed Basil Morssinganakath claims silver in 10.83s, completing a sensational Indian 1-2 in the Men’s 100m Para T47. Watch the Commonwealth Games Glasgow 2026 LIVE &… pic.twitter.com/CjXSFdqb15 — Sony Sports Network (@SonySportsNetwk) July 29, 2026 ಪುರುಷರ ಟಿ47 ವಿಭಾಗದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಮೊದಲೆರಡು ಸ್ಥಾನಗಳನ್ನ ತನ್ನದಾಗಿಸಿಕೊಂಡಿದೆ. ದಿಲೀಪ್ ಮಹದೂ ಗಾವಿತ್ (Dilip Mahadu Gavit) ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನ ಗೆದ್ದರೆ, ಮೊಹಮ್ಮದ್ ಬಸಿಲ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ದಿಲೀಪ್ ಅವರು 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಕ್ಕೇರಿದ್ರೆ, ಮೊಹಮ್ಮದ್ ಬಸಿಲ್ 10.83 ಸೆಕೆಂಡುಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ನ ಕೆವಿನ್ ಸ್ಯಾಂಟೋಸ್ 10.85 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. Silver, Once Again Murali Sreeshankar flies to an 8.09m leap to secure silver in the Men’s Long Jump Final, making it two straight Commonwealth Games silvers Watch the Commonwealth Games Glasgow 2026, LIVE & EXCLUSIVE on Sony Sports Network TV channels & Sony LIV.… pic.twitter.com/KMLHLDlrry — Sony Sports Network (@SonySportsNetwk) July 29, 2026 ಶ್ರೀಶಂಕರ್ಗೆ ಸತತ 2ನೇ ಬೆಳ್ಳಿ ಇನ್ನೂ ಕಾಮನ್ವೆಲ್ತ್ ಗೇಮ್ಸ್ನ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 28 ವರ್ಷದ ಮುರಳಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಸತತ 2ನೇ ಬಾರಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶ್ರೀಶಂಕರ್ ಪಾತ್ರರಾದರು. 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿಯೂ ಬೆಳ್ಳಿ ಗೆದ್ದಿದ್ದರು. ಈಗ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಗೆಲುವಿನ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಭಾರತವು ಪ್ರಸ್ತುತ ಗೇಮ್ಸ್ನಲ್ಲಿ 3 ಚಿನ್ನ, 9 ಬೆಳ್ಳಿ ಮತ್ತು 3 ಕಂಚು ಪದಕ ಬಾಚಿಕೊಂಡಿದೆ.