ಪಶ್ಚಿಮ ಬಂಗಾಳ: ₹28.5 ಕೋಟಿ ನಗದು ಜಪ್ತಿ, ಇಬ್ಬರ ಬಂಧನ
ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಕಲ್ಲು ವ್ಯಾಪಾರಿಯಾಗಿರುವ ಸರ್ಕಾರಿ ಬಸ್ ಮಾಜಿ ಚಾಲಕರೊಬ್ಬರ ಮನೆಯಿಂದ ₹28 ಕೋಟಿ ನಗದು ಮತ್ತು 15 ಕೆ.ಜಿ ಚಿನ್ನವನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.ಶೋಧ ನಡೆದ ಮನೆಯ ಮಾಲೀಕ ಮಿನಾರ್ ಮೊಂಡಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಿಬಿಐ ತನಿಖೆ ನಡೆಸುತ್ತಿರುವ ಬಹುಕೋಟಿ ಮೌಲ್ಯದ ಅಕ್ರಮ ಗೋ ಸಾಗಾಟ

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಕಲ್ಲು ವ್ಯಾಪಾರಿಯಾಗಿರುವ ಸರ್ಕಾರಿ ಬಸ್ ಮಾಜಿ ಚಾಲಕರೊಬ್ಬರ ಮನೆಯಿಂದ ₹28 ಕೋಟಿ ನಗದು ಮತ್ತು 15 ಕೆ.ಜಿ ಚಿನ್ನವನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.ಶೋಧ ನಡೆದ ಮನೆಯ ಮಾಲೀಕ ಮಿನಾರ್ ಮೊಂಡಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಿಬಿಐ ತನಿಖೆ ನಡೆಸುತ್ತಿರುವ ಬಹುಕೋಟಿ ಮೌಲ್ಯದ ಅಕ್ರಮ ಗೋ ಸಾಗಾಟ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿರುವ ಕಲ್ಲು ವ್ಯಾಪಾರಿ ಟುಲ್ಲು ಮೊಂಡಲ್ ಅವರು ಮಿನಾರ್ ಅವರ ಹತ್ತಿರದ ಸಂಬಂಧಿ. ಬಂಧಿತನಾಗಿರುವ ಮತ್ತೊಬ್ಬ ವ್ಯಕ್ತಿ ಟುಲ್ಲು ಅವರ ಮಾನೇಜರ್ ಆಗಿದ್ದ.ಟುಲ್ಲು ಬಿರ್ಭೂಮ್ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಅವರನ್ನು ‘ಮರಳು ಮಾಫಿಯಾ’ ನಿರ್ವಹಿಸುವವ ಎಂದು ಹೇಳಿದ್ದರು.ಕೇಂದ್ರ ಸಶಸ್ತ್ರ ಪಡೆಗಳ ಭದ್ರತೆಯೊಂದಿಗೆ ಮಿನಾರ್ ಮೊಂಡಲ್ ಅವರಿಗೆ ಸೇರಿದ ಎರಡು ಅಂತಸ್ತಿನ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ₹21.5 ಕೋಟಿ ಮೌಲ್ಯದ ತಲಾ 1 ಕೆ.ಜಿ ತೂಕದ 14 ಚಿನ್ನದ ಗಟ್ಟಿ ಮತ್ತು ತಲಾ 100 ಗ್ರಾಂ ತೂಕದ 10 ಚಿನ್ನದ ಬಿಸ್ಕತ್ಗಳು ಪತ್ತೆಯಾಗಿದೆ.ಬಂಗಾಳದ ಸರ್ಕಾರಿ ಬಸ್ನಲ್ಲಿ ಚಾಲಕನಾಗಿದ್ದ ಮಿನಾರ್ ತನ್ನ ಸಂಬಂಧಿಕರು ನಡೆಸುತ್ತಿದ್ದ ಕಲ್ಲು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಕೆಲ ವರ್ಷಗಳ ಹಿಂದೆ ಉದ್ಯೋಗವನ್ನು ತೊರೆದಿದ್ದರು.‘ಕಲ್ಲು ಗಣಿಯಿಂದ ಬರುವ ಟ್ರಕ್ಗಳು ಸಾಗುವ ರಸ್ತೆಯಲ್ಲಿನ ಟೋಲ್ಗೇಟ್ವೊಂದರ ಉಸ್ತುವಾರಿ ಮಿನಾರ್ ಅವರದ್ದಾಗಿದ್ದು, ಅವರು ಸಾಗಾಣೆದಾರರಿಂದ ಹಣ ಸಂಗ್ರಹಿಸುತ್ತಾರೆ. ಸರ್ಕಾರದ ಖಜಾನೆಗೆ ಸೇರಬೇಕಾದ ಬೃಹತ್ ಮೊತ್ತದ ಹಣವನ್ನು ಅವರು ನೀಡದೇ ವಂಚಿಸಿರುವ ಸಾಧ್ಯತೆ ಇದೆ. ಜಪ್ತಿಯಾಗಿರುವ ಹಣವು ಅದರ ಒಂದು ಭಾಗ’ ಎಂದು ಮೂಲಗಳು ತಿಳಿಸಿವೆ.