ನನ್ನ ದೇಶಕ್ಕೆ ಹಿಂತಿರುಗಿದ ಭಾವ ಮೂಡುತ್ತಿದೆ: ತಸ್ಲೀಮಾ ನಸ್ರೀನ್
ಕೋಲ್ಕತ್ತ: ‘ನನ್ನ ದೇಶಕ್ಕೆ ವಾಪಸಾಗುತ್ತಿದ್ದೇನೆ ಎನ್ನುವಂಥ ಭಾವ ಮೂಡುತ್ತಿದೆ. ಗಡಿ ಅಥವಾ ಮುಳ್ಳಿನ ತಂತಿಬೇಲಿಯು ನನ್ನ ಹೃದಯದಲ್ಲಿರುವ ಬಂಗಾಳವನ್ನು ವಿಭಜಿಸಲೇ ಇಲ್ಲ. ನಾನು ಬಹಳ ಸಂತೋಷವಾಗಿ ಮತ್ತು ಅಷ್ಟೇ ನೋವಿನಿಂದ ಮರಳುತ್ತಿದ್ದೇನೆ.– 19 ವರ್ಷಗಳ ಬಳಿಕ ಮೊದಲ ಬಾರಿಗೆ ಆಗಸ್ಟ್ 1ರಂದು ಕೋಲ್ಕತ್ತಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿರುವ ಲೇಖಕಿ ತಸ್ಲೀಮ

ಕೋಲ್ಕತ್ತ: ‘ನನ್ನ ದೇಶಕ್ಕೆ ವಾಪಸಾಗುತ್ತಿದ್ದೇನೆ ಎನ್ನುವಂಥ ಭಾವ ಮೂಡುತ್ತಿದೆ. ಗಡಿ ಅಥವಾ ಮುಳ್ಳಿನ ತಂತಿಬೇಲಿಯು ನನ್ನ ಹೃದಯದಲ್ಲಿರುವ ಬಂಗಾಳವನ್ನು ವಿಭಜಿಸಲೇ ಇಲ್ಲ. ನಾನು ಬಹಳ ಸಂತೋಷವಾಗಿ ಮತ್ತು ಅಷ್ಟೇ ನೋವಿನಿಂದ ಮರಳುತ್ತಿದ್ದೇನೆ.– 19 ವರ್ಷಗಳ ಬಳಿಕ ಮೊದಲ ಬಾರಿಗೆ ಆಗಸ್ಟ್ 1ರಂದು ಕೋಲ್ಕತ್ತಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರ ಮಾತಿದು. ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಪ್ರಖ್ಯಾತ ಲೇಖಕ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.‘ಕೋಲ್ಕತ್ತವು ನನಗೆ ಕೇವಲ ನಾನು ವಾಸಿಸುತ್ತಿದ್ದ ನಗರವಾಗಿರಲಿಲ್ಲ. ಇಲ್ಲಿ, ನನ್ನ ಮನೆ, ಸ್ನೇಹಿತರು, ನನ್ನ ಬರವಣಿಗೆಯ ಓದುಗರು ಇದ್ದರು. ನಾನು ಇಲ್ಲಿಗೆ ಸೇರಿದವಳು ಎನ್ನುವ ಭಾವನೆ ಇತ್ತು. ಬಹಳ ಇಷ್ಟಪಟ್ಟು ನಾನು ಕೋಲ್ಕತ್ತ ಬಿಟ್ಟು ಹೋಗಿರಲಿಲ್ಲ. ರಾಜ್ಯ ಬಿಡುವಂತೆ ನನಗೆ ಒತ್ತಾಯ ಮಾಡಲಾಗಿತ್ತು. ನಾನು ಮತ್ತೊಮ್ಮೆ ಇಲ್ಲಿಗೆ ವಾಪಸ್ ಬರುತ್ತೇನೆ ಎನ್ನುವ ಆಶಾವಾದವಿತ್ತು’ ಎಂದರು.‘ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವ ಮತ್ತು ಪ್ರತಿರೋಧದ ಧ್ವನಿಯ ಸಂರಕ್ಷಣೆಯನ್ನು ನನ್ನ ಈ ಭೇಟಿಯು ಸಾರಿ ಹೇಳುತ್ತದೆ. ನನ್ನ ಅಭಿಪ್ರಾಯವನ್ನು ಮುಖ್ಯಮಂತ್ರಿ ಅಧಿಕಾರಿ ಅವರು ಒಪ್ಪದೆ ಇರಬಹುದು. ಆದರೆ, ನನ್ನಂಥ ಪ್ರತಿರೋಧದ ಧ್ವನಿ ಇರುವ ಲೇಖಕಿಯ ಸ್ವಾತಂತ್ರ್ಯವನ್ನು ಸಂರಕ್ಷಿಸಿ, ಗೌರವಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದರು.ತಸ್ಲೀಮಾ ಅವರ ‘ದ್ವಿಖಂಡತಾ’ ಪುಸ್ತಕದ (2003) ಕಾರಣ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಕಾರಣದಿಂದ 2007ರಲ್ಲಿ ಅಂದಿನ ಪಶ್ಚಿಮ ಬಂಗಾಳ ಸರ್ಕಾರ ಒತ್ತಾಯಪೂರ್ವಕವಾಗಿ ಕೋಲ್ಕತ್ತದಿಂದ ಹೊರಹೋಗುವಂತೆ ತಸ್ಲೀಮಾ ಅವರಿಗೆ ಹೇಳಿತ್ತು. 2003ರಲ್ಲಿಯೇ ಪುಸ್ತಕವನ್ನು ಸರ್ಕಾರ ನಿಷೇಧಿಸಿತ್ತು.ತಸ್ಲೀಮಾ ನಸ್ರೀನ್ ಲೇಖಕಿಬೆದರಿಕೆಗಳು ಫತ್ವಾಗಳು ಕೆಲವು ಸಮಯದವರೆಗೆ ಒಬ್ಬ ಬರಹಗಾರ್ತಿಯನ್ನು ಗಡಿಪಾರು ಮಾಡಬಹುದು. ಆದರೆ ಆಕೆಯ ಚಿಂತನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ