ಝೀರೋ ಟ್ರಾಫಿಕ್ನಲ್ಲಿ ಸಾಗಿಸುತ್ತಿದ್ದಾಗ ಅಂಬುಲೆನ್ಸ್ ಟೈರ್ ಪಂಕ್ಚರ್ – ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವು
ದಾವಣಗೆರೆ: ಅಂಬುಲೆನ್ಸ್ನಲ್ಲಿ ಝೀರೋ ಟ್ರಾಫಿಕ್ನಲ್ಲಿ ಸಾಗಿಸಿದರೂ ಪ್ರಯತ್ನ ವಿಫಲವಾಗಿ ಶಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತ ದುರ್ದೈವಿ. ಕಳೆದ 3 ತಿಂಗಳ ಹಿಂದೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರ

ದಾವಣಗೆರೆ: ಅಂಬುಲೆನ್ಸ್ನಲ್ಲಿ ಝೀರೋ ಟ್ರಾಫಿಕ್ನಲ್ಲಿ ಸಾಗಿಸಿದರೂ ಪ್ರಯತ್ನ ವಿಫಲವಾಗಿ ಶಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತ ದುರ್ದೈವಿ. ಕಳೆದ 3 ತಿಂಗಳ ಹಿಂದೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾಗೆ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತ್ತು. ಕಳೆದ ಕೆಲವು ದಿನದಿಂದ ಶ್ವಾಸಕೋಶ ಸೊಂಕಿನಿಂದ ಮಗು ಬಳಲುತ್ತಿತ್ತು. ಕಳೆದ ಒಂದು ವಾರದಿಂದ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ತುರ್ತು ಚಿಕಿತ್ಸೆ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಆಗಲು ವೈದ್ಯರ ಸಲಹೆ ನೀಡಿದರು. ತುರ್ತು ಚಿಕಿತ್ಸೆ ಹಿನ್ನೆಲೆ ಝೀರೋ ಟ್ರಾಫಿಕ್ನಲ್ಲಿ ಮಣಿಪಾಲ್ಗೆ ಶಿಫ್ಟ್ ಮಾಡಲಾಗುತ್ತಿತ್ತು. ಆಸ್ಪತ್ರೆಗೆ ಶಿಫ್ಟ್ ಆಗುವ ಮುನ್ನವೇ ಮಗು ಮೃತಪಟ್ಟಿದೆ. ಹಸುಗೂಸು ಉಳಿಸಲು ದಾವಣಗೆರೆಯಿಂದ ಮಣಿಪಾಲ್ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹೆಚ್.ಕಡದಕಟ್ಟೆ ಬಳಿ ಅಂಬುಲೆನ್ಸ್ ಟೈರ್ ಪಂಕ್ಚರ್ ಆಯಿತು. ಮಗು ಉಳಿಸಲು ಪೋಷಕರು ಹಾಗೂ ಪೊಲೀಸ್ ಇಲಾಖೆ ಶತಾಯಗತಾಯ ಪ್ರಯತ್ನ ಮಾಡಿದರು. ಹೊನ್ನಾಳಿ ಸಿಪಿಐ ಸುನೀಲ್ ಕುಮಾರ್ ಹಾಗೂ ಸ್ಥಳೀಯರಿಂದ ಟೈರ್ ಬದಲಾಯಿಸಲಾಯಿತು. ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಶಿವಮೊಗ್ಗ ಸರ್ಜಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಮಗು ಉಳಿಸಲು ಪೊಲೀಸರ ಶತಪ್ರಯತ್ನ ಪಟ್ಟರೂ ಫಲಿಸಲಿಲ್ಲ.