ಟಿಬೆಟ್ನಲ್ಲಿ ಡ್ರೋನ್ ಕೇಂದ್ರ ಆರಂಭಿಸಿದ ಚೀನಾ
ಬೀಜಿಂಗ್: ಗಡಿಭಾಗದಲ್ಲಿ ಭದ್ರತೆ, ವ್ಯಾಪಾರ ಮತ್ತು ಸಾಗಣೆ ವ್ಯವಸ್ಥೆಯನ್ನು ಬಲಪಡಿಸಲು ಮಾನವರಹಿತ ವೈಮಾನಿಕ ಸಾಧನಗಳನ್ನು ನಿಯೋಜಿಸುವ ಉದ್ದೇಶದಿಂದ ಚೀನಾವು ಟಿಬೆಟ್ನಲ್ಲಿನ ಮೌಂಟ್ ಎವರೆಸ್ಟ್ ಶಿಖರದ ಬಳಿ ಡ್ರೋನ್ ಸಂಶೋಧನೆ ಮತ್ತು ಅಭಿವೃಧ್ಧಿ ಕೇಂದ್ರವನ್ನು ಆರಂಭಿಸಿದೆ.ವಿಶ್ವದ ಚಾವಣಿ ಎಂದು ಕರೆಯಲಾಗುವ ಟಿಬೆಟ್ ಸಮುದ್ರ ಮಟ್ಟದಿಂದ 4 ಸಾವಿರ ಮೀಟರ್ ಎತ್ತರದಲ್ಲಿದ

ಬೀಜಿಂಗ್: ಗಡಿಭಾಗದಲ್ಲಿ ಭದ್ರತೆ, ವ್ಯಾಪಾರ ಮತ್ತು ಸಾಗಣೆ ವ್ಯವಸ್ಥೆಯನ್ನು ಬಲಪಡಿಸಲು ಮಾನವರಹಿತ ವೈಮಾನಿಕ ಸಾಧನಗಳನ್ನು ನಿಯೋಜಿಸುವ ಉದ್ದೇಶದಿಂದ ಚೀನಾವು ಟಿಬೆಟ್ನಲ್ಲಿನ ಮೌಂಟ್ ಎವರೆಸ್ಟ್ ಶಿಖರದ ಬಳಿ ಡ್ರೋನ್ ಸಂಶೋಧನೆ ಮತ್ತು ಅಭಿವೃಧ್ಧಿ ಕೇಂದ್ರವನ್ನು ಆರಂಭಿಸಿದೆ.ವಿಶ್ವದ ಚಾವಣಿ ಎಂದು ಕರೆಯಲಾಗುವ ಟಿಬೆಟ್ ಸಮುದ್ರ ಮಟ್ಟದಿಂದ 4 ಸಾವಿರ ಮೀಟರ್ ಎತ್ತರದಲ್ಲಿದೆ. ಈ ತಂಪಾದ ಪ್ರದೇಶದಲ್ಲಿ ಆಮ್ಲಜನಕದ ಕೊರೆತೆ ಇದೆ. ಒರಟಾದ ನೆಲವನ್ನು ಹೊಂದಿರುವ ಮತ್ತು ಕ್ಷಿಪ್ರವಾಗಿ ಹವಮಾನ ಬದಲಾವಣೆಯಾಗುವ ಈ ಪ್ರದೇಶ ಡ್ರೋನ್ ಅಭಿವೃದ್ಧಿಗೆ ಸೂಕ್ತವಾಗಿದೆ ಎಂದು ಚೀನಾದ ಎಂಜಿನಿಯರ್ಗಳು ಅಭಿಪ್ರಾಯಪಟ್ಟಿದ್ದಾರೆ.ಎತ್ತರದ ಪ್ರದೇಶದಲ್ಲಿ ವೈಮಾನಿಕ ಸಾಧನೆಗಳ ನಿಯೋಜನೆ, ಅಭಿವೃದ್ಧಿ ಮತ್ತು ಸಂಶೋಧನೆಗಾಗಿಯೇ ಪೂರ್ಣವಾಗಿ ಮೀಸಲಾಗಿರುವ ಡ್ರೋನ್ ಸಂಶೋಧನೆ ಮತ್ತು ಅಭಿವೃಧ್ಧಿ ಕೇಂದ್ರವನ್ನು ಕ್ಷಿಜಾಂಗ್ (ಟಿಬೆಟ್) ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.ತಂತ್ರಜ್ಞಾನ ವಲಯದಲ್ಲಿ ಅಮೆರಿಕ ಮತ್ತು ಚೀನಾದ ನಡುವಿನ ಸ್ಪರ್ಧೆಯು ಈ ಮೂಲಕ ಮತ್ತಷ್ಟು ತೀವ್ರಗೊಂಡಿದೆ.