ಕಾವೇರಿ ನೀರು ಹೋರಾಟದ ಕನ್ನಡಿಗರ ಕಿಚ್ಚಿಗೆ ಫಿಲ್ಮ್ ಚೇಂಬರ್ ಬೆಂಬಲ
ಕಾವೇರಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಕನ್ನಡ ಜನತೆಯ ಪರ ಸಿನಿಮಾ ರಂಗ ಧ್ವನಿಯೆತ್ತಿದೆ. ನಾಡು-ನುಡಿ ವಿಚಾರವಾಗಿ ಯಾವುದೇ ಹೋರಾಟ ನಡೆದರೂ, ಅಲ್ಲಿ ಸಿನಿ ಕಲಾವಿದರು ಕೈ ಸೇರಿದರೆ ಧ್ವನಿ ಜೋರಾಗಿರುತ್ತೆ ಅನ್ನೋ ಮಾತಿದೆ. ಅದರಂತೆ ಮತ್ತೊಮ್ಮೆ ಕಾವೇರಿ ನೀರಿಗಾಗಿ ಹೋರಾಡುವ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ತಮಿಳುನಾಡಿಗೆ ಪ್ರತಿನಿತ

ಕಾವೇರಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಕನ್ನಡ ಜನತೆಯ ಪರ ಸಿನಿಮಾ ರಂಗ ಧ್ವನಿಯೆತ್ತಿದೆ. ನಾಡು-ನುಡಿ ವಿಚಾರವಾಗಿ ಯಾವುದೇ ಹೋರಾಟ ನಡೆದರೂ, ಅಲ್ಲಿ ಸಿನಿ ಕಲಾವಿದರು ಕೈ ಸೇರಿದರೆ ಧ್ವನಿ ಜೋರಾಗಿರುತ್ತೆ ಅನ್ನೋ ಮಾತಿದೆ. ಅದರಂತೆ ಮತ್ತೊಮ್ಮೆ ಕಾವೇರಿ ನೀರಿಗಾಗಿ ಹೋರಾಡುವ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ 3,500 ಟಿಎಂಟಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವನ್ನು ಕನ್ನಡಿಗರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಕನ್ನಡಪರ ಸಂಘಟನೆಗಳು ಈಗಾಗ್ಲೇ ಬೀದಿಗಿಳಿದು ಹೋರಾಟ ಮಾಡುತ್ತಿದೆ. ವಿವಿಧ ಕನ್ನಡಪರ ಸಂಘಟನೆಗಳು ಆಯಾ ಜಾಗದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ. ಇದೀಗ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ಘೋಷಿಸಿದೆ. ಗುರುವಾರ ಮಧ್ಯಾಹ್ನ 3:30ಕ್ಕೆ ಸಭೆ ನಡೆಸಿ ಬೆಂಬಲ ಘೋಷಿಸಿದ ಫಿಲ್ಮ್ ಚೇಂಬರ್, ಮುಂದೆ ಕನ್ನಡಪರ ಸಂಘಟನೆಗಳು ಯಾವುದೇ ರೀತಿಯ ಹೋರಾಟಕ್ಕೆ ಕರೆ ಕೊಟ್ಟರೂ ತಾವು ಸಿದ್ಧ ಅನ್ನೋದಾಗಿ ತಿಳಿಸಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಸೇರಿದಂತೆ ಉಳಿದ ಪದಾಧಿಕಾರಿಗಳು ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್ ಹಾಗೂ ಪ್ರದರ್ಶಕರ ವಲಯ, ವಿತರಕರ ವಲಯ ಹಾಗೂ ಒಕ್ಕೂಟ ಸೇರಿದಂತೆ ಫಿಲ್ಮ್ ಚೇಂಬರ್ ಅಡಿಯಲ್ಲಿ ಬರುವ ಎಲ್ಲಾ ಅಂಗ ಸಂಸ್ಥೆಗಳೂ ಬೆಂಬಲ ಘೋಷಿಸಿದೆ. ಭಾಷೆ, ನೆಲ, ಜಲದ ವಿಚಾರವಾಗಿ ಹೋರಾಟದಲ್ಲಿ ಕನ್ನಡ ಚಿತ್ರೋದ್ಯಮ ಯಾವತ್ತೂ ಹಿಂಜರಿಯೋದಿಲ್ಲ ಎಂದಿದ್ದಾರೆ ಫಿಲ್ಮ್ ಚೇಂಬರ್ ಅದ್ಯಕ್ಷೆ ಜಯಮಾಲಾ. ಡಾ.ರಾಜ್ಕುಮಾರ್ ತೋರಿಸಿಕೊಟ್ಟ ಮಾರ್ಗದಲ್ಲೇ ನಾವು ನಡೆಯುತ್ತೇವೆ ಎಂದು ಘೋಷಿಸಿದ್ದಾರೆ. ಜೊತೆಗೆ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಯಾವುದೇ ರೀತಿಯ ಹೋರಾಟವಾಗಿದ್ದರೂ ತಾರೆಗಳು ಜೊತೆಗೂಡಿ ಬರುತ್ತಾರೆ ಅನ್ನೋ ಭರವಸೆ ಕೊಟ್ಟಿದ್ದಾರೆ. ಇನ್ನು ಸಭೆಯಲ್ಲಿ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ/ ಕನ್ನಡಪರ ಹೋರಾಟಗಾರ ಕೂಡ ಭಾಗಿಯಾಗಿ ಮಾತನಾಡಿ, ಮುಂದೆ ಯಾವುದೇ ಪ್ರಕಾರದ ಹೋರಾಟಗಳು ಬೇಕಾದರೂ ಫಿಲ್ಮ್ ಚೇಂಬರ್ ಬೆಂಬಲ ನಮಗಿರಲಿದೆ ಎಂದು ಘೋಷಿಸಿದ್ದಾರೆ. ಒಟ್ನಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಫಿಲ್ಮ್ ಚೇಂಬರ್ ಬೆಂಬಲ ಘೋಷಿಸಿದೆ.