ಕೃಷ್ಣಮೃಗಕ್ಕೆ ಮೆಕ್ಕೆಜೋಳ, ಹುರುಳಿ ಬಿತ್ತನೆ ರೈತರ ಬೆಳೆ ಸಂರಕ್ಷಿಸಲು
ಕೊಡಿಗೇನಹಳ್ಳಿ: ಕೃಷ್ಣಮೃಗಗಳ ವಲಸೆ ತಡೆಯಲು ಹಾಗೂ ರೈತರ ಬೆಳೆ ಸಂರಕ್ಷಿಸಲಿಕ್ಕಾಗಿ ಅರಣ್ಯ ಇಲಾಖೆಯಿಂದ ವನ್ಯಧಾಮದ 70 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಅಮಟೆ, ಹುರುಳಿ ಬಿತ್ತನೆ ಮಾಡಲಾಗಿದೆ.ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮ 800 ಎಕರೆಯಲ್ಲಿದೆ. ಇಲ್ಲಿರುವ ಕೃಷ್ಣಮೃಗಗಳು ಆಹಾರದ ಕೊರತೆಯಿಂದಾಗಿ ವಲಸೆ ಹೋಗಿ ಬರುವ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮ

ಕೊಡಿಗೇನಹಳ್ಳಿ: ಕೃಷ್ಣಮೃಗಗಳ ವಲಸೆ ತಡೆಯಲು ಹಾಗೂ ರೈತರ ಬೆಳೆ ಸಂರಕ್ಷಿಸಲಿಕ್ಕಾಗಿ ಅರಣ್ಯ ಇಲಾಖೆಯಿಂದ ವನ್ಯಧಾಮದ 70 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಅಮಟೆ, ಹುರುಳಿ ಬಿತ್ತನೆ ಮಾಡಲಾಗಿದೆ.ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮ 800 ಎಕರೆಯಲ್ಲಿದೆ. ಇಲ್ಲಿರುವ ಕೃಷ್ಣಮೃಗಗಳು ಆಹಾರದ ಕೊರತೆಯಿಂದಾಗಿ ವಲಸೆ ಹೋಗಿ ಬರುವ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮಗಳ ರೈತರ ಬೆಳೆ ನಾಶ ಮಾಡುತ್ತಿದ್ದವು. ರಸ್ತೆ ದಾಟುವ ವೇಳೆ ಕೆಲವೊಮ್ಮೆ ವಾಹನಗಳು ಡಿಕ್ಕಿ ಹೊಡೆಯುತ್ತಿದ್ದರಿಂದ ಮೃತಪಡುತ್ತಿದ್ದವು.ಪ್ರತಿ ವರ್ಷವೂ ಮಳೆಗಾಲದಲ್ಲಿ ವನ್ಯಧಾಮ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿನ ಮೆಕ್ಕೆಜೋಳ, ಶೇಂಗಾ, ರಾಗಿ, ತೊಗರಿ, ಅವರೆ, ಅಲಸಂದೆ, ರೇಷ್ಮೆ, ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಗಳಿಗೆ ಕೃಷ್ಣಮೃಗಗಳು ಹಿಂಡು ಹಿಂಡಾಗಿ ದಾಳಿ ನಡೆಸಿ ಮೇಯುತ್ತಿದ್ದರಿಂದ ರೈತರಿಗೆ ಸಂಕಷ್ಟ, ಬೆಳೆ ನಷ್ಟ ಕಟ್ಟಿಟ್ಟ ಬುತ್ತಿ ಆಗಿತ್ತು. ಇದೀಗ ನಮ್ಮ ಸಮಸ್ಯೆಗೆ ಸ್ಪಂದಿಸಿದ ಅರಣ್ಯ ಇಲಾಖೆ ಪರಿಹಾರ ಒದಗಿಸಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎನ್ನುತ್ತಾರೆ ರೈತ ಮುಖಂಡ ಚಿಕ್ಕಣ್ಣ ಮುತ್ತರಾಯನಹಳ್ಳಿ.ವನ್ಯಧಾಮದ ಒಳಗೆ ಮೆಕ್ಕೆಜೋಳ, ಹುರುಳಿ ಬಿತ್ತಲಾಗಿದೆ. ಅಮಟೆ ಗಿಡಗಳನ್ನು ನಾಟಿ ಮಾಡಲಾಗಿದೆ. ಜಿಂಕೆಗಳಿಗೆ ಇಷ್ಟವಾದ ಈ ಬೆಳೆಗಳನ್ನು ಹುಲ್ಲುಗಾವಲಿನಲ್ಲೇ ಬೆಳೆಸುವುದರಿಂದ ಅವು ಆಹಾರಕ್ಕಾಗಿ ಹೊರಗೆ ಹೋಗುವ ಅಗತ್ಯವಿರುವುದಿಲ್ಲ.ಹುರುಳಿ ಮತ್ತು ಅಮಟೆ ಬೇಗ ಬೆಳೆಯುವ ಜೊತೆಗೆ ಪೌಷ್ಟಿಕಾಂಶವನ್ನೂ ನೀಡುತ್ತವೆ. ಮೆಕ್ಕೆಜೋಳ ಜಿಂಕೆಗಳ ನೆಚ್ಚಿನ ಆಹಾರವಾಗಿರುವುದರಿಂದ ಅವು ವನ್ಯಧಾಮದಲ್ಲೇ ಉಳಿಯುತ್ತವೆ. ಆದರೆ ಸಕಾಲಕ್ಕೆ ಮಳೆ ಬಾರದಿರುವುದರಿಂದ ಹುಲಸಾಗಿ ಬೆಳೆದಿದ್ದ ಪೈರು ಬಾಡುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.– ದಯಾನಂದ್, ರೈತ, ಮೈದನಹೊಸಹಳ್ಳಿನಮ್ಮದು ಮಳೆಯಾಶ್ರಿತ ಪ್ರದೇಶ. ಮಳೆಯನ್ನೇ ನಂಬುವ ಬದಲು ಕೊಳವೆಬಾವಿಗಳಲ್ಲಿ ಬರುವ ನೀರಿಗೆ ಸ್ಪ್ರಿಂಕ್ಲರ್ ಅಳವಡಿಸಿದರೆ, ಬಿತ್ತನೆ ಮಾಡಿರುವ ಪ್ರದೇಶದಲ್ಲಿನ ಬೆಳೆಯನ್ನು ಉಳಿಸಿ ಸಂರಕ್ಷಿಸಬಹುದು.