ರಾಹುಲ್ ಕುರಿತು ಅವಹೇಳನಕಾರಿ ವಿಡಿಯೊ: ಇನ್ಸ್ಟಾಗ್ರಾಂ ಖಾತೆದಾರರ ವಿರುದ್ಧ FIR
ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ, ಅಶ್ಲೀಲ ವಿಡಿಯೊ ಮತ್ತು ಕಾಮೆಂಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಮೂವರು ಇನ್ಸ್ಟಾಗ್ರಾಂ ಖಾತೆದಾರರ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕೆಪಿಸಿಸಿ ಕಾನೂನು ಘಟಕದ ಸದಸ್ಯ ಸಿದ್ದರಾಜು ಎಂಬವರು ಜುಲೈ 27ರಂದು ನೀಡ

ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಅವಹೇಳನಕಾರಿ, ಅಶ್ಲೀಲ ವಿಡಿಯೊ ಮತ್ತು ಕಾಮೆಂಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಮೂವರು ಇನ್ಸ್ಟಾಗ್ರಾಂ ಖಾತೆದಾರರ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕೆಪಿಸಿಸಿ ಕಾನೂನು ಘಟಕದ ಸದಸ್ಯ ಸಿದ್ದರಾಜು ಎಂಬವರು ಜುಲೈ 27ರಂದು ನೀಡಿದ ದೂರಿನ ಆಧಾರದ ಮೇರೆಗೆ ground.reality_india ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಜುಲೈ 16ರಂದು "Why is the Opposition party silent" ಎಂಬ ಶೀರ್ಷಿಕೆಯೊಂದಿಗೆ 30 ಸೆಕೆಂಡ್ಗಳ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಶ್ಲೀಲ ಹೇಳಿಕೆಗಳನ್ನು ಬಳಸಲಾಗಿದೆ.ಇದೇ ವಿಡಿಯೊಗೆ raashtravaadhi2 ಹಾಗೂ manvithamanojsamanvi ಎಂಬ ಇನ್ಸ್ಟಾಗ್ರಾಂ ಖಾತೆಗಳಿಂದ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಕಾಮೆಂಟ್ಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.
Read the complete story at Prajavani