ಪಿಒಕೆಯಲ್ಲಿ ಪ್ರತಿಭಟನೆ: ಪರಿಸ್ಥಿತಿ ಉದ್ವಿಗ್ನ
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾವಲ್ಕೋಟ್ನಲ್ಲಿ ನಿಷೇಧಿತ ಸಂಘಟನೆ ಜಂಟಿ ಅವಾಮಿ ಕ್ರಿಯಾ ಸಮಿತಿ(ಜೆಎಎಸಿ) ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಉದ್ವಿಗ್ನತೆ ತೀವ್ರಗೊಂಡಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಧಾನಸಭೆಯಲ್ಲಿರುವ 12 ನಿರಾಶ್ರಿತರ ಮೀಸಲು ಕ್ಷೇತ್ರಗಳನ್ನು ರದ್ದುಗೊಳಿಸಬೇಕು ಎಂದು ಜೆಎಸಿಸಿ ಮತ್ತು ಇನ್
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾವಲ್ಕೋಟ್ನಲ್ಲಿ ನಿಷೇಧಿತ ಸಂಘಟನೆ ಜಂಟಿ ಅವಾಮಿ ಕ್ರಿಯಾ ಸಮಿತಿ(ಜೆಎಎಸಿ) ಹಾಗೂ ಭದ್ರತಾ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಉದ್ವಿಗ್ನತೆ ತೀವ್ರಗೊಂಡಿದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಧಾನಸಭೆಯಲ್ಲಿರುವ 12 ನಿರಾಶ್ರಿತರ ಮೀಸಲು ಕ್ಷೇತ್ರಗಳನ್ನು ರದ್ದುಗೊಳಿಸಬೇಕು ಎಂದು ಜೆಎಸಿಸಿ ಮತ್ತು ಇನ್ನಿತರ ಸಂಘಟನೆಗಳು ಆಗ್ರಹಿಸಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಲೇ ಇವೆ. ಈ ನಡುವೆಯೇ ಪಿಒಕೆಯಲ್ಲಿ ಸ್ಥಳೀಯ ಚುನಾವಣೆಗಳು ನಡೆಯುತ್ತಿರುವುದು ಪ್ರತಿಭಟನಕಾರರನ್ನು ಮತ್ತಷ್ಟು ಕೆರಳಿಸಿದೆ. ಸೋಮವಾರದಿಂದೀಚೆಗೆ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದ್ದು, ಹಲವು ಸಾವು–ನೋವುಗಳು ಸಂಭವಿಸಿದೆ. ಈ ನಡುವೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಜಾಫರ್ಬಾದ್ನಿಂದ ಇಸ್ಲಾಮಾಬಾದ್ವರೆಗೆ ಜಾಥಾ ನಡೆಸಲು ಜೆಎಎಸಿ ನಿರ್ಧರಿಸಿದೆ.ಜಂಟಿ ಕ್ರಿಯಾ ಸಮಿತಿ ಮಾಹಿತಿ ಪ್ರಕಾರ, ಈವರೆಗಿನ ಸಂಘರ್ಷದಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ.
Read the complete story at Prajavani