ಮೂವರು ಭಾರತೀಯರ ಕಿಡ್ನ್ಯಾಪ್ ಮಾಡಿ ಸುಲಿಗೆಗೆ ಯತ್ನ – ಐವರು ಭಾರತೀಯರು ಥೈಲ್ಯಾಂಡ್ನಲ್ಲಿ ಲಾಕ್
ಬ್ಯಾಂಕಾಕ್: ಮೂವರು ಭಾರತೀಯರನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಐವರು ಭಾರತೀಯರನ್ನು ಥಾಯ್ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ದೇಶವನ್ನು ತೊರೆಯಲು ಯತ್ನಿಸುತ್ತಿದ್ದಾಗ ಶಂಕಿತರನ್ನು ಬ್ಯಾಂಕಾಕ್ನ ಖ್ಲಾಂಗ್ ಟಾನ್ ಜಿಲ್ಲೆಯ ಹೋಟೆಲ್ನಲ್ಲಿ ಬಂಧಿಸಲಾಯಿತು. ಆರೋಪಿಗಳು ಮೂವರು ಭಾರತೀಯರನ್ನು ರಜಾ ಪ್ಯಾಕೇಜ್ನ ನೆಪದಲ್ಲಿ ಥೈಲ್ಯಾಂಡ್ಗೆ ಕರೆಸಿ ನಂತರ

ಬ್ಯಾಂಕಾಕ್: ಮೂವರು ಭಾರತೀಯರನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಐವರು ಭಾರತೀಯರನ್ನು ಥಾಯ್ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ದೇಶವನ್ನು ತೊರೆಯಲು ಯತ್ನಿಸುತ್ತಿದ್ದಾಗ ಶಂಕಿತರನ್ನು ಬ್ಯಾಂಕಾಕ್ನ ಖ್ಲಾಂಗ್ ಟಾನ್ ಜಿಲ್ಲೆಯ ಹೋಟೆಲ್ನಲ್ಲಿ ಬಂಧಿಸಲಾಯಿತು. ಆರೋಪಿಗಳು ಮೂವರು ಭಾರತೀಯರನ್ನು ರಜಾ ಪ್ಯಾಕೇಜ್ನ ನೆಪದಲ್ಲಿ ಥೈಲ್ಯಾಂಡ್ಗೆ ಕರೆಸಿ ನಂತರ ಸುಲಿಗೆಗಾಗಿ ಬಂಧಿಯಾಗಿರಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಶಂಕಿತರನ್ನು ಅವತಾರ್ ಸಿಂಗ್ (38), ಜಗಜಿತ್ ಸಿಂಗ್ (38), ರಾಮಬಾಲಕ್ ಕುಮಾರ್ (24), ಸುಖಬೀರ್ ಸಿಂಗ್ (37) ಮತ್ತು ಕುಲ್ರಾ ಸಿಂಗ್ (27) ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ಚಾಟ್ ಅಪ್ಲಿಕೇಶನ್ ಮೂಲಕ ಸಂಪರ್ಕ ಹೊಂದಿದ್ದ ಪಾಕಿಸ್ತಾನಿ ಪ್ರಜೆಯೊಬ್ಬ ಮೂವರು ಭಾರತೀಯರನ್ನು ಅಪಹರಿಸಲು ಸೂಚಿಸಿದ್ದ. ಆಪಾದಿತ ಮಾಸ್ಟರ್ ಮೈಂಡ್ ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತರಿಂದ ಕ್ರಿಪ್ಟೋಕರೆನ್ಸಿ ಪಾವತಿಗಳನ್ನು ಸುಲಿಗೆ ಮಾಡಲು ಉದ್ದೇಶಿಸಿದ್ದ. ಸಂತ್ರಸ್ತರಿಗೆ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಹಾಗೂ ಥೈಲ್ಯಾಂಡ್ನಿಂದ ವಾಪಸ್ ಆಗಲು ವಿಮಾನ ಟಿಕೆಟ್ಗಳನ್ನು ನೀಡುವ ಭರವಸೆ ನೀಡಲಾಗಿತ್ತು ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಪಟ್ಟಾಯದಲ್ಲಿ ಏಳು ದಿನಗಳ ರಜೆಯನ್ನು ನೀಡುವುದಾಗಿ ಸಂತ್ರಸ್ತರಿಗೆ ಭರವಸೆ ನೀಡಲಾಗಿತ್ತು. ಆದರೆ, ಬದಲಾಗಿ ಅವರನ್ನು ಒಂದು ಮನೆಗೆ ಕರೆದೊಯ್ದು ಹಲವಾರು ದಿನಗಳವರೆಗೆ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ ನಡೆದ ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಅವರನ್ನು ರಕ್ಷಿಸುವ ಮೊದಲು ಅವರಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.