ವಂದೇ ಭಾರತ್ನಲ್ಲಿ ಸೋನಂ ವಾಂಗ್ಚುಕ್ ಪ್ರಯಾಣ – ಭಾರತೀಯ ರೈಲ್ವೆಗೆ ಮೆಚ್ಚುಗೆ
ನವದೆಹಲಿ: ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರು ದೆಹಲಿಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಮಾಡಿ ಭಾರತೀಯ ರೈಲ್ವೆಯ (Indian Railways) ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜುಲೈ 23ರ ರಾತ್ರಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಬಳಿಕ ಗುರ

ನವದೆಹಲಿ: ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರು ದೆಹಲಿಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಮಾಡಿ ಭಾರತೀಯ ರೈಲ್ವೆಯ (Indian Railways) ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜುಲೈ 23ರ ರಾತ್ರಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಬಳಿಕ ಗುರುಗ್ರಾಮದ ಮೆದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಾಂಗ್ಚುಕ್, ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ದೆಹಲಿಯಿಂದ ವಂದೇ ಭಾರತ್ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ತೆರಳಿದರು. ಬಳಿಕ ಕಾಶ್ಮೀರದಲ್ಲಿ ಒಂದು ರಾತ್ರಿ ವಿಶ್ರಾಂತಿ ಪಡೆದು ಮರುದಿನ ಲಡಾಖ್ಗೆ ಪ್ರಯಾಣ ಬೆಳೆಸಿದರು. ಈ ವೇಳೆ ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಾದ ಚೆನಾಬ್ ಸೇತುವೆಯನ್ನು ವೀಕ್ಷಿಸಿದ ಅನುಭವವನ್ನು ವೀಡಿಯೋ ಮೂಲಕ ವಾಂಗ್ಚುಕ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾರವಾರ | ಕೈಕೊಟ್ಟ ಲವ್ವರ್ – ಮನನೊಂದು ಯುವಕ ಆತ್ಮಹತ್ಯೆ ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ರೈಲು ನನ್ನ ಅತ್ಯಂತ ನೆಚ್ಚಿನ ಪ್ರಯಾಣ ಮಾಧ್ಯಮ. ದೆಹಲಿಯಿಂದ ಜಮ್ಮು-ಕಾಶ್ಮೀರದವರೆಗೆ ವಂದೇ ಭಾರತ್ನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿತು. ಈ ವೇಳೆ ಚೆನಾಬ್ ಸೇತುವೆಯನ್ನು ನೋಡುವ ಅವಕಾಶವೂ ದೊರೆಯಿತು. ಅದು ಅತ್ಯಂತ ಸುಂದರ ಅನುಭವವಾಗಿತ್ತು. ಭಾರತೀಯ ರೈಲ್ವೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ವಂದೇ ಭಾರತ್ ರೈಲು ಸೇವೆ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಪ್ರತೀಕವಾಗಿದ್ದು, ಈ ಪ್ರಯಾಣವು ಹೆಮ್ಮೆ ಮೂಡಿಸಿದೆ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಸೋಮವಾರ ಬೆಂಗಳೂರಿಗೆ ತಮಿಳುನಾಡು ಸಿಎಂ AM PROUD OF INDIAN RAILWAYS Want to be proud of Indian (govt) promises too… Copy-LeftRightnCentre… pic.twitter.com/syCigFCKOb — Sonam Wangchuk (@Wangchuk66) July 30, 2026 ಇದೇ ವೇಳೆ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಮಾತನಾಡಿದ ವಾಂಗ್ಚುಕ್, ಸಾರ್ವಜನಿಕ ಪರೀಕ್ಷೆಗಳ ಸುಧಾರಣೆಗೆ ಸಂಬಂಧಿಸಿದ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿರುವುದು ಸಂತಸದ ವಿಷಯ. ಈ ಸುಧಾರಣೆ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯಲ್ಲೂ ಕಾಣಿಸಿಕೊಳ್ಳಬೇಕು ಎಂದು ಆಶಿಸಿದರು. ಇದನ್ನೂ ಓದಿ: ಕಾವೇರಿ ಬರ ಸಿಡಿಲು| CWMA ಸಭೆಯಲ್ಲಿ ಕರ್ನಾಟಕ, ತಮಿಳುನಾಡು ವಾದ ಏನಿತ್ತು? ನೀರು ಹರಿದಿದೆ ಅನ್ನೋದು ಗೊತ್ತಾಗೋದು ಹೇಗೆ? ಕೊನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಅವರು, ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸುವುದಿಲ್ಲ ಎಂದು ನೀಡಿದ್ದ ಲಿಖಿತ ಭರವಸೆಯನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು. ಯುವಜನರಲ್ಲಿ ವಿಶ್ವಾಸದ ವಾತಾವರಣ ನಿರ್ಮಿಸಲು ಸರ್ಕಾರ ತನ್ನ ಮಾತಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ | ಹೊಸ KSRTC ಮಾರ್ಗಕ್ಕೆ ಚಾಲನೆ ವೇಳೆ ಖಾಸಗಿ ಬಸ್ ಏಜೆಂಟರಿಂದ ಗಲಾಟೆ