ನಮಗೇ ಕುಡಿಯೋದಕ್ಕೆ ನೀರಿಲ್ಲ, ತಮಿಳುನಾಡಿಗೆ ಎಲ್ಲಿಂದ ನೀರು ಬಿಡೋದು? – ಕೋನರೆಡ್ಡಿ
ಬೆಂಗಳೂರು: ನಮಗೇ ಕುಡಿಯೋದಕ್ಕೆ ನೀರಿಲ್ಲ. ತಮಿಳುನಾಡಿಗೆ ಎಲ್ಲಿಂದ ನೀರು ಬಿಡೋದು? ಈ ವಿಚಾರವಾಗಿ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಅಂತ ಕಾಂಗ್ರೆಸ್ ಶಾಸಕ ಕೋನರೆಡ್ಡಿ (Kona Reddy) ಒತ್ತಾಯ ಮಾಡಿದರು. ವಿಧಾನಸೌಧದಲ್ಲಿ (Vidhan Soudha) ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನೀರು ಬಿಡಲು ಬೋರ್ಡ್ ಆದೇಶ ಮಾಡಿದೆ. ಕುಡಿಯೋಕೆ ನಮಗೆ ನೀರಿಲ್ಲ. ತಮಿಳು

ಬೆಂಗಳೂರು: ನಮಗೇ ಕುಡಿಯೋದಕ್ಕೆ ನೀರಿಲ್ಲ. ತಮಿಳುನಾಡಿಗೆ ಎಲ್ಲಿಂದ ನೀರು ಬಿಡೋದು? ಈ ವಿಚಾರವಾಗಿ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಅಂತ ಕಾಂಗ್ರೆಸ್ ಶಾಸಕ ಕೋನರೆಡ್ಡಿ (Kona Reddy) ಒತ್ತಾಯ ಮಾಡಿದರು. ವಿಧಾನಸೌಧದಲ್ಲಿ (Vidhan Soudha) ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನೀರು ಬಿಡಲು ಬೋರ್ಡ್ ಆದೇಶ ಮಾಡಿದೆ. ಕುಡಿಯೋಕೆ ನಮಗೆ ನೀರಿಲ್ಲ. ತಮಿಳುನಾಡಿಗೆ ಎಲ್ಲಿ ಬಿಡೋಣ? ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. 3,500 ಕ್ಯೂಸೆಕ್ ನೀರು ಬಿಡೋದಕ್ಕೆ ನಮ್ಮ ಬಳಿ ನೀರು ಎಲ್ಲಿದೆ? ನೀರು ಇದ್ದಾಗ ಬಿಟ್ಟಿದ್ದೇವೆ. ಈಗ ನೀರು ಇಲ್ಲ ಎಲ್ಲಿ ಬಿಡೋಣ. ಇವತ್ತು ಸಭೆ ನಡೆಯುತ್ತಿದೆ. ಸಿಎಂ ಅವರು ಕಾನೂನು ತಜ್ಞರು ಇವತ್ತು ಬೋರ್ಡ್ ಮುಂದೆ ವಿವರ ಕೊಡಲಿದ್ದಾರೆ. ರೈತರ ಪರ ನಿಲುವನ್ನು ಬೋರ್ಡ್ ತೆಗೆದುಕೊಳ್ಳಬೇಕು. ನಮ್ಮ ಸರ್ಕಾರ ಕೂಡಾ ಇದಕ್ಕೆ ಬದ್ಧ ಇದೆ ಅಂತ ತಿಳಿಸಿದರು. ಕನ್ನಡಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ.ಆಂಧ್ರಪ್ರದೇಶ, ತಮಿಳುನಾಡು ಎಲ್ಲರಿಗೂ ನೀರು ಬಿಡ್ತೀವಿ. ಮಹಾರಾಷ್ಟ್ರದಿಂದ ನೀರು ಪಡೆಯೋಕೆ ಕೇಳಬೇಕು. ಮಹದಾಯಿ ಯೋಜನೆ ಮಾಡೋಕೆ ಗೋವಾ ವಿರೋಧ ಮಾಡ್ತಾರೆ. ಈ ಎಲ್ಲಾ ಸಮಸ್ಯೆಗೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಲಿ ಅಂತ ಆಗ್ರಹ ಮಾಡಿದ್ರು. ನಾವು ನೀವು ಒಟ್ಟಾಗಿ ಕೇಂದ್ರಕ್ಕೆ ಹೋಗಿ ರೈತರ ಪರ ಮಾತಾಡಬೇಕು. ಕೇಂದ್ರ ಸರ್ಕಾರಕ್ಕೆ ಬಿಜೆಪಿ ಅವರು ಒತ್ತಡ ಹಾಕಲಿ. ನಿಮ್ಮದು ಜವಾಬ್ದಾರಿ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಒಟ್ಟಾಗಿ ಹೋಗಬೇಕು. ವಿಜಯ್ ಅವರು ರಾಜ್ಯಕ್ಕೆ ಬರ್ತಾ ಇದ್ದಾರೆ. ಅವರ ಜೊತೆ ಚರ್ಚೆ ಮಾಡಿ ನೀರು ಇದ್ದರೆ ಬಿಡ್ತೀವಿ. ಇಲ್ಲ ಅಂದರೆ ಬಿಡಲ್ಲ ಅಂತ ಹೇಳಬೇಕು. ಆಡಳಿತ-ವಿಪಕ್ಷ ಒಟ್ಟಾಗಿ ಕೆಲಸ ಮಾಡಬೇಕು ಅಂತ ತಿಳಿಸಿದರು. ನಾಳೆ ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಬಿಜೆಪಿ ಅವರು ಪ್ರತಿಭಟನೆ ಮಾಡೋದು ವಿಚಿತ್ರ ಅನ್ನಿಸುತ್ತಿದೆ. ವಿಪಕ್ಷವಾಗಿ ಕೇಂದ್ರಕ್ಕೆ ಮನವರಿಕೆ ಬಿಜೆಪಿ ಮಾಡಬೇಕು. ನೀರು ಇಲ್ಲದೇ ಹೇಗೆ ಬಿಡೋದು? ಗಂಭೀರ ಸಮಸ್ಯೆ ಇದೆ. ಈಗಾಗಲೇ ಸಿಎಂ 2 ಸಭೆ ದೆಹಲಿಯಲ್ಲಿ ಮಾಡಿದ್ದಾರೆ. ಮಹಾದಾಯಿ, ಕೃಷ್ಣ ಯೋಜನೆಗೆ ಯಾಕೆ ಕೇಂದ್ರ ಒಪ್ಪಿಗೆ ಕೊಟ್ಟಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ನಾವಿಬ್ಬರು ಒಟ್ಟಾಗಿ ಕೆಲಸ ಮಾಡಬೇಕು ಆಗ್ರಹ ಮಾಡಿದರು. ಕ್ಯಾಬಿನೆಟ್ ವಿಸ್ತರಣೆ – ಇಂದೇ ಅಂತಿಮ ನಿರ್ಧಾರ ಸಾಧ್ಯತೆ ಇನ್ನೂ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಶಾಸಕರು, ಇಂದು ಕ್ಯಾಬಿನೆಟ್ ವಿಸ್ತರಣೆ ಅಂತಿಮವಾಗುವ ಸಾಧ್ಯತೆ ಇದೆ ಅಂತ ತಿಳಿಸಿದರು. ಸಂಪುಟ ವಿಸ್ತರಣೆ ನಿರ್ಧಾರ ಇಂದು ಬಹುತೇಕ ಫೈನಲ್ ಆಗಲಿದೆ. ನಾವು ಸೇರಿದಂತೆ ಹಲವು ಶಾಸಕರು ಈಗಾಗಲೇ ದೆಹಲಿಯಿಂದ ವಾಪಸ್ ಬಂದಿದ್ದಾರೆ. ಸಿಎಂ ಡಿಕೆಶಿ ಜೊತೆಗೆ ಇನ್ನುಳಿದ ಶಾಸಕರು ವಾಪಸ್ ಬರುತ್ತಾರೆ. ಯಾರಿಗೆ ಅವಕಾಶ ಕೊಟ್ಟರೂ ಹೈಕಮಾಂಡ್ ಆದೇಶಕ್ಕೆ ನಾವು ಬದ್ಧವಾಗಿರುತ್ತೇವೆ ಎಂದರು. ಹೈಕಮಾಂಡ್ ನಿಂದ ವಿಳಂಬ ಆಗಿರುವ ವಿಚಾರಕ್ಕೆ ಲೋಕಸಭಾ ಕಲಾಪದಲ್ಲಿ ಬಿಲ್ ಮಂಡನೆ ಆಗಿದ್ದರಿಂದ ಸ್ವಲ್ಪ ವಿಳಂಬ ಆಯ್ತು. ದೇಶದ ಗಂಭೀರವಾದ ವಿಚಾರದ ಬಗ್ಗೆ ಚರ್ಚೆ ಆಗಲೇಬೇಕಿತ್ತು. ಹೀಗಾಗಿ ವಿಳಂಬ ಆಗಿದೆ ಅಷ್ಟೇ. ಇಂದು ಬಹುತೇಕ ಅಂತಿಮ ಆಗೋ ಸಾಧ್ಯತೆ ಇದೆ ಎಂದರು. ಸಂಸತ್ ನಲ್ಲಿ ನೀಟ್ ವಿಚಾರ ಚರ್ಚೆ ಆಗ್ತಿತ್ತು. ಹೀಗಾಗಿ ರಾಹುಲ್ ಗಾಂಧಿ, ವೇಣುಗೋಪಾಲ್, ಖರ್ಗೆ ಅವರು ಸಿಕ್ಕಿರಲಿಲ್ಲ. ಇವತ್ತು ಈ ಬಗ್ಗೆ ಅಂತಿಮ ಚರ್ಚೆ ಆಗಲಿದೆ.ನಾಳೆ ಪ್ರಮಾಣ ವಚನ ಸ್ವೀಕಾರ ಮಾಡೋದಕ್ಕೆ ಸಿಎಂ ಅವರು ಸೂಚನೆಯನ್ನು ಕೊಟ್ಟಿದ್ದಾರೆ. ಹೈಕಮಾಂಡ್ ಮತ್ತು ರಾಜ್ಯ ನಾಯಕರ ತೀರ್ಮಾನಕ್ಕೆ ಶಾಸಕರು ಬದ್ದ.ಸಚಿವ ಸ್ಥಾನ ಕೊಡಲಿ, ಕೊಡದೇ ಇರಲಿ ಕೆಲಸ ಮಾಡ್ತೀವಿ ಅಂತ ತಿಳಿಸಿದರು.