ಬಿಹಾರ: ಭರತ್ ತಿವಾರಿ ಎಂಬ ಯುವಕನ ಎನ್ಕೌಂಟರ್; ಎಸ್ಟಿಎಫ್ ಸಿಬ್ಬಂದಿ ಬಂಧನ
ಆರಾ (ಬಿಹಾರ): ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ನಡೆದಿದ್ದ ಭರತ್ ತಿವಾರಿ ಎಂಬ ಯುವಕನ ಪೊಲೀಸ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆಯ(ಎಸ್ಟಿಎಫ್) ಸಿಬ್ಬಂದಿಯೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ.ಎಸ್ಟಿಎಫ್ ಸಿಬ್ಬಂದಿ ಅಕ್ಷಯ್ ಕುಮಾರ್ ಅವರನ್ನು ಬಂಧಿಸಿರುವುದಾಗಿ ಭೋಜ್ಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ಜೂನ್ 17

ಆರಾ (ಬಿಹಾರ): ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ನಡೆದಿದ್ದ ಭರತ್ ತಿವಾರಿ ಎಂಬ ಯುವಕನ ಪೊಲೀಸ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆಯ(ಎಸ್ಟಿಎಫ್) ಸಿಬ್ಬಂದಿಯೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ.ಎಸ್ಟಿಎಫ್ ಸಿಬ್ಬಂದಿ ಅಕ್ಷಯ್ ಕುಮಾರ್ ಅವರನ್ನು ಬಂಧಿಸಿರುವುದಾಗಿ ಭೋಜ್ಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.ಜೂನ್ 17ರಂದು ನಡೆದಿದ್ದ ಎನ್ಕೌಂಟರ್ನಲ್ಲಿ ಭರತ್ ತಿವಾರಿ ಮೃತಪಟ್ಟಿದ್ದರು. ಈ ಬಗ್ಗೆ ತೀವ್ರ ರಾಜಕೀಯ ಚರ್ಚೆ ನಡೆದಿತ್ತು. ಈ ಬೆನ್ನಲ್ಲೇ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.‘ತಿವಾರಿ ಅವರನ್ನು ಬಂಧಿಸಲು ತೆರಳಿದ್ದ ವೇಳೆ ಅವರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದರಿಂದ ತಿವಾರಿ ಗಾಯಗೊಂಡಿದ್ದರು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು’ ಎಂದು ಪೊಲೀಸರು ಆರೋಪಿಸಿದ್ದರು.‘ತಿವಾರಿ ಪೊಲೀಸರಿಗೆ ಶರಣಾಗಿದ್ದ ಮತ್ತು ಯಾವುದೇ ಶಸ್ತ್ರಾಸ್ತ್ರವನ್ನು ಹೊಂದಿರಲ್ಲಿಲ್ಲ. ಆದರೂ ಎನ್ಕೌಂಟರ್ ಮಾಡಲಾಗಿದೆ’ ಎಂದು ತಿವಾರಿ ಕುಟುಂಬಸ್ಥರು ಆರೋಪಿಸಿದ್ದರು.ಪ್ರಕರಣದ ಸಂಬಂಧ ಕಳೆದ ತಿಂಗಳು ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು.