ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ಫುಡ್ ನಿಷೇಧ: ಖಾದರ್ ಆದೇಶ
– ಹೋಟೆಲ್ಗಳು ಗ್ರಾಹಕರಿಗೆ ಬಿಸಿನೀರು ನೀಡುವುದು ಕಡ್ಡಾಯ ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು(School-College) ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ತಳೆದಿದೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ಫುಡ್ (Junk Food) ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆರೋಗ್ಯ ಸಚಿವ

– ಹೋಟೆಲ್ಗಳು ಗ್ರಾಹಕರಿಗೆ ಬಿಸಿನೀರು ನೀಡುವುದು ಕಡ್ಡಾಯ ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು(School-College) ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ತಳೆದಿದೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ಫುಡ್ (Junk Food) ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಆದೇಶ ಹೊರಡಿಸಿದ್ದಾರೆ. ಹೆಚ್ಚು ಕೊಬ್ಬಿನಂಶ (High-Fat) ಇರುವ ಆಹಾರಗಳ ಕುರಿತು ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದಾಗ ಭಾರೀ ಪ್ರಮಾಣದ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದ 134 ಶಾಲಾ-ಕಾಲೇಜುಗಳು ತಮ್ಮದೇ ಸ್ವಂತ ಕ್ಯಾಂಟಿನ್ಗಳಲ್ಲಿ ವಿದ್ಯಾರ್ಥಿಗಳಿಗೆ (Students) ಅನಾರೋಗ್ಯಕರ ಜಂಕ್ಫುಡ್ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿತ್ತು. ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸರ್ಕಾರದ ಆದೇಶ ಮೀರಿಯೂ ಜಂಕ್ಫುಡ್ ಮಾರಾಟ ಮುಂದುವರಿಸಿದರೆ ಭಾರೀ ದಂಡ ವಿಧಿಸಲಾಗುವುದು ಸಚಿವರು ಎಚ್ಚರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸದಾಗಿ ವ್ಯಾಪಾರಿಗಳಿಗೆ ಮತ್ತು ಕ್ಯಾಂಟಿನ್ಗಳಿಗೆ ಲೈಸೆನ್ಸ್ ನೀಡುವಾಗಲೇ ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ಫುಡ್ ಮಾರಾಟ ಮಾಡಬಾರದು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಫೋಟೊ ಹಿಡಿದು ‘ಡಿ ಬಾಸ್’ ಘೋಷಣೆ ಕೂಗಿದ ಅಭಿಮಾನಿ… ಮುಂದೇನಾಯ್ತು? ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ನಾಳೆಯಿಂದಲೇ ಈ ಸಂಬಂಧ ನೋಟಿಸ್ ನೀಡಲಾಗುವುದು. ಶಾಲೆಯ 50 ಮೀಟರ್ ಅಂತರದಲ್ಲಿ ಯಾವ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ ಮತ್ತು ಯಾವುದಕ್ಕೆ ನಿಷೇಧವಿದೆ ಎಂಬುದರ ಸ್ಪಷ್ಟ ಮಾರ್ಗಸೂಚಿಯನ್ನು ಆದೇಶದಲ್ಲಿ ತಿಳಿಸಲಾಗುವುದು. ಬಿಸಿನೀರು ಕಡ್ಡಾಯ! ಜಂಕ್ಫುಡ್ ನಿಷೇಧದ ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಮಹತ್ವದ ಆದೇಶ ನೀಡಲಾಗಿದೆ. ಇನ್ಮುಂದೆ ರಾಜ್ಯದ ಎಲ್ಲಾ ಹೋಟೆಲ್(Hotel), ರೆಸ್ಟೋರೆಂಟ್ ಮತ್ತು ಕ್ಯಾಂಟಿನ್ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿನೀರು (Warm Water) ಒದಗಿಸಬೇಕೆಂದು ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ.