ಡಿಸೈನರ್ ರಾಹುಲ್ ಮಿಶ್ರಾ ಕಲ್ಪನೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶೋಭಿತಾ ಧುಲಿಪಾಲ
ಟಾಲಿವುಡ್ ಖ್ಯಾತ ನಟ ನಾಗ ಚೈತನ್ಯ ಪತ್ನಿ, ನಟಿ ಶೋಭಿತಾ ಧುಲಿಪಾಲ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಪ್ಯಾರಿಸ್ನಲ್ಲಿ ನಡೆದ ‘ಇಂಡಿಯಾ ಕೌಚರ್ ವೀಕ್ ಫೈನಲ್’ ಕಾರ್ಯಕ್ರಮದಲ್ಲಿ ನಟಿ ಗ್ಲಾಮರ್ ಲುಕ್ನಲ್ಲಿ ಕಣ್ಮನ ಸೆಳೆದಿದ್ದಾರೆ. ವಿಶೇಷ ಏನೆಂದರೆ ನಟಿ ಶೋಭಿತಾ ಧುಲಿಪಾಲ ಅವರು ಧರಿಸಿದ ಉಡುಪನ್ನು ಖ್ಯಾತ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರ

ಟಾಲಿವುಡ್ ಖ್ಯಾತ ನಟ ನಾಗ ಚೈತನ್ಯ ಪತ್ನಿ, ನಟಿ ಶೋಭಿತಾ ಧುಲಿಪಾಲ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಪ್ಯಾರಿಸ್ನಲ್ಲಿ ನಡೆದ ‘ಇಂಡಿಯಾ ಕೌಚರ್ ವೀಕ್ ಫೈನಲ್’ ಕಾರ್ಯಕ್ರಮದಲ್ಲಿ ನಟಿ ಗ್ಲಾಮರ್ ಲುಕ್ನಲ್ಲಿ ಕಣ್ಮನ ಸೆಳೆದಿದ್ದಾರೆ. ವಿಶೇಷ ಏನೆಂದರೆ ನಟಿ ಶೋಭಿತಾ ಧುಲಿಪಾಲ ಅವರು ಧರಿಸಿದ ಉಡುಪನ್ನು ಖ್ಯಾತ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ಅವರು ವಿನ್ಯಾಸಗೊಳಿಸಿದ್ದಾರೆ. ಈ ವಿಶೇಷ ವಿನ್ಯಾಸದ ಕುರಿತು ಮಾತನಾಡಿದ ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ, ಉಡುಪಿನ ಹಿಂದಿರುವ ಕಲಾತ್ಮಕತೆಯನ್ನು ಬಿಚ್ಚಿಟ್ಟಿದ್ದಾರೆ.‘ಇದು ಕಲ್ಲಿನಂತೆ ಕಾಣಿಸಿದರೂ ಇದರ ಎಂಬ್ರಾಯ್ಡರಿ ಅತ್ಯಂತ ಮೃದುವಾಗಿದೆ. ಈ ವಸ್ತ್ರ ಧರಿಸಿದಾಗ ಅತ್ಯಂತ ಮೃದುವಾಗಿ ದೇಹಕ್ಕೆ ಒಗ್ಗಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದಿದ್ದಾರೆ.ನಟಿ ಶೋಭಿತಾ ಧುಲಿಪಾಲ ಅವರು ಸಾಮಾಜಿಕ ಮಧ್ಯಮ ಇನ್ಸ್ಟಾಗ್ರಾಂನಲ್ಲಿ ಇದೇ ಫೋಟೊಗಳನ್ನು ಹಂಚಿಕೊಂಡಿದ್ದಾರೆ.ನಟಿಯ ಫೋಟೊಗಳನ್ನು ನೋಡಿದ ಫ್ಯಾಷನ್ ಪ್ರಿಯರು ಶೋಭಿತಾ ಧುಲಿಪಾಲ ಲುಕ್ಗೆ ಬೆರಗಾಗಿದ್ದಾರೆ.
Read the complete story at Prajavani