ತುಮಕೂರಿನಲ್ಲಿ ಸಾಂಸ್ಕೃತಿಕ ಸಮ್ಮಿಲನ-2026 ಕಾರ್ಯಕ್ರಮ ನಾಳೆ
ತುಮಕೂರು: ಕೀರ್ತನ ರಂಗ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಸಮ್ಮಿಲನ-2026 ಕಥಾಕೀರ್ತನೆ, ಭಕ್ತಿಗೀತೆಗಳು, ರಂಗಗೀತೆ ಹಾಗೂ ಜಾನಪದ ಗೀತೆ ಗಾಯನ ಕಾರ್ಯಕ್ರಮ ತಾಲ್ಲೂಕಿನ ಬೊಮ್ಮನಹಳ್ಳಿಯ ಸಿದ್ದಗಿರಿ ಶನೈಶ್ಚರಸ್ವಾಮಿ ದೇವಾಲಯದ ಆವರಣದಲ್ಲಿ ಆಗಸ್ಟ್ 1ರಂದು ಸಂಜೆ 4.30ಕ್ಕೆ ನಡೆಯಲಿದೆ.ಕೀರ್ತನ ರಂಗ ಬಳಗದ ಅಧ್ಯಕ್ಷ ನರಸಿಂಹದಾಸ್

ತುಮಕೂರು: ಕೀರ್ತನ ರಂಗ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಸಮ್ಮಿಲನ-2026 ಕಥಾಕೀರ್ತನೆ, ಭಕ್ತಿಗೀತೆಗಳು, ರಂಗಗೀತೆ ಹಾಗೂ ಜಾನಪದ ಗೀತೆ ಗಾಯನ ಕಾರ್ಯಕ್ರಮ ತಾಲ್ಲೂಕಿನ ಬೊಮ್ಮನಹಳ್ಳಿಯ ಸಿದ್ದಗಿರಿ ಶನೈಶ್ಚರಸ್ವಾಮಿ ದೇವಾಲಯದ ಆವರಣದಲ್ಲಿ ಆಗಸ್ಟ್ 1ರಂದು ಸಂಜೆ 4.30ಕ್ಕೆ ನಡೆಯಲಿದೆ.ಕೀರ್ತನ ರಂಗ ಬಳಗದ ಅಧ್ಯಕ್ಷ ನರಸಿಂಹದಾಸ್ ಮತ್ತು ಮಾಗಡಿಯ ಗಂಗಾನಾಯಕ್ ಕಥಾ ಕೀರ್ತನ ಮಾಲಿಕೆ ನಡೆಸಿಕೊಡುವರು. ಬೆಂಗಳೂರಿನ ಕಾಂತರಾಜು, ತುಮಕೂರಿನ ಭಾಗ್ಯಲಕ್ಷ್ಮಿ ಮತ್ತು ದಿಶಾ ಶಂಕರ್ ಭಕ್ತಿಗೀತೆ ನಡೆಸಿಕೊಡುವರು.ಕೊರಟಗೆರೆಯ ಅಶ್ವತ್ಥ್ನಾರಾಯಣ್ ಮತ್ತು ಹನುಮಂತರಾಯಪ್ಪ ರಂಗಗೀತೆ ಗಾಯನ ಹಾಗೂ ಸಂಜನ್ ಹಾಗೂ ಎಚ್.ಕೆ.ಲಾವಣ್ಯ ಜಾನಪದ ಗಾಯನ ನಡೆಸಿಕೊಡುವರು. ಹಾ.ಮಾ.ಅಶ್ವತ್ಥ್ನಾರಾಯಣ್ (ಕೀಬೋರ್ಡ್), ಕೆ.ಕಾಂತರಾಜು (ತಬಲ) ಹಾಗೂ ಕೃಷ್ಣಮೂರ್ತಿ (ವಯಲಿನ್) ವಾದ್ಯ ಸಹಕಾರ ನೀಡುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ನಿವೃತ್ತ ಪ್ರಾಂಶುಪಾಲೆ ಟಿ.ಆರ್. ಲೀಲಾದೇವಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ್, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಸಿದ್ದಗಿರಿ ಶನೈಶ್ಚರ ದೇವಾಲಯ ಟ್ರಸ್ಟ್ ಅಧ್ಯಕ್ಷ ಜನಾರ್ದನ್, ಕೆಸರಮಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರೇಗೌಡರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260731-17-1866436767