ಜೂಡೋದಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದ ಅಸ್ಮಿತಾ ಡೇ
ಗ್ಲ್ಯಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (CWG 2026) ಭಾರತದ ಉದಯೋನ್ಮುಖ ಜೂಡೋ ಪಟು ಅಸ್ಮಿತಾ ಡೇ (Asmita Dey) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಜೂಡೋದ( Judo) ಸುವರ್ಣ ಪದಕ(Gold Medal) ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್

ಗ್ಲ್ಯಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (CWG 2026) ಭಾರತದ ಉದಯೋನ್ಮುಖ ಜೂಡೋ ಪಟು ಅಸ್ಮಿತಾ ಡೇ (Asmita Dey) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಜೂಡೋದ( Judo) ಸುವರ್ಣ ಪದಕ(Gold Medal) ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೆ ಕಾಮನ್ವೆಲ್ತ್ ಕ್ರೀಡಾಕೂಟದ ಜೂಡೋ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕಗಳು ಲಭಿಸಿದ್ದವು. ಆದರೆ ಅಸ್ಮಿತಾ ಡೇ ಅವರು ಸ್ವರ್ಣ ಪದಕ (Gold Medal) ಗೆಲ್ಲುವ ಮೂಲಕ ಭಾರತದ ದೀರ್ಘಕಾಲದ ಕನಸನ್ನು ನನಸು ಮಾಡಿದ್ದಾರೆ. ಇದನ್ನೂ ಓದಿ: ಹಾಕಿ ಇಂಡಿಯಾದ ಹೊಸ ಜೆರ್ಸಿಗೆ ಟೀಕೆ – ನೀಲಿ ಬದಲು ಕೇಸರಿ ಬಣ್ಣಕ್ಕೆ ಹೋಗಿದ್ದು ಯಾಕೆ? GOLD ON THE LINE! Yamini Mourya storms into the women’s 57 KG Judo final with a superb semi-final victory over Donne Breytenbach of South Africa. Catch her gold medal bout tonight at 10:42 PM IST LIVE & EXCLUSIVE on Sony Sports Network TV channels & Sony LIV.… pic.twitter.com/odtY7ZMaDK — Sony Sports Network (@SonySportsNetwk) July 31, 2026 ಫೈನಲ್ ಪಂದ್ಯದಲ್ಲಿ ಅಸ್ಮಿತಾ ಅವರು ಎದುರಾಳಿಯ ವಿರುದ್ಧ ಪೂರ್ಣ ಪ್ರಾಬಲ್ಯ ಸಾಧಿಸಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. ಕ್ರೀಡಾಕೂಟದಲ್ಲಿ ಭಾರತದ ಪದಕದ ಖಾತೆಯನ್ನು ಬಲಪಡಿಸಿದ ಅಸ್ಮಿತಾ ಅವರ ಈ ಜಯಕ್ಕೆ ದೇಶಾದ್ಯಂತ ಕ್ರೀಡಾಭಿಮಾನಿಗಳು ಹಾಗೂ ಪ್ರಮುಖ ರಾಜಕೀಯ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತ್ರಿಪುರಾ ಮೂಲದ ಅಸ್ಮಿತಾ ಡೇ ಅವರ ಈ ಐತಿಹಾಸಿಕ ಸಾಧನೆಯು ಭಾರತೀಯ ಜೂಡೋ ಕ್ರೀಡೆಗೆ ಹೊಸ ಮೆರುಗು ತಂದಿದ್ದು, ಮುಂಬರುವ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಯುವ ಅಥ್ಲೀಟ್ಗಳಿಗೆ ದೊಡ್ಡ ಪ್ರೇರಣೆಯಾಗಲಿದೆ.