ಮಾರುತಿ ಸುಜುಕಿ ಲಾಭ ಇಳಿಕೆ
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ನಿವ್ವಳ ಲಾಭವು ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 9ರಷ್ಟು ಇಳಿಕೆ ಆಗಿದೆ.ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿ ₹3,792 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದು ಈ ಬಾರಿ ₹3,446 ಕೋಟಿಗೆ ಇಳಿದಿದೆ. ಸರಕುಗಳ ಬೆಲೆ ಹೆಚ್ಚಳವು ಲಾಭದ ಇಳಿಕೆಗೆ ಕಾರಣ ಎಂದು ಕಂಪನಿ ಷೇರುಪ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ನಿವ್ವಳ ಲಾಭವು ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 9ರಷ್ಟು ಇಳಿಕೆ ಆಗಿದೆ.ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿ ₹3,792 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದು ಈ ಬಾರಿ ₹3,446 ಕೋಟಿಗೆ ಇಳಿದಿದೆ. ಸರಕುಗಳ ಬೆಲೆ ಹೆಚ್ಚಳವು ಲಾಭದ ಇಳಿಕೆಗೆ ಕಾರಣ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.ಒಟ್ಟು ವರಮಾನವು ಶೇ 35ರಷ್ಟು ಹೆಚ್ಚಳವಾಗಿದ್ದು, ₹52,469 ಕೋಟಿಯಾಗಿದೆ. ವೆಚ್ಚವು ₹35,585 ಕೋಟಿಯಿಂದ ₹50 ಸಾವಿರ ಕೋಟಿಗೆ ಏರಿಕೆಯಾಗಿದೆ. ಸರಕುಗಳ ಬೆಲೆಯು ₹21,936 ಕೋಟಿಯಿಂದ ₹32,013 ಕೋಟಿಗೆ ತಲುಪಿದೆ ಎಂದು ತಿಳಿಸಿದೆ.ಜೂನ್ ತ್ರೈಮಾಸಿಕದಲ್ಲಿ ಕಂಪನಿಯ 6.82 ಲಕ್ಷ ಕಾರುಗಳು ಮಾರಾಟವಾಗಿದ್ದವು.
Read the complete story at Prajavani