ಆನ್ಲೈನ್ನಲ್ಲಿ ಜಾಹೀರಾತು ನೋಡಿದ್ರೆ ಹಣ ಕೊಡ್ತೀವಿ ಅಂತ ವಂಚನೆ – ಖಾಸಗಿ ಕಂಪನಿಯ 3.70 ಕೋಟಿ ಆಸ್ತಿ ಜಪ್ತಿ
ಬೆಂಗಳೂರು: ಆನ್ಲೈನ್ನಲ್ಲಿ ಜಾಹೀರಾತು ವೀಕ್ಷಣೆಗೆ ದುಡ್ಡು ಕೊಡೋದಾಗಿ ವಂಚಿಸಿದ ಪ್ರಕರಣದಲ್ಲಿ ಖಾಸಗಿ ಕಂಪನಿಯ 3.70 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ನಗರದ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿರುವ ಕಂಪನಿಯ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಜುಲೈ 22 ರಂದು ದಾಳಿ ನಡೆಸಿ ಇ.ಡಿ ಪ್ರಕರಣ ದಾಖಲಿಸಿತ್ತು. ಕಂಪನಿ ಹಾಗೂ ಕಂಪನಿಯ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲ

ಬೆಂಗಳೂರು: ಆನ್ಲೈನ್ನಲ್ಲಿ ಜಾಹೀರಾತು ವೀಕ್ಷಣೆಗೆ ದುಡ್ಡು ಕೊಡೋದಾಗಿ ವಂಚಿಸಿದ ಪ್ರಕರಣದಲ್ಲಿ ಖಾಸಗಿ ಕಂಪನಿಯ 3.70 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ನಗರದ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿರುವ ಕಂಪನಿಯ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಜುಲೈ 22 ರಂದು ದಾಳಿ ನಡೆಸಿ ಇ.ಡಿ ಪ್ರಕರಣ ದಾಖಲಿಸಿತ್ತು. ಕಂಪನಿ ಹಾಗೂ ಕಂಪನಿಯ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಹಲವು ವಿಚಾರಗಳು ಪತ್ತೆಯಾಗಿವೆ. ಇದನ್ನೂ ಓದಿ: ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ಫುಡ್ ನಿಷೇಧ: ಖಾದರ್ ಆದೇಶ ಆನ್ಲೈನ್ ಮೂಲಕ ಜನರನ್ನು ಸಂಪರ್ಕಿಸಿ ಕಂಪನಿ ವಂಚಿಸಿತ್ತು. ಡಿಜಿಟಲ್ ಮಾರ್ಕೆಟಿಂಗ್ & ಜಾಹೀರಾತು ವೀಕ್ಷಣೆ ಪ್ಲಾನ್ ಬಗ್ಗೆ ತಿಳಿಸಿದ್ದರು. ಜಾಹೀರಾತು ನೋಡಿ ಹಣ ಗಳಿಸಿ ಎಂದು ಆರೋಪಿ ಲಿಂಕ್ ಕಳಿಸುತ್ತಿದ್ದ. ವಾಟ್ಸಪ್ & ಫೇಸ್ಬುಕ್ ಸೇರಿ ಸೋಷಿಯಲ್ ಮೀಡಿಯಾ ಮೂಲಕ ಜನರ ಸಂಪರ್ಕಿಸಿ ವಂಚಿಸಲಾಗುತ್ತಿತ್ತು. ಖಾಯಂ ಸದಸ್ಯತ್ವ ಪಡೆದು ಹಣ ಗಳಿಸಲು 1,109 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಿದ್ದರು. ಇದೇ ರೀತಿ ಜನರಿಂದ ಕೋಟಿ ಕೋಟಿ ಪಡೆದು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗೆ, ಆರೋಪಿಗಳು ಸುಮಾರು 4.29 ಕೋಟಿ ಹಣ ಹಾಕಿಸಿಕೊಂಡಿದ್ದರು. ಹಣ ಹಾಕಿಸಿಕೊಂಡು ವೀಕ್ಷಣೆದಾರರಿಗೆ ಹಣ ನೀಡದೆ ವಂಚಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ ಭೇಟಿ; ದರ್ಶನ್ ಜೊತೆ ಅರ್ಧ ಗಂಟೆ ಮಾತುಕತೆ ಜನರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ತನಿಖೆ ವೇಳೆ ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಖಾಸಗಿ ಕಂಪನಿ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ.