ಸಿಂದಗಿ: ‘ಬಾಳು ಬೆಳಗಿದ ಗುರು’ ಎಚ್.ಟಿ. ಕುಲಕರ್ಣಿ ಇನ್ನಿಲ್ಲ
ಸಿಂದಗಿ: ಆದರ್ಶ ಶಿಕ್ಷಕ ಎಚ್.ಟಿ.ಕುಲಕರ್ಣಿ ಎಂದೇ ಈ ಭಾಗದಲ್ಲಿ ಹೆಸರುವಾಸಿಯಾಗಿದ್ದ ಹಣಮಂತ್ರಾಯ ತಮ್ಮಾಜಿ ಕುಲಕರ್ಣಿ (76) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.ಇವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.ಎಚ್.ಟಿ. ಕುಲಕರ್ಣಿಯವರು ವಿಜಯಪುರ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ತಮ್ಮ ದೇಹ ದಾನ ಮಾ

ಸಿಂದಗಿ: ಆದರ್ಶ ಶಿಕ್ಷಕ ಎಚ್.ಟಿ.ಕುಲಕರ್ಣಿ ಎಂದೇ ಈ ಭಾಗದಲ್ಲಿ ಹೆಸರುವಾಸಿಯಾಗಿದ್ದ ಹಣಮಂತ್ರಾಯ ತಮ್ಮಾಜಿ ಕುಲಕರ್ಣಿ (76) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.ಇವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.ಎಚ್.ಟಿ. ಕುಲಕರ್ಣಿಯವರು ವಿಜಯಪುರ ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ತಮ್ಮ ದೇಹ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಡಿಪ್ಲೊಮಾ ಪದವಿ ಪಡೆದ ಇವರು 50 ವರ್ಷಗಳ ಹಿಂದೆಯೇ ಸ್ಥಾಪಿಸಿದ್ದ ರಾಘವೇಂದ್ರ ಟ್ಯುಟೊರಿಯಲ್ಸ್ ಮೂಲಕ ಗಣಿತ, ವಿಜ್ಞಾನ ವಿಷಯವನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಅಪಾರ ಸಂಖ್ಯೆಯ ಶಿಷ್ಯ ಬಳಗ ಹೊಂದಿದ್ದರು. 4-5 ವರ್ಷಗಳ ಹಿಂದಷ್ಟೇ ಅವರು ನಿವೃತ್ತಿ ಪಡೆದಿದ್ದರು. ವಿದ್ಯಾರ್ಥಿಗಳು ಬೃಹತ್ ಪ್ರಮಾಣದಲ್ಲಿ ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡು ಅವರಿಗೆ ‘ಬಾಳು ಬೆಳಗಿದ ಗುರು’ ಎಂಬ ಅಭಿನಂದನ ಗ್ರಂಥ ಸಮರ್ಪಿಸಿದ್ದರು. ಇವರ ಶಿಷ್ಯ ಪ್ರಕಾಶ ಚೌಧರಿ ಅವರ ಹೆಸರಿನಲ್ಲಿ ಪ್ರೌಢಶಾಲೆ ಸಹ ಸ್ಥಾಪಿಸಿದ್ದಾರೆ.ಈಚೆಗೆ ಊರನ ಹಿರಿಯ ಮಠದಲ್ಲಿ ಮಠದ ಪೀಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ‘ಶಾಂತಸಿರಿ’ ಪ್ರಶಸ್ತಿ ಪ್ರದಾನ ಮಾಡಿದ್ದರು.ನುಡಿ ನಮನ: ನಗರದ ಗುರುಕೃಪಾ ಶಾಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.