ಜುಡೋ: ಭಾರತದ ಮೂವರು ಫೈನಲ್ಗೆ
ಗ್ಲಾಸ್ಗೊ: ಭಾರತದ ಜುಡೋಕಾಗಳಾದ ಅಸ್ಮಿತಾ ಡೇ, ಹರ್ಷ ಸಿಂಗ್ ಮತ್ತು ಯಾಮಿನಿ ಮೌರ್ಯ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ತಮ್ಮ ತೂಕ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದರು. ಇದರೊಂದಿಗೆ ಭಾರತಕ್ಕೆ ಕನಿಷ್ಠ ಮೂರು ಬೆಳ್ಳಿ ಪದಕ ಖಚಿತವಾಗಿದೆ. ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಯುವ ಸ್ಪರ್ಧಿ ಅಸ್ಮಿತಾ ದಿಟ್ಟ ಹೋರಾಟ ನಡೆಸಿ, ಸೋಲಿನ ದವಡೆಯಿಂ

ಗ್ಲಾಸ್ಗೊ: ಭಾರತದ ಜುಡೋಕಾಗಳಾದ ಅಸ್ಮಿತಾ ಡೇ, ಹರ್ಷ ಸಿಂಗ್ ಮತ್ತು ಯಾಮಿನಿ ಮೌರ್ಯ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ತಮ್ಮ ತೂಕ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದರು. ಇದರೊಂದಿಗೆ ಭಾರತಕ್ಕೆ ಕನಿಷ್ಠ ಮೂರು ಬೆಳ್ಳಿ ಪದಕ ಖಚಿತವಾಗಿದೆ. ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಯುವ ಸ್ಪರ್ಧಿ ಅಸ್ಮಿತಾ ದಿಟ್ಟ ಹೋರಾಟ ನಡೆಸಿ, ಸೋಲಿನ ದವಡೆಯಿಂದ ಪಾರಾದರು. ಅವರು, ಆತಿಥೇಯ ಸ್ಕಾಟ್ಲೆಂಡ್ನ ಸಮರ್ ಶಾವ್ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು. ಫೈನಲ್ನಲ್ಲಿ ಅವರಿಗೆ ಕೆನಡಾದ ಹೈಡಿ ಕ್ವಾಚ್ ಎದುರಾಳಿಯಾಗಿದ್ದಾರೆ. ಅಸ್ಮಿತಾ ಕ್ವಾರ್ಟರ್ ಫೈನಲ್ನಲ್ಲಿ ಸ್ಕಾಟ್ಲೆಂಡ್ನ ಮತ್ತೊಬ್ಬ ಸ್ಪರ್ಧಿ ಇವಾ ಎವಿಂಗ್ ಅವರನ್ನು ಸೋಲಿಸಿದ್ದರು. ಹರ್ಷ್ ಅವರು ಪುರುಷರ 60 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಆಂಟನ್ ನೆಟೊ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ಅವರು, ವನವಾಟುವಿನ ಅಲನ್ ಮೊಂಥುಯೆಲ್ ಅವರನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿದರು. ಅವರು ಫೈನಲ್ನಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು ಎದುರಿಸಲಿದ್ದಾರೆ.ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಯಾಮಿನಿ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾದ ಡೊನೆ ಬ್ರೇಟನ್ಬಾಚ್ ಅವರನ್ನು ಮಣಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಘಾನಾದ ಫ್ರೆಮಾ ಅಗೈ ಅವರನ್ನು ಸೋಲಿಸಿದ್ದ ಅವರು ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ನ ಅಸೆಲ್ಯಾ ಟೋಪ್ರಾಕ್ ಅವರನ್ನು ಎದುರಿಸುವರು.ಶ್ರದ್ಧಾ ಮತ್ತು ರೋಹಿತ್ಗೆ ನಿರಾಸೆ: ಮಹಿಳೆಯರ 52 ಕೆಜಿ ವಿಭಾಗದ ರೆಪೆಷಾಜ್ ಸುತ್ತಿನಲ್ಲಿ ಶ್ರದ್ಧಾ ಚೋಪಡೆ ಅವರು ವೇಲ್ಸ್ನ ಲೋಲಾ ಹಾಡ್ಸನ್ ವಿರುದ್ಧ ಸೋತು ಪದಕದ ಸುತ್ತಿನಿಂದ ಹೊರಬಿದ್ದರು. ರೋಹಿತ್ ಬಸೀರ್ ಮಜ್ಗುಲ್ ಅವರು ಪುರುಷರ 66 ಕೆಜಿ ವಿಭಾಗದ ರೆಪೆಷಾಜ್ ಸುತ್ತಿನಲ್ಲಿ ಇಂಗ್ಲೆಂಡ್ನ ಮೈಕೆಲ್ ಫ್ರೈಯರ್ ವಿರುದ್ಧ ಸೋತು ಕೂಟದಿಂದ ನಿರ್ಗಮಿಸಿದರು.ಹರ್ಷ್ ಸಿಂಗ್ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಷ್ ಸಿಂಗ್ ಅವರು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ವಿರುದ್ಧ ಸೆಣಸಾಡಿದರು –ಪಿಟಿಐ ಚಿತ್ರಗೆಲುವಿನ ಸಂಭ್ರಮದಲ್ಲಿ ಅಸ್ಮಿತಾ ಡೇ –ಪಿಟಿಐ ಚಿತ್ರ