ರಸಗೊಬ್ಬರ ಅಕ್ರಮ ದಾಸ್ತಾನು: 1.69 ಲಕ್ಷ ದಾಳಿ
ನವದೆಹಲಿ: ರಸಗೊಬ್ಬರ ಅಕ್ರಮ ಮಾರಾಟ, ಸಾಗಣೆ, ದಾಸ್ತಾನು ನಿಯಂತ್ರಿಸಲು ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಜುಲೈ 24ರವರೆಗೆ ದೇಶದಲ್ಲಿ 1.69 ಲಕ್ಷಕ್ಕೂ ಅಧಿಕ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.ಈ ಅವಧಿಯಲ್ಲಿ 9,127 ಶೋಕಾಸ್ ನೋಟಿಸ್ ನೀಡಲಾಗಿದ್ದು, 2,868 ಪರವಾನಗಿಗಳನ್ನು ಅಮಾನತು/ರದ್ದು ಮಾಡಲಾಗಿದೆ. ಅಕ್ರಮ ಚಟುವಟಿಕೆಗೆ ಮುಂ

ನವದೆಹಲಿ: ರಸಗೊಬ್ಬರ ಅಕ್ರಮ ಮಾರಾಟ, ಸಾಗಣೆ, ದಾಸ್ತಾನು ನಿಯಂತ್ರಿಸಲು ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಜುಲೈ 24ರವರೆಗೆ ದೇಶದಲ್ಲಿ 1.69 ಲಕ್ಷಕ್ಕೂ ಅಧಿಕ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.ಈ ಅವಧಿಯಲ್ಲಿ 9,127 ಶೋಕಾಸ್ ನೋಟಿಸ್ ನೀಡಲಾಗಿದ್ದು, 2,868 ಪರವಾನಗಿಗಳನ್ನು ಅಮಾನತು/ರದ್ದು ಮಾಡಲಾಗಿದೆ. ಅಕ್ರಮ ಚಟುವಟಿಕೆಗೆ ಮುಂದಾದ 270 ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಗೆ ತಿಳಿಸಿದ್ದಾರೆ.2025–26ರಲ್ಲಿ 4.84 ಲಕ್ಷ ದಾಳಿ ನಡೆಸಲಾಗಿದ್ದು, 17,392 ಶೋಕಾಸ್ ನೋಟಿಸ್ ನೀಡಲಾಗಿತ್ತು. 6,941 ಪರವಾನಗಿಯನ್ನು ಅಮಾನತು/ರದ್ದು ಮಾಡಲಾಗಿತ್ತು. ಇಂತಹ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ರಸಗೊಬ್ಬರ ನಿಯಂತ್ರಣ ಆದೇಶವನ್ನು ಉಲ್ಲಂಘಿಸುವ ವ್ಯಾಪಾರಿಗಳು ಮತ್ತು ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Read the complete story at Prajavani