ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು: ಸವಾಲುಗಳ ಸೀಮೆ ಮೀರಿ ಸೀಮಾ ಸಾಧನೆ
ಗ್ಲಾಸ್ಗೊ: ‘ಸೂಪರ್ ಮದರ್’ ಸೀಮಾ ಕಾಲಿರಮನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಒಂದು ಮಗುವಿನ ತಾಯಿಯಾದ ಮೇಲೆ ಕಣಕ್ಕೆ ಮರಳಿದ ನಂತರ ಇದು ಅವರ ಉತ್ತಮ ಸಾಧನೆಯಾಗಿದೆ.ಗುರುವಾರ ತಡರಾತ್ರಿ ನಡೆದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 58.65 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದರು. ಕಂಚಿನ ಪದಕ ಜಯಿಸಿದರು. ಹರಿಯಾಣದ ಸೀಮಾ ಅವರು ಆರು ಅವಕಾಶಗ

ಗ್ಲಾಸ್ಗೊ: ‘ಸೂಪರ್ ಮದರ್’ ಸೀಮಾ ಕಾಲಿರಮನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಒಂದು ಮಗುವಿನ ತಾಯಿಯಾದ ಮೇಲೆ ಕಣಕ್ಕೆ ಮರಳಿದ ನಂತರ ಇದು ಅವರ ಉತ್ತಮ ಸಾಧನೆಯಾಗಿದೆ.ಗುರುವಾರ ತಡರಾತ್ರಿ ನಡೆದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 58.65 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದರು. ಕಂಚಿನ ಪದಕ ಜಯಿಸಿದರು. ಹರಿಯಾಣದ ಸೀಮಾ ಅವರು ಆರು ಅವಕಾಶಗಳಲ್ಲಿ ಅವರು ಮೂರನೇ ಸುತ್ತಿನ ಥ್ರೋನಲ್ಲಿ ಕಂಚು ಖಚಿತಪಡಿಸಿಕೊಂಡರು. ಆದರೆ ನಾಲ್ಕು, ಐದು ಮತ್ತು ಆರನೇ ಅವಕಾಶಗಳಲ್ಲಿ ಫೌಲ್ ಮಾಡಿಕೊಂಡರು. ಕ್ಯಾಮರಾನ್ನ ಮೋನಿ ನೊರಾ ಅತಿಮ್ ಅವರು ತಮ್ಮ ಅಂತಿಮ ಥ್ರೋನಲ್ಲಿ ನಿರೀಕ್ಷಿತ ದೂರದ ಥ್ರೋ ಮಾಡುವಲ್ಲಿ ವಿಫಲರಾದರು. ಅವರು ಕೇವಲ 11.18 ಮೀ ದೂರ ಎಸೆದು ಕಂಚು ತಪ್ಪಿಸಿಕೊಂಡರು. ಅವರಿಗಿಂತ ಉತ್ತಮವಾಗಿದ್ದ ಸೀಮಾ ಪದಕ ಪಡೆದರು. ಜಮೈಕಾದ ಸಮಂತಾ ಹಾಲ್ (61.66 ಮೀ) ಮತ್ತು ಕೆನಡಾದ ಜೂಲಿಯಾ ಟಂಕ್ಸ್ (60. 67 ಮೀ) ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿದರು. ಕೆಲವು ವರ್ಷಗಳ ಹಿಂದೆ ಸೀಮಾ ಅವರು ಮಗು ಜನಿಸಿದ ನಂತರ ಕ್ರೀಡಾಕಣಕ್ಕೆ ಮರಳಿದ್ದರು. ಅಲ್ಲದೇ 2025ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. 27 ವರ್ಷದ ಸೀಮಾ ಅವರು ಪಿಎಚ್. ಡಿ ವ್ಯಾಸಂಗ ಕೂಡ ಮಾಡುತ್ತಿದ್ದಾರೆ. ಕಾಮನ್ವೆಲ್ ಕೂಟದಲ್ಲಿ ಅವರ ಪ್ರದರ್ಶನವು ಉತ್ತಮವಾಗಿತ್ತು. ಸತತ ಫಾಲ್ಗಳ ನಂತರವೂ ಅವರು ಪುಟಿದೆದ್ದು ಪದಕ ಜಯಿಸಿದರು. ಈ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ನಿಧಿ ರಾಣಿ ಅವರು ನಾಲ್ಕನೇ ಸ್ಥಾನ ಪಡೆದರು. ನಿಧಿ ಅವರು ಮೊದಲ ಅವಕಾಶದಲ್ಲಿ 53.19 ಮೀ ದೂರ ಡಿಸ್ಕಸ್ ಎಸೆದರು. ಅವರನ್ನು ನೈಜಿರಿಯಾದ ಒಬೈಗೆರಿ ಪಮೆಲೆ ಅಮೇಚಿ (53.68ಮೀ) ಮತ್ತು ಉಗಾಂಡದ ಮೋನಿ ನೊರಾ ಅತಿಮ್ (55.37ಮೀ) ಅವರಿಬ್ಬರೂ ಹಿಂದಿಕ್ಕಿದರು. ಆದರೆ ಟಂಕ್ಸ್ ಅವರು ತಮ್ಮ ಚೊಚ್ಚಲ ಥ್ರೋನಲ್ಲಿಯೇ 58.21 ಮೀ ದೂರ ಥ್ರೋ ಮಾಡಿ ಉಳಿದವರನ್ನು ಹಿಂದಿಕ್ಕಿದರು. ಆದರೆ ಅವರ ಸಾಮರ್ಥ್ಯವನ್ನು ಸಮಂತಾ ಹಾಲ್ (59.27ಮೀ) ಮೀರಿ ನಿಂತರು.ಎರಡನೇ ಸುತ್ತಿನಲ್ಲಿ ನಿಧಿ 55.67 ಮೀ ಒಗೆದು ಸುಧಾರಿತ ಪ್ರದರ್ಶನ ನೀಡಿದರು. ನಿಧಿಯನ್ನು ಹಿಂದಿಕ್ಕಿದ ಸೀಮಾ ಅವರು 57.32 ಮೀ ಥ್ರೋ ದಾಖಲಿಸಿದರು. ಈ ಸುತ್ತಲ್ಲಿ ಟಂಕ್ಸ್ 60.67 ಮೀ ಸಾಧನೆ ಮಾಡಿ ಬೆಳ್ಳಿ ಪದಕ ಖಚಿತಪಡಿಸಿಕೊಂಡರು. ಅವರನ್ನೂ ಹಿಂದಿಕ್ಕಿದ ಸಮಂತಾ ಚಿನ್ನಕ್ಕೆ ಕೊರಳೊಡ್ಡಿದರು.