‘ಕಾವೇರಿ’ಗಾಗಿ ಹೋರಾಟ: ‘ಜನ ನಾಯಗನ್’ ಪೋಸ್ಟರ್ ಹರಿದು ಆಕ್ರೋಶ
ಮಂಡ್ಯ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಾಯಕ ನಟನಾಗಿರುವ ‘ಜನನಾಯಗನ್’ ಸಿನಿಮಾ ಪೋಸ್ಟರ್ ಹರಿದು ಕರುನಾಡ ವಿಜಯ ಸೇನೆ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ದೀಪಕ್ ನೇತೃತ್ವದಲ್ಲಿ ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಬಂದ ಪ್ರತಿಭಟನಕಾರರು ಚಿತ್ರಮಂದಿರದ ಕಾಂಪೌಂಡ್ ಮೇಲೆ ಅಂಟಿಸಿದ್ದ ಸಿನಿಮಾದ ಪೋಸ್ಟರ್ ಹರಿದು ಹಾಕಿ

ಮಂಡ್ಯ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಾಯಕ ನಟನಾಗಿರುವ ‘ಜನನಾಯಗನ್’ ಸಿನಿಮಾ ಪೋಸ್ಟರ್ ಹರಿದು ಕರುನಾಡ ವಿಜಯ ಸೇನೆ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ದೀಪಕ್ ನೇತೃತ್ವದಲ್ಲಿ ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಬಂದ ಪ್ರತಿಭಟನಕಾರರು ಚಿತ್ರಮಂದಿರದ ಕಾಂಪೌಂಡ್ ಮೇಲೆ ಅಂಟಿಸಿದ್ದ ಸಿನಿಮಾದ ಪೋಸ್ಟರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ಸಮಸ್ಯೆ ನಿವಾರಣೆ ಆಗುವವರೆವಿಗೂ ವಿಜಯ್ ಜೋಸೆಫ್ ನಟನೆಯ ಯಾವುದೇ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಆಗ್ರಹಿಸಿದರು.ಪ್ರಸ್ತುತ ಪ್ರದರ್ಶನಗೊಳ್ಳುತ್ತಿರುವ ‘ಜನನಾಯಗನ್’ ಸಿನಿಮಾದ ಪ್ರದರ್ಶನವನ್ನು ಕೂಡಲೇ ಸ್ಥಗಿತಗೊಳಿಸಿ ಬೇರೆ ಸಿನಿಮಾಗಳನ್ನು ಪ್ರದರ್ಶಿಸಬೇಕೆಂದು ಚಿತ್ರಮಂದಿರದವ್ಯವಸ್ಥಾಪಕರಿಗೆ ಕೈಮುಗಿದು ಮನವಿ ಮಾಡಿದರು. ಅದಕ್ಕೆ ಚಿತ್ರಮಂದಿರದ ವ್ಯವಸ್ಥಾಪಕರು ಸಮ್ಮತಿ ಸೂಚಿಸಿದರು.
Read the complete story at Prajavani