ಭೂತಾನ್ಗೆ ₹4,000 ಕೋಟಿ ರಿಯಾಯಿತಿ ಸಾಲ
ಥಿಂಪು: ಭಾರತದ ನೆರವಿನೊಂದಿಗೆ ಭೂತಾನ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತು ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ₹4,000 ಕೋಟಿ ಮೊತ್ತದ ರಿಯಾಯಿತಿ ಸಾಲ ನೀಡುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿದವು.ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಭೂತಾನ್ ವಿದೇಶಾಂಗ ಕಾರ್ಯದರ್ಶಿ ದಾಶೊ ಪೆ

ಥಿಂಪು: ಭಾರತದ ನೆರವಿನೊಂದಿಗೆ ಭೂತಾನ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತು ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ₹4,000 ಕೋಟಿ ಮೊತ್ತದ ರಿಯಾಯಿತಿ ಸಾಲ ನೀಡುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿದವು.ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಭೂತಾನ್ ವಿದೇಶಾಂಗ ಕಾರ್ಯದರ್ಶಿ ದಾಶೊ ಪೆಮಾ ದೋರ್ಜಿ ಅವರು ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದರು.ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ ಕುರಿತೂ ನಿರ್ಧರಿಸಲಾಯಿತು ಎಂದು ಭೂತಾನ್ನ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.ಭಾರತದ ಸಹಕಾರದಲ್ಲಿ ಅಭಿವೃದ್ಧಿಪಡಿಸಲಾದ ಥಿಂಪು ಜಿಯೋಲಾಜಿಕಲ್ ಪಾರ್ಕ್ ಮತ್ತು ಒಲಾಖಾ ಪಾರ್ಕ್ಗಳನ್ನು ಇದೇ ವೇಳೆ ವರ್ಚುವಲ್ ಆಗಿ ಉದ್ಧಾಟನೆ ಮಾಡಲಾಯಿತು.
Read the complete story at Prajavani