ಇಂಟೆಲ್ ಅಧಿಕಾರಿ ಹತ್ಯೆ: ಮಾಜಿ ಎಎಪಿ ನಾಯಕ ತಾಹಿರ್ ಹುಸೇನ್ಗೆ ಜೀವಾವಧಿ ಶಿಕ್ಷೆ
ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಸಂದರ್ಭದಲ್ಲಿ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ (Tahir Hussain) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಪ್ರಕಟಿಸಿದ ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯವು, ಅಪರಾಧದ ರೀತಿ ಅತ್ಯಂತ ಕ

ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಸಂದರ್ಭದಲ್ಲಿ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ (Tahir Hussain) ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಪ್ರಕಟಿಸಿದ ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯವು, ಅಪರಾಧದ ರೀತಿ ಅತ್ಯಂತ ಕ್ರೂರವಾಗಿತ್ತು ಎಂದು ಹೇಳಿದೆ. ಇದನ್ನೂ ಓದಿ: ರಕ್ತಸಿಕ್ತ ಸಮವಸ್ತ್ರ, ಹಲ್ಲೆಯಿಂದ ತಲೆಗೆ ಹೊಲಿಗೆ: ಜಂತರ್ ಮಂತರ್ನಲ್ಲಿ ಪೊಲೀಸರ ಮೇಲಾದ ದೌರ್ಜನ್ಯದ ಬಗ್ಗೆ ಕುಟುಂಬಸ್ಥರ ನೋವಿನ ನುಡಿ ಕೊಲೆಯೊಂದಿಗೆ ಕ್ರೌರ್ಯ ಕೊನೆಗೊಂಡಿಲ್ಲ. ದ್ವೇಷ ಇನ್ನೂ ತಣಿದಿಲ್ಲ ಎಂಬಂತೆ ಮೃತನ ದೇಹವನ್ನು ಹತ್ತಿರದ ಚರಂಡಿಗೆ ಎಳೆದುಕೊಂಡು ಹೋಗಿ ಎಸೆಯಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ‘ಅಪರಾಧವು ಅಪರೂಪದಲ್ಲೇ ಅಪರೂಪವಾಗಿದೆ’ ಎಂದಿದೆ. ಫೆಬ್ರವರಿ ಅಂತ್ಯದಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಐಬಿಯಲ್ಲಿ ಭದ್ರತಾ ಸಹಾಯಕರಾಗಿದ್ದ 26 ವರ್ಷದ ಶರ್ಮಾ ಅವರನ್ನು ಗುಂಪೊಂದು ಎಳೆದೊಯ್ದು ಚಾಕು, ಕೋಲುಗಳು, ರಾಡ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ನಂತರ ಮೃತದೇಹವನ್ನು ಚರಂಡಿಗೆ ಎಸೆಯಲಾಗಿತ್ತು. ಮರುದಿನ 51 ಇರಿತದ ಗಾಯಗಳೊಂದಿಗೆ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಸುಪ್ರೀಂ ಮೆಟ್ಟಿಲೇರಿದ್ದ ಸಿಎಂ ಒಮರ್ ಅಬ್ದುಲ್ಲಾಗೆ ಕೊನೆಗೂ ಪತ್ನಿಯಿಂದ ಸಿಕ್ತು ವಿಚ್ಛೇದನ