ಖಾಸಗಿ ಹೂಡಿಕೆ ಪ್ರಸ್ತಾವಕ್ಕೆ ಫಿಫಾ ಪಟ್ಟು
ಪ್ಯಾರಿಸ್: ತನ್ನ ವಾಣಿಜ್ಯ ಚಟುವಟಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಉದ್ದೇಶಿತ ಪ್ರಸ್ತಾವಕ್ಕೆ ವ್ಯಾಪಕ ವಿರೋಧ ಎದುರಾಗಿದ್ದರೂ, ವಿಶ್ವ ಫುಟ್ಬಾಲ್ ಫೆಡರೇಷನ್ (ಫಿಫಾ) ‘ಮುಕ್ತ ಮತ್ತು ಪ್ರಜಾಸತ್ತಾತ್ಮಕ’ ಸಮಾಲೋಚನೆಗೆ ಮುಂದಾಗಲು ನಿರ್ಧರಿಸಿದೆ.ಖಾಸಗಿ ಹೂಡಿಕೆ ಯೋಜನೆಗೆ ಸಂಬಂಧಿಸಿ ಫಿಫಾಕ್ಕೆ ವಿರೋಧ ವ್ಯಕ್ತಪಡಿಸಿದ ಸಂಸ್ಥೆಗಳಲ್ಲಿ ಯುರೋಪ್ನ ಆಡಳಿತ ನಿರ್

ಪ್ಯಾರಿಸ್: ತನ್ನ ವಾಣಿಜ್ಯ ಚಟುವಟಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಉದ್ದೇಶಿತ ಪ್ರಸ್ತಾವಕ್ಕೆ ವ್ಯಾಪಕ ವಿರೋಧ ಎದುರಾಗಿದ್ದರೂ, ವಿಶ್ವ ಫುಟ್ಬಾಲ್ ಫೆಡರೇಷನ್ (ಫಿಫಾ) ‘ಮುಕ್ತ ಮತ್ತು ಪ್ರಜಾಸತ್ತಾತ್ಮಕ’ ಸಮಾಲೋಚನೆಗೆ ಮುಂದಾಗಲು ನಿರ್ಧರಿಸಿದೆ.ಖಾಸಗಿ ಹೂಡಿಕೆ ಯೋಜನೆಗೆ ಸಂಬಂಧಿಸಿ ಫಿಫಾಕ್ಕೆ ವಿರೋಧ ವ್ಯಕ್ತಪಡಿಸಿದ ಸಂಸ್ಥೆಗಳಲ್ಲಿ ಯುರೋಪ್ನ ಆಡಳಿತ ನಿರ್ವಹಿಸುವ ಯುಇಎಫ್ಎ ಒಳಗೊಂಡಿದೆ. ಫಿಫಾ ತನ್ನ ಉದ್ದೇಶಿತ ಯೋಜನೆಗೆ ಮುಂದಡಿಯಿಟ್ಟಲ್ಲಿ ವಿಶ್ವಕಪ್ ಬಹಿಷ್ಕರಿಸುವುದಾಗಿ ಹಲವು ಸದಸ್ಯ ರಾಷ್ಟ್ರಗಳು ಎಚ್ಚರಿಕೆ ನೀಡಿದೆ.‘ತನ್ನ ಸದಸ್ಯ ಸಂಸ್ಥೆಗಳಿಗೆ ಈ ಯೋಜನೆಯ ಬಗ್ಗೆ ಪರಾಮರ್ಶೆ ನಡೆಸಲು ಅವಕಾಶವಿದೆ. ಯಾರೂ ಫುಟ್ಬಾಲ್ ಆಟ ಮಾರಾಟ ಮಾಡುತ್ತಿಲ್ಲ. ಇಂಥದ್ದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ’ ಎಂದು ಫಿಫಾ ಹೇಳಿದೆ.‘ಯುಇಎಫ್ಎ ಜೊತೆಗೆ ಉತ್ತರ ಮತ್ತು ಮಧ್ಯ ಅಮೆರಿಕ ಹಾಗೂ ಕೆರೀಬಿಯನ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ (ಸಿಒಎನ್ಸಿಎಸಿಎಎಫ್) ಕೂಡ ಪ್ರಸ್ತಾವಕ್ಕೆ ವಿರೋಧ ಸೂಚಿಸಿದೆ. ಏಷ್ಯಾ ಫುಟ್ಬಾಲ್ ಫೆಡರೇಷನ್ ಸಹ ಶುಕ್ರವಾರ ತನ್ನ ವಿರೋಧ ಸೂಚಿಸಿದೆ.‘ಯುರೋಪ್ ಮತ್ತು ಸಿಒಎನ್ಸಿಎಸಿಎಎಫ್ನಿಂದ ಪ್ರತಿಕ್ರಿಯೆ ಆಲಿಸಿದ್ದೇವೆ. 41 ಸದಸ್ಯ ಸಂಸ್ಥೆಗಳು ಉದ್ದೇಶಿತ ಪ್ರಸ್ತಾವವನ್ನು ತಿರಸ್ಕರಿಸಿವೆ ಎಂದು ಈ ಒಕ್ಕೂಟಗಳು ತಿಳಿಸಿವೆ’ ಎಂದು ಫಿಫಾ ಹೇಳಿದೆ.ಮಾಧ್ಯಮದಲ್ಲಿ ಪ್ರಕಟವಾದ ತಪ್ಪು ವರದಿಗಳಿಂದಾಗಿ, ಉದ್ದೇಶಿತ ಸಮಾಲೋಚನಾ ಪ್ರಕ್ರಿಯೆಗೆ ಅಡಚಣೆಯಾಗಿದೆ ಎಂದೂ ಫಿಫಾ ಹೇಳಿದೆ.‘ಪ್ರತಿಯೊಬ್ಬರಿಗೂ (ಸದಸ್ಯರ ರಾಷ್ಟ್ರಗಳಿಗೆ) ವಿಷಯ ತಿಳಿದು ತಮ್ಮ ಅಭಿಮತ ವ್ಯಕ್ತಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಸಮಾಲೋಚನಾ ಪ್ರಕ್ರಿಯೆಯೊಡನೆ ನಾವು ಮುಂದುವರಿಯುತ್ತೇವೆ’ ಎಂದು ಹೇಳಿದೆ.ವಿಶ್ವಕಪ್ ಸೇರಿದಂತೆ ಫಿಫಾದ ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಫಿಫಾ ಫಾರ್ವರ್ಡ್ ಎಂಟರ್ಪ್ರೈಸ್ (ಎಫ್ಇಇ) ಎಂಬ ವಾಣಿಜ್ಯ ಅಂಗಸಂಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು 20 ಶತಕೋಟಿ ಡಾಲರ್ (ಸುಮಾರು ₹1.92 ಲಕ್ಷ ಕೋಟಿ) ಮೌಲ್ಯ ಹೊಂದಿದ್ದು, ಇದರ ಆಧಾರದಲ್ಲಿ ಶೇ. 20ರಷ್ಟು ಮೊತ್ತ (40,149 ಕೋಟಿ ) ಸಂಗ್ರಹಿಸಿ, ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಫಿಫಾ ಮಂಗಳವಾರ ಪ್ರಕಟಿಸಿತ್ತು.