ಕೊನೆಗೂ ಪ್ರೀತಿಸಿದ ಹುಡುಗನನ್ನು ಪರಿಚಯಿಸಿದ ‘ಕಮಲಿ’ ಖ್ಯಾತಿಯ ನಟಿ ಅಮೂಲ್ಯ ಗೌಡ
ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಅಮೂಲ್ಯ ಓಂಕಾರ್ ಗೌಡ ಅವರು ಸುದ್ದಿಯಲ್ಲಿದ್ದಾರೆ. ‘ಕಮಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಮೂಲ್ಯ ಅವರು ಕೊನೆಗೂ ಪ್ರೀತಿಸುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮದೆಯಾದ ಯೂಟ್ಯೂಬ್ ಚಾನೆಲ್ ಆರಂಭಿಸಿದ ಅವರು ಮೊದಲ ವಿಡಿಯೊದಲ್ಲೇ ಬಾಯ್ಫ್ರೆಂಡ್ನ ಮುಖವನ್ನು ರಿವೀಲ್ ಮಾಡಿದ್ದಾರೆ. ₹ 73 ಲಕ್ಷ

ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಅಮೂಲ್ಯ ಓಂಕಾರ್ ಗೌಡ ಅವರು ಸುದ್ದಿಯಲ್ಲಿದ್ದಾರೆ. ‘ಕಮಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಮೂಲ್ಯ ಅವರು ಕೊನೆಗೂ ಪ್ರೀತಿಸುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮದೆಯಾದ ಯೂಟ್ಯೂಬ್ ಚಾನೆಲ್ ಆರಂಭಿಸಿದ ಅವರು ಮೊದಲ ವಿಡಿಯೊದಲ್ಲೇ ಬಾಯ್ಫ್ರೆಂಡ್ನ ಮುಖವನ್ನು ರಿವೀಲ್ ಮಾಡಿದ್ದಾರೆ. ₹ 73 ಲಕ್ಷ ವಂಚಿಸಿದ ಆರೋಪ: ‘ಕಮಲಿ’ ಧಾರಾವಾಹಿ ನಿರ್ದೇಶಕ ಬಂಧನಜೀ ಕನ್ನಡದ 'ಕಮಲಿ' ಯಶಸ್ವಿನಿ ಯಶಸ್ಸಿನ ಹಾದಿನಟಿ ಅಮೂಲ್ಯ ಓಂಕಾರ್ ಗೌಡ ಹಾಗೂ ನಟ ನಿರಂಜನ್ ನಟಿ ಅಮೂಲ್ಯ ಗೌಡ ಪ್ರೀತಿಸುತ್ತಿರುವ ಹುಡುಗ ಯಾರು?ನಟಿ ಅಮೂಲ್ಯ ಗೌಡ ಪ್ರೀತಿಸುತ್ತಿರುವ ಹುಡುಗ ಬೇರೆ ಯಾರು ಅಲ್ಲ, ಅವರೇ ನಟ ನಿರಂಜನ್. ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಕಮಲಿ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿ ಅಮೂಲ್ಯ ಹಾಗೂ ನಟ ನಿರಂಜನ್ ಬಣ್ಣ ಹಚ್ಚಿದ್ದರು. ಧಾರಾವಾಹಿ ಮೂಲಕ ಸ್ನೇಹಿತರಾಗಿದ್ದ ಈ ಇಬ್ಬರು ಪ್ರೀತಿಯ ಬಗ್ಗೆ ಎಂದಿಗೂ ನೇರವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಂದತಿ ಹಬ್ಬಿತ್ತು. ಈಗ ನಿರಂಜನ್ ಅವರನ್ನು ಅಧಿಕೃತವಾಗಿ ಪರಿಚಯಿಸಿದ್ದಾರೆ. ಹಲವು ವರ್ಷಗಳ ಪ್ರೀತಿಯ ವದಂತಿಗೆ ಬ್ರೇಕ್ ಹಾಕಿರುವ ಈ ಜೋಡಿ ಕೊನೆಗೂ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಜೊತೆಗೆ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಹಂಚಿಕೊಂಡ ವಿಡಿಯೊದಲ್ಲಿ ಇಬ್ಬರೂ ಮೊದಲು ಭೇಟಿಯಾಗಿದ್ದು ಎಲ್ಲಿ, ನಿರಂಜನ್ ಅವರಲ್ಲಿ ಯಾವ ಗುಣ ಇಷ್ಟವಾಯಿತು ಎಂಬೆಲ್ಲಾ ವಿಷಯಗಳನ್ನು ಹೇಳಿಕೊಂಡಿದ್ದಾರೆ. ನಟಿ ಅಮೂಲ್ಯ ಓಂಕಾರ್ ಗೌಡ ಕಮಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟನೆ‘ಕಮಲಿ’ ಧಾರಾವಾಹಿಯಲ್ಲಿ ರಿಷಿ ಹಾಗೂ ಕಮಲಿಯಾಗಿ ಸುಮಾರು ಮೂರು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸಿದ್ದರು. ಈ ಜೋಡಿಯ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದರು. ಈಗ ನಿಜ ಜೀವನದಲ್ಲೂ ಈ ಜೋಡಿ ಒಂದಾಗಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಮದುವೆ ಆಗುವ ಸೂಚನೆ ಕೊಟ್ಟಿದ್ದಾರೆ.ಸದ್ಯ ನಟ ನಿರಂಜನ್ ಅವರು ಸ್ಟಾರ್ ಸುವರ್ಣದಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತ ನಟಿ ಅಮೂಲ್ಯ ಗೌಡ ಅವರು ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.