ಇಟಲಿಯ ಫುಟ್ಬಾಲ್ ದಿಗ್ಗಜ ಫ್ರಾಂಕೊ ಬರೆಸಿ ನಿಧನ
ಮಿಲಾನ್: ಇಟಲಿ ಫುಟ್ಬಾಲ್ ತಂಡದ ದಿಗ್ಗಜ ರಕ್ಷಣೆ ಆಟಗಾರ ಫ್ರಾಂಕೊ ಬರೆಸಿ (66) ಶುಕ್ರವಾರ ನಿಧನರಾದರು. 1982ರಲ್ಲಿ ವಿಶ್ವಕಪ್ ಗೆದ್ದುಕೊಂಡಿದ್ದ ಇಟಲಿ ತಂಡದಲ್ಲಿ ಅವರು ಆಡಿದ್ದರು. ಎ.ಸಿ ಮಿಲಾನ್ ತಂಡಕ್ಕೆ ಅವರು ಸುಮಾರು 15 ವರ್ಷನಾಯಕರಾಗಿದ್ದರು. ತಮ್ಮ 20 ವರ್ಷಗಳ ಕ್ರೀಡಾಜೀವನದುದ್ದಕ್ಕೂ ಒಂದೇ ಕ್ಲಬ್ಗೆ ಆಡಿದ್ದರು. ಬರೆಸಿ ನಿಧನರಾಗಿರುವುದನ್ನು ಮಿ

ಮಿಲಾನ್: ಇಟಲಿ ಫುಟ್ಬಾಲ್ ತಂಡದ ದಿಗ್ಗಜ ರಕ್ಷಣೆ ಆಟಗಾರ ಫ್ರಾಂಕೊ ಬರೆಸಿ (66) ಶುಕ್ರವಾರ ನಿಧನರಾದರು. 1982ರಲ್ಲಿ ವಿಶ್ವಕಪ್ ಗೆದ್ದುಕೊಂಡಿದ್ದ ಇಟಲಿ ತಂಡದಲ್ಲಿ ಅವರು ಆಡಿದ್ದರು. ಎ.ಸಿ ಮಿಲಾನ್ ತಂಡಕ್ಕೆ ಅವರು ಸುಮಾರು 15 ವರ್ಷನಾಯಕರಾಗಿದ್ದರು. ತಮ್ಮ 20 ವರ್ಷಗಳ ಕ್ರೀಡಾಜೀವನದುದ್ದಕ್ಕೂ ಒಂದೇ ಕ್ಲಬ್ಗೆ ಆಡಿದ್ದರು. ಬರೆಸಿ ನಿಧನರಾಗಿರುವುದನ್ನು ಮಿಲಾನ್ ಕ್ಲಬ್ ಖಚಿತಪಡಿಸಿದೆ. ಆದರೆ ನಿಧನದ ಕಾರಣ ತಿಳಿಸಿಲ್ಲ.2025ರ ಆಗಸ್ಟ್ನಲ್ಲಿ ಅವರ ಶ್ವಾಸಕೋಶದೊಳಗೆ ಇದ್ದ ಗಂಥಿಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಲಾಗಿತ್ತು. ನಂತರ ಅವರು ಚಿಕಿತ್ಸೆಯಲ್ಲಿದ್ದರು.‘ಅವರ ಹೆಗ್ಗುರುತಾದ ಆರನೇ ನಂಬರ್ ಜರ್ಸಿಯಂತೆ, ಅವರ ಮೇಲ್ಪಂಕ್ತಿ ಮತ್ತು ದೃಢನಿಷ್ಠೆ ಕ್ಲಬ್ನ ಡಿಎನ್ಎದಲ್ಲಿ ಅಚ್ಚೊತ್ತಿದೆ’ ಎಂದು ಮಿಲಾನ್ ಶೋಕ ಸೂಚಿಸಿದೆ.‘ಬರೆಸಿ ಅವರ ನಿಧನದೊಡನೆ ಇಟಲಿಯು ಕ್ರೀಡಾ ಇತಿಹಾಸದ ಮಹಾನ್ ಚಾಂಪಿಯನ್ ಒಬ್ಬರನ್ನು ಕಳೆದುಕೊಂಡಿದೆ. ನಿಷ್ಠೆ, ವೃತ್ತಿಪರತೆ, ಸಮರ್ಪಣಾ ಮನೋಭಾವಕ್ಕೆ ಮಾದರಿಯಾದ ಆಟಗಾರನನ್ನೂ ಕಳೆದುಕೊಂಡಿದೆ’ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದಾರೆ.1978ರ ಏಪ್ರಿಲ್ನಲ್ಲಿ 17ನೇ ವಯಸ್ಸಿನಲ್ಲಿ ಮಿಲಾನ್ ತಂಡಕ್ಕೆ ಅವರು ಪದಾರ್ಪಣೆ ಮಾಡಿದ್ದರು. ನಾಲ್ಕು ವರ್ಷಗಳ ನಂತರ ಇಟಲಿ ತಂಡ ವಿಶ್ವಕಪ್ ಗೆಲ್ಲಲೂ ಪ್ರಮುಖ ಕಾಣಿಕೆ ನೀಡಿದ್ದರು. ಮಿಲಾನ್ ಪರ ಅವರು 700ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.ಬರೆಸಿ ಅವರು ಆಡಿದ್ದ ವೇಳೆ ಮಿಲಾನ್ ಮೂರು ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ, ಆರು ಸಲ ಸೆರಿ ‘ಎ’ ಪ್ರಶಸ್ತಿ, ಎರಡು ಸಲ ಇಂಟರ್ಕಾಂಟಿನೆಂಟಲ್ ಕಪ್, ಮೂರು ಯುರೋಪಿಯನ್ ಸೂಪರ್ ಕಪ್ ಮತ್ತು ನಾಲ್ಕು ಬಾರಿ ಇಟಾಲಿಯನ್ ಸೂಪರ್ ಕಪ್ ಜಯಿಸಿದೆ. ನಿವೃತ್ತಿ ನಂತರ ಮಿಲಾನ್ ತಂಡಕ್ಕೆ ಕೋಚ್ ಸಹ ಆಗಿದ್ದರು.1997ರಲ್ಲಿ ಅವರು ನಿವೃತ್ತರಾದಾಗ ಮಿಲಾನ್ ಸಹ ಆರನೇ ನಂಬರ್ ಜರ್ಸಿಗೆ ನಿವೃತ್ತಿ ನೀಡಿತ್ತು. 2020ರಲ್ಲಿ ಅವರನ್ನು ಎ.ಸಿ. ಮಿಲಾನ್ ಗೌರವ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.