ಮೈಸೂರು: ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ತೇಜೋಮಯಿ ದಯಾಪೂರ್ಣೇ ಸಚ್ಚಿದಾನಂದರೂಪಿಣಿ ।ಸರ್ವವರ್ಣಾತ್ಮಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ ॥ಪವಿತ್ರ ಆಷಾಢ ಮಾಸದ ಶುಭ ಸಂದರ್ಭದಲ್ಲಿ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದಿವ್ಯ ದರ್ಶನ ಪಡೆಯುವ
ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ತೇಜೋಮಯಿ ದಯಾಪೂರ್ಣೇ ಸಚ್ಚಿದಾನಂದರೂಪಿಣಿ ।ಸರ್ವವರ್ಣಾತ್ಮಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ ॥ಪವಿತ್ರ ಆಷಾಢ ಮಾಸದ ಶುಭ ಸಂದರ್ಭದಲ್ಲಿ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದಿವ್ಯ ದರ್ಶನ ಪಡೆಯುವ ಸೌಭಾಗ್ಯ ದೊರೆಯಿತು. ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ,… pic.twitter.com/WNYgavoH1r— DK Shivakumar (@DKShivakumar) August 1, 2026 ‘ಪವಿತ್ರ ಆಷಾಢ ಮಾಸದ ಶುಭ ಸಂದರ್ಭದಲ್ಲಿ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದಿವ್ಯ ದರ್ಶನ ಪಡೆಯುವ ಸೌಭಾಗ್ಯ ದೊರೆಯಿತು’ ಎಂದು ಅವರು ತಮ್ಮ ‘ಎಕ್ಸ್’ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.‘ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಎಲ್ಲರ ಮನೆಗಳಲ್ಲಿ ಸುಖ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದೆ’ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಇದ್ದರು.