ಮಾನ್ವಿಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ
ಮಾನ್ವಿ: ಪಟ್ಟಣದ 7 ಪರೀಕ್ಷಾ ಕೇಂದ್ರಗಳಲ್ಲಿ ಆ.2ರಂದು ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಆಗಸ್ಟ್ 1ರಂದು ಪಟ್ಟಣಕ್ಕೆ ಬರುವ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಭೀಮರಾಯ 24x7 ಸ್ಟಡಿ ಸೆಂಟರ್ ಉಚಿತ ಗ್ರಂಥಾಲಯದ ವತಿಯಿಂದ ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿರುವ ಈದಗಾ ಶಾದಿ ಮಹ

ಮಾನ್ವಿ: ಪಟ್ಟಣದ 7 ಪರೀಕ್ಷಾ ಕೇಂದ್ರಗಳಲ್ಲಿ ಆ.2ರಂದು ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಆಗಸ್ಟ್ 1ರಂದು ಪಟ್ಟಣಕ್ಕೆ ಬರುವ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರ ಭೀಮರಾಯ 24x7 ಸ್ಟಡಿ ಸೆಂಟರ್ ಉಚಿತ ಗ್ರಂಥಾಲಯದ ವತಿಯಿಂದ ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿರುವ ಈದಗಾ ಶಾದಿ ಮಹಲ್, ಟೌನ್ಹಾಲ್ ಮತ್ತು ಭೀಮರಾಯ ಸ್ಟಡಿ ಸೆಂಟರ್ ಗ್ರಂಥಾಲಯದಲ್ಲಿ ರಾತ್ರಿ ಉಚಿತವಾಗಿ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಜುಲೈ 2ರಂದು ಬೆಳಿಗ್ಗೆ ಉಪಹಾರ ನೀಡಲಾಗುವುದು ಎಂದು ಉಪನ್ಯಾಸಕ ಮಹಿಬೂಬ್ ತಿಳಿಸಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260801-32-894949323
Read the complete story at Prajavani