ಸಂಜೆಯೊಳಗೆ 1 ಡ್ಯಾಂ ತುಂಬುವ ಸ್ಥಿತಿಯಲ್ಲಿದೆ, ಡ್ಯಾಂ ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋಕೆ ಆಗಲ್ಲ – ಡಿಕೆ ಶಿವಕುಮಾರ್
ಬೆಂಗಳೂರು: ಡ್ಯಾಮ್ (KRS Dam) ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರಿನ (Bengaluru) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದಾಗಿ ಹೇಳಿದ್ದಾರೆ. ಡ್ಯಾಂ ತುಂಬಿದ್ರೆ, ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ಸ

ಬೆಂಗಳೂರು: ಡ್ಯಾಮ್ (KRS Dam) ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರಿನ (Bengaluru) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವುದಾಗಿ ಹೇಳಿದ್ದಾರೆ. ಡ್ಯಾಂ ತುಂಬಿದ್ರೆ, ನೀರು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ಸರ್ವಪಕ್ಷ ಸಭೆಗೆ ಬಿಜೆಪಿ (BJP) ಟೀಕೆ ವಿಚಾರ ಕುರಿತು ಮಾತನಾಡಿ, ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದೇ ಬಿಜೆಪಿಯವರು. ಈಗ ಅವ್ರೇ ಆರೋಪ ಮಾಡ್ತಾರೆ ಮಾಡಲಿ, ಇನ್ನೂ ನೀರು ಬಿಟ್ಟಿಲ್ಲ. ಸಂಜೆ ಅಷ್ಟೋತ್ತಿಗೆ ಒಂದು ಡ್ಯಾಂ ತುಂಬುವ ಸ್ಥಿತಿಯಲ್ಲಿ ಇದೆ. ಡ್ಯಾಂ ತುಂಬಿದ್ರೆ ನೀರನ್ನ ನಾವು ಹಿಡಿದಿಟ್ಟುಕೊಳ್ಳೋದಕ್ಕೆ ಆಗಲ್ಲ ಅಂತಲೂ ಹೇಳಿದ್ದಾರೆ. ನಾಳೆ (ಆ.2) ಸರ್ವ ಪಕ್ಷ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೂ ನಾವು ನೀರು ಬಿಟ್ಟಿಲ್ಲ, ಆದರೆ ಮಳೆಯಾಗ್ತಿದೆ. ಒಂದು ಡ್ಯಾಂ ಮತ್ತೆ ತುಂಬೋ ಹಂತಕ್ಕೆ ಬಂದಿದೆ. ನಾಳೆ ಸರ್ವ ಪಕ್ಷ ಸಭೆ ಕರೆದಿದ್ದೇನೆ. ಬಿಜೆಪಿ ಅವರೇ ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದು, ಅದನ್ನ ಮಾಡಿದ್ದೇನೆ. ಅದನ್ನ ನಾನು ಮಾಡಿದ್ದೇನೆ. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗ್ತಾರೆ ಅಂತ ಗೊತ್ತಾಯ್ತು. ನೋಡೋಣ ಇಂದು ಸಾಯಂಕಾಲ ಮತ್ತೊಂದು ಡ್ಯಾಂ ತುಂಬಬಹುದು, ನೀರನ್ನ ನಾವೇನು ತಡೆಹಿಡಿಯೋಕೆ ಆಗಲ್ಲ, ನಾಳಿನ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.