ಚಿತ್ರೀಕರಣ ವೇಳೆ ನಟಿ ರಶ್ಮಿಕಾಗೆ ಗಂಭೀರ ಗಾಯ: 6 ವಾರ ವಿಶ್ರಾಂತಿಗೆ ವೈದ್ಯರ ಸೂಚನೆ
ಹೈದರಾಬಾದ್: ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ರಶ್ಮಿಕಾ ಮಂದಣ್ಣ ಅವರ ಸೊಂಟಕ್ಕೆ ಪೆಟ್ಟಾಗಿದ್ದು, ಹೀಗಾಗಿ 6 ವಾರಗಳವರೆಗೂ ವಿಶ್ರಾಂತಿ ಪಡೆಯಲು ವೈದ್ಯರ ತಂಡ ಸೂಚನೆ ನೀಡಿದೆ.ವರದಿ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಚಿತ್ರವೊಂದರಲ್ಲಿ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿದ್

ಹೈದರಾಬಾದ್: ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ರಶ್ಮಿಕಾ ಮಂದಣ್ಣ ಅವರ ಸೊಂಟಕ್ಕೆ ಪೆಟ್ಟಾಗಿದ್ದು, ಹೀಗಾಗಿ 6 ವಾರಗಳವರೆಗೂ ವಿಶ್ರಾಂತಿ ಪಡೆಯಲು ವೈದ್ಯರ ತಂಡ ಸೂಚನೆ ನೀಡಿದೆ.ವರದಿ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಚಿತ್ರವೊಂದರಲ್ಲಿ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗ ಈ ಅನಾಹುತ ಸಂಭವಿಸಿದೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.ನೀರಿನಾಳದಲ್ಲಿ ಶೂಟಿಂಗ್: ‘ಮೈಸಾ’ಗಾಗಿ ನಟಿ ರಶ್ಮಿಕಾ ಮಂದಣ್ಣ ಹೊಸ ಸಾಹಸಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಕನ್ನಡದ ಹೆಮ್ಮೆ ಮೈಸೂರು ಸಿಲ್ಕ್ ಸೀರೆಮೈಸಾ ಸಿನಿಮಾಗಾಗಿ 20 ಗಂಟೆ ನೀರಿನ ಅಡಿಯಲ್ಲಿ ರಶ್ಮಿಕಾ ಸಾಹಸಇತ್ತೀಚೆಗಷ್ಟೇ ರಶ್ಮಿಕಾ ತಮ್ಮ ಮುಂಬರುವ ‘ಮೈಸಾ’ ಚಿತ್ರಕ್ಕಾಗಿ ಬ್ಯಾಂಕಾಕ್ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಟಂಟ್ ಮಾಸ್ಟರ್ ಆಂಡಿ ಲಾಂಗ್ ಹಾಗೂ ಜೈಕಾ ಸ್ಟಂಟ್ ತಂಡದೊಂದಿಗೆ ನಿತ್ಯ 7 ರಿಂದ 8 ಗಂಟೆಗಳ ಕಾಲ ಮಾರ್ಷಲ್ ಆರ್ಟ್ಸ್ ಅಭ್ಯಾಸ ನಡೆಸಿದ್ದರು.ಇಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನಟಿಯೊಬ್ಬರು ನಡೆಸಿದ ನೀರಿನೊಳಗಿನ ಸಾಹಸ ದೃಶ್ಯಕ್ಕಾಗಿ ಡ್ಯೂಪ್ ಬಳಸದೇ, ಸತತ ಎರಡು ದಿನಗಳ ಕಾಲ ನೀರಿನ ಅಡಿಯಲ್ಲೇ ಇದ್ದು ಕಠಿಣ ಸ್ಟಂಟ್ಗಳನ್ನು ಪೂರ್ಣಗೊಳಿಸಿದ್ದರು. ಸದ್ಯ ನಟಿಗೆ ಪೆಟ್ಟಾಗಿದ್ದರಿಂದ ಮುಂಬರುವ ಸಿನಿಮಾಗಳ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎನ್ನಲಾಗಿದೆ.ಆಧಾರ: ಡೆಕ್ಕನ್ ಹೆರಾಲ್ಡ್