ಮುಕ್ತಾಯಗೊಳ್ಳುತ್ತಿವೆ ಕಲರ್ಸ್ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು
ಕನ್ನಡ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋನ ಗುಂಗು ಶುರುವಾಗಿದೆ. ಈ ಬಾರಿ ಜನಸಾಮಾನ್ಯರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿರುವುದರಿಂದ ಕುತೂಹಲ ಹೆಚ್ಚಾಗಿದೆ. ಈ ನಡುವೆ ಕಲರ್ಸ್ ಕನ್ನಡದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು ಮುಕ್ತಾಯಗೊಳ್ಳುತ್ತಿವೆ. ಪ್ರೇಕ್ಷಕರ ಮನಗೆದ್ದ ‘ಭಾರ್ಗವಿ ಎಲ್ಎಲ್ಬಿ’ ಮತ್ತು ‘ಪ್ರೇಮಕಾವ್ಯ’ ಧಾರಾವಾಹಿಗಳು

ಕನ್ನಡ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋನ ಗುಂಗು ಶುರುವಾಗಿದೆ. ಈ ಬಾರಿ ಜನಸಾಮಾನ್ಯರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿರುವುದರಿಂದ ಕುತೂಹಲ ಹೆಚ್ಚಾಗಿದೆ. ಈ ನಡುವೆ ಕಲರ್ಸ್ ಕನ್ನಡದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು ಮುಕ್ತಾಯಗೊಳ್ಳುತ್ತಿವೆ. ಪ್ರೇಕ್ಷಕರ ಮನಗೆದ್ದ ‘ಭಾರ್ಗವಿ ಎಲ್ಎಲ್ಬಿ’ ಮತ್ತು ‘ಪ್ರೇಮಕಾವ್ಯ’ ಧಾರಾವಾಹಿಗಳು ಅಂತ್ಯಕಾಣುತ್ತಿವೆ. ಆಗಸ್ಟ್ ಎರಡನೇ ವಾರದಲ್ಲಿ ಧಾರಾವಾಹಿಗಳ ಮುಕ್ತಾಯದ ಸಂಚಿಕೆಗಳು ಪ್ರಸಾರ ಕಾಣುವ ಸಾಧ್ಯತೆ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಧಾರಾವಾಹಿ ಮುಕ್ತಾಯವಾಗುತ್ತಿದೆ ಎನ್ನುವ ಪೋಸ್ಟರ್ಗಳು ಹರಿದಾಡುತ್ತಿವೆ. ಭಾರ್ಗವಿ ಎಲ್ಎಲ್ಬಿ2025ರ ಮಾರ್ಚ್ನಲ್ಲಿ ಆರಂಭವಾಗಿದ್ದ ಭಾರ್ಗವಿ ಎಲ್ಎಲ್ಬಿ ಧಾರಾವಾಹಿ ಕಾನೂನು ಹೋರಾಟ, ಕುಟುಂಬಗಳ ನಡುವಿನ ಕಥಾಹಂದರ ಹೊಂದಿದೆ. ತೆಲುಗಿನ ಗೀತಾ ಎಲ್ಎಲ್ಬಿ ಧಾರಾವಾಹಿಯ ರಿಮೇಕ್ ಇದಾಗಿದೆ. ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್, ಚೈತ್ರಾ ರಾವ್ ಸೇರಿದಂತೆ ಹಲವರು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. ಪ್ರೇಮಕಾವ್ಯಕಲರ್ಸ್ನಲ್ಲಿ ಪ್ರಸಾರ ಕಾಣುತ್ತಿರುವ ಮತ್ತೊಂದು ಜನಪ್ರಿಯ ಧಾರಾವಾಹಿ ‘ಪ್ರೇಮಕಾವ್ಯ’ ಕೂಡ ಮುಕ್ತಾಯವಾಗುತ್ತಿದೆ. ಪ್ರಿಯಾ ಜೆ. ಆಚಾರ್, ವೈಷ್ಣವಿ, ರಘು, ವಿಕಾಸ್ ಸೇರಿದಂತೆ ಹಲವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಕ್ಕ, ತಂಗಿಯರ ನಡುವಿನ ಕಥಾಹಂದರದ ಧಾರಾವಾಹಿ ಇದಾಗಿದ್ದು, ಪ್ರೀತಿ ಹಾಗೂ ಕುಟುಂಬದ ಬಾಂಧವ್ಯದ ಸುತ್ತ ಕಥೆ ಸಾಗುತ್ತದೆ.