ದಾರಿ ತಪ್ಪಿದ ಮಕ್ಕಳನ್ನು ಕೋರ್ಟ್ಗೆ ಎಳೆಯುವುದರಿಂದ ಸಮಸ್ಯೆ ಬಗೆಹರಿಯಲ್ಲ: ಮೋದಿ
ನವದೆಹಲಿ: ‘ನೀಟ್ ಪ್ರಶ್ನೆಪತ್ರಿಕೆ ವಿರೋಧಿಸಿ ಇತ್ತೀಚಿಗೆ ಜಂತರ್– ಮಂತರ್ನಲ್ಲಿ ನಡೆದ ಪ್ರತಿಭಟನೆ ವೇಳೆ ನನ್ನ ಹಾಗೂ ನನ್ನ ತಾಯಿಯ ಮೇಲೂ ಅವಹೇಳನಕಾರಿ ಪದ ಬಳಸಿ ನಿಂದಿಸಲಾಯಿತು. ಆದರೆ, ಅಂತಹ ದಾರಿ ತಪ್ಪಿದ ಮಕ್ಕಳನ್ನು ನ್ಯಾಯಾಲಯಕ್ಕೆ ಎಳೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಹೀಗಾಗಿ ಅವರನ್ನು ನಾನು ಕ್ಷಮಿಸಲು ಬಯಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ತ

ನವದೆಹಲಿ: ‘ನೀಟ್ ಪ್ರಶ್ನೆಪತ್ರಿಕೆ ವಿರೋಧಿಸಿ ಇತ್ತೀಚಿಗೆ ಜಂತರ್– ಮಂತರ್ನಲ್ಲಿ ನಡೆದ ಪ್ರತಿಭಟನೆ ವೇಳೆ ನನ್ನ ಹಾಗೂ ನನ್ನ ತಾಯಿಯ ಮೇಲೂ ಅವಹೇಳನಕಾರಿ ಪದ ಬಳಸಿ ನಿಂದಿಸಲಾಯಿತು. ಆದರೆ, ಅಂತಹ ದಾರಿ ತಪ್ಪಿದ ಮಕ್ಕಳನ್ನು ನ್ಯಾಯಾಲಯಕ್ಕೆ ಎಳೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಹೀಗಾಗಿ ಅವರನ್ನು ನಾನು ಕ್ಷಮಿಸಲು ಬಯಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ವಿಡಿಯೊ ಬಿಡುಗಡೆಗೊಳಿಸಿದ ಅವರು, ‘ಸಮಾಜದಲ್ಲಿ ಉಂಟಾಗಿರುವ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಯುವಕರನ್ನು ಅಪ್ಪಿಕೊಂಡು, ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಸಮಯ ಇದಾಗಿದೆ’ ಎಂದು ಹೇಳಿದ್ದಾರೆ.‘ಪ್ರತಿಭಟನೆಯ ವೇಳೆ ನನ್ನ ಹಾಗೂ ನನ್ನ ತಾಯಿಯ ಮೇಲೆ ಅವಹೇಳನ ಕಾರಿಯಾದ ಪದ ಬಳಸಿ ನಿಂದಿಸಿದ್ದಾರೆ. ಅವಹೇಳನದಿಂದ ಸಮಸ್ಯೆ ಬಗೆಹರಿ ಯುವುದಿಲ್ಲ. ದಾರಿತಪ್ಪಿದವರಿಗೆ ಸರಿಯಾದ ಮಾರ್ಗದರ್ಶನ ಬೇಕಿದೆ’ ಎಂದು ಅವರು ತಿಳಿಸಿದ್ದಾರೆ.‘ನಾನು ಅವರನ್ನು ಕ್ಷಮಿಸುತ್ತೇನೆ. ಜನರು ತಪ್ಪನ್ನು ಮಾಡುತ್ತಾರೆ. ಆದರೆ, ನಮ್ಮ ಹೆಣ್ಣು ಮಕ್ಕಳು ನಿಂದನೀಯ ಪದ ಬಳಸಿರುವುದು ಸಾಂಸ್ಕೃತಿಕವಾಗಿ ಆಘಾತ ತಂದಿದೆ. ದಾರಿ ತಪ್ಪಿದ ಯುವ ಜನರನ್ನು ಕ್ಷಮಿಸೋಣ. ಅವರೆಲ್ಲರೂ ಕೂಡ ನಮ್ಮ ಮಕ್ಕಳೇ. ಅವರಿಗೆ ಸರಿಯಾದ ಮಾರ್ಗ ತೋರುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಮೋದಿ ಸಲಹೆ ನೀಡಿದ್ದಾರೆ. View this post on Instagram A post shared by Narendra Modi (@narendramodi)