ಕಾಸರಗೋಡಿನಲ್ಲಿ ಅಗ್ನಿಶಾಮಕದಳದಿಂದ ಶಾಲಾ ಮಕ್ಕಳಿಗೆ ಸ್ವಯಂ ರಕ್ಷಣೆ ತರಬೇತಿ
ಕಾಸರಗೋಡು: ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಗರದ ಅಗ್ನಿಶಾಮಕದಳ ಮತ್ತು ರಕ್ಷಣಾ ಸೇವಾ ವಿಭಾಗದ ವತಿಯಿಂದ ಬೆಂಕಿಯಿಂದ ಸ್ವಯಂ ರಕ್ಷಣೆ ತರಬೇತಿ ನಡೆಯಿತು.ಬೆಂಕಿ ಅನಾಹುತ ಆದಾಗ ರಕ್ಷಿಸುವ ಕುರಿತ ಪ್ರಾತ್ಯಕ್ಷಿಕೆ, ಪ್ರಾಥಮಿಕ ಚಿಕಿತ್ಸೆಯ ಅಣಕು ಪ್ರದರ್ಶನ ನಡೆಯಿತು. ಇಲಾಖೆ ಸಿಬ್ಬಂದಿ ಪ್ರಸೀದ್, ಜಿಪಿನ್, ಅರುಣ್ ಪಿ. ನಾಯರ್ ತರಬೇತಿ ನೀಡಿದರು

ಕಾಸರಗೋಡು: ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಗರದ ಅಗ್ನಿಶಾಮಕದಳ ಮತ್ತು ರಕ್ಷಣಾ ಸೇವಾ ವಿಭಾಗದ ವತಿಯಿಂದ ಬೆಂಕಿಯಿಂದ ಸ್ವಯಂ ರಕ್ಷಣೆ ತರಬೇತಿ ನಡೆಯಿತು.ಬೆಂಕಿ ಅನಾಹುತ ಆದಾಗ ರಕ್ಷಿಸುವ ಕುರಿತ ಪ್ರಾತ್ಯಕ್ಷಿಕೆ, ಪ್ರಾಥಮಿಕ ಚಿಕಿತ್ಸೆಯ ಅಣಕು ಪ್ರದರ್ಶನ ನಡೆಯಿತು. ಇಲಾಖೆ ಸಿಬ್ಬಂದಿ ಪ್ರಸೀದ್, ಜಿಪಿನ್, ಅರುಣ್ ಪಿ. ನಾಯರ್ ತರಬೇತಿ ನೀಡಿದರು. ಆಯ್ದ 70 ಮಂದಿಗೆ ತರಬೇತಿ ನೀಡಲಾಗಿತ್ತು. ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಕುಮಾರ್, ಮುಖ್ಯ ಶಿಕ್ಷಕ ಗಿರೀಶ್ ಎನ್., ಶೈಲಜಾ ಸಿ.ಎಚ್, ರಾಧಾ ಮಾಧವ ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260801-29-1018715430
Read the complete story at Prajavani