ಕಾವೇರಿ: ಸರ್ವಪಕ್ಷ ಸಭೆಯತ್ತ ಚಿತ್ತ
ಬೆಂಗಳೂರು: ಕಾನೂನು ತಜ್ಞರ ಸಲಹೆ ಪಡೆದು, ಆ. 2ರಂದು ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶದ ಕುರಿತು ಅಧಿಕಾರಿಗಳ ಜತೆ ಶುಕ್ರವಾರ ಸುದೀರ್ಘ ಸಭೆ

ಬೆಂಗಳೂರು: ಕಾನೂನು ತಜ್ಞರ ಸಲಹೆ ಪಡೆದು, ಆ. 2ರಂದು ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.ತಮಿಳುನಾಡಿಗೆ ಪ್ರತಿದಿನ 3,500 ಕ್ಯುಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶದ ಕುರಿತು ಅಧಿಕಾರಿಗಳ ಜತೆ ಶುಕ್ರವಾರ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಜುಲೈ ಅಂತ್ಯದವರೆಗೆ ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಹರಿಸಿದ್ದೇವೆ. 100 ವರ್ಷಗಳಲ್ಲಿ ಇದೇ ಮೊದಲ ಬಾರಿ ಅತಿ ಕಡಿಮೆ ನೀರು ಹರಿಸಲಾಗಿದೆ. ತಮಿಳುನಾಡು 9.94 ಟಿಎಂಸಿ ಅಡಿ ನೀರು ಹರಿಸಲು ವಾದ ಮಂಡಿಸಿತ್ತು. 15 ದಿನಗಳವರೆಗೆ 4.5 ಟಿಎಂಸಿ ಅಡಿ ನೀರು ಹರಿಸಲು ಪ್ರಾಧಿಕಾರ ಹೇಳಿದೆ. 2-3 ದಿನಗಳಿಂದ ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ, ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು’ ಎಂದರು. ‘ಪ್ರಾಧಿಕಾರದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗುವುದು. ದೆಹಲಿಯ ಕಾನೂನು ತಜ್ಞರು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷಗಳ ನಾಯಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಪಡೆಯಲಾಗುವುದು. ಕಾವೇರಿ ನದಿ ಭಾಗದ ಜಿಲ್ಲೆಗಳ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ಸಂಕಷ್ಟದ ಸಮಯದಲ್ಲಿ ಕೇಂದ್ರ ಸಚಿವರು, ಬಿಜೆಪಿ ಸಂಸದರೂ ಸಹಕಾರ ನೀಡಿದ್ದಾರೆ’ ಎಂದು ಸ್ಮರಿಸಿದರು.‘ರಾಜ್ಯದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ. 40 ಟಿಎಂಸಿ ಅಡಿ ನೀರಿನ ಅಗತ್ಯವಿದ್ದು, 36 ಟಿಎಂಸಿ ಅಡಿ ಕುಡಿಯಲು ಬಳಸಿಕೊಳ್ಳಲಾಗುತ್ತದೆ. ಹೆಚ್ಚುವರಿ ನೀರನ್ನು ಸಂಕಷ್ಟದ ಪರಿಸ್ಥಿತಿಯ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು’ ಎಂದರು.ತಮಿಳುನಾಡಿಗೇ ಹೆಚ್ಚು ಪ್ರಯೋಜನ:‘ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಪ್ರಯೋಜನ. ಕರ್ನಾಟಕ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಳಸಿಕೊಳ್ಳಲಿದೆ. 66 ಟಿಎಂಸಿ ಅಡಿ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ನೀರು ಹರಿಸುವ ಆದೇಶ ಬಂದಾಗ ಪಾಲನೆ ಮಾಡಲು ನೆರವಾಗುತ್ತದೆ. ಸುಪ್ರೀಂ ಕೋರ್ಟ್ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ನಿರ್ದೇಶನ ನೀಡಿದೆ. ಆದೇಶ ಪಾಲಿಸಲು ಅಭ್ಯಂತರವಿಲ್ಲ. ತಮಿಳುನಾಡು ಸಹ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡಬಹುದು. ಈ ಕುರಿತು ಕೇಂದ್ರ ಸಚಿವರೇ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ. ಆದರೂ ತಮಿಳುನಾಡು ವಿಧಾನಸಭೆಯಲ್ಲಿ ಅಲ್ಲಿನ ಸರ್ಕಾರ ಯೋಜನೆ ವಿರುದ್ಧ ನಿರ್ಣಯ ಮಂಡಿಸಿದೆ. ಅದು ಅವರ ರಾಜಕಾರಣ. ನಮ್ಮ ರಾಜ್ಯದ ಹಿತವನ್ನು ನಾವು ಕಾಪಾಡಬೇಕಾಗುತ್ತದೆ’ ಎಂದರು. ತಮಿಳುನಾಡಿಗೇ ಹೆಚ್ಚು ಪ್ರಯೋಜನ: ‘ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಪ್ರಯೋಜನ. ಕರ್ನಾಟಕ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಳಸಿಕೊಳ್ಳಲಿದೆ. 66 ಟಿಎಂಸಿ ಅಡಿ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ನೀರು ಹರಿಸುವ ಆದೇಶ ಬಂದಾಗ ಪಾಲನೆ ಮಾಡಲು ನೆರವಾಗುತ್ತದೆ. ಸುಪ್ರೀಂ ಕೋರ್ಟ್ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ನಿರ್ದೇಶನ ನೀಡಿದೆ. ಆದೇಶ ಪಾಲಿಸಲು ಅಭ್ಯಂತರವಿಲ್ಲ. ತಮಿಳುನಾಡು ಸಹ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡಬಹುದು. ಈ ಕುರಿತು ಕೇಂದ್ರ ಸಚಿವರೇ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ. ಆದರೂ ತಮಿಳುನಾಡು ವಿಧಾನಸಭೆಯಲ್ಲಿ ಅಲ್ಲಿನ ಸರ್ಕಾರ ಯೋಜನೆ ವಿರುದ್ಧ ನಿರ್ಣಯ ಮಂಡಿಸಿದೆ. ಅದು ಅವರ ರಾಜಕಾರಣ. ನಮ್ಮ ರಾಜ್ಯದ ಹಿತವನ್ನು ನಾವು ಕಾಪಾಡಬೇಕಾಗುತ್ತದೆ’ ಎಂದರು.ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿತಮಿಳುನಾಡು ಅಧಿಕಾರಿಗಳು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿ ಅವಲೋಕಿಸಲಿ, ಕರ್ನಾಟಕವೂ ಅಲ್ಲಿನ ಸ್ಥಿತಿ ವೀಕ್ಷಿಸಲು ನಿಯೋಗ ಕಳುಹಿಸಲು ಸಿದ್ಧ. ನಂತರ ಮಾತುಕತೆ ನಡೆಸಬಹುದು ಬಂದ್ ಕರೆ ವಾಪಸ್ಗೆ ಮನವಿ‘ಕಾವೇರಿ ವಿವಾದಕ್ಕೆ ಬಂದ್ನಿಂದ ಪರಿಹಾರ ಸಿಗುವುದಿಲ್ಲ. ಬಂದ್, ಪ್ರತಿಭಟನೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ನ್ಯಾಯಾಲಯ ಹೇಳಿದೆ. ಹಾಗಾಗಿ, ಬಂದ್ ಕರೆಯನ್ನು ವಾಪಸ್ ಪಡೆಯಬೇಕು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.‘ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ತಮಿಳುನಾಡಿಗೆ ಹರಿದುಹೋಗಿದೆ. ರಾಜ್ಯ ಸರ್ಕಾರ ಜನರ ಪರವಾಗಿದೆ. ಆದರೂ ಪ್ರತಿಭಟನೆ ಮಾಡುತ್ತಿದ್ದಾರೆ.ಆ. 13ರಂದು ಬಂದ್ಗೆ ಕರೆ ನೀಡಿದ್ದಾರೆ. ಇದು ಸರಿಯಲ್ಲ’ ಎಂದರು.ಪ್ರತಿಭಟನೆ ಕಾವು: ವಿಜಯ್ ಭೇಟಿ ರದ್ದುತಮಿಳುನಾಡು ಮುಖ್ಯಮಂತ್ರಿ ಜತೆ ಆ.3ರಂದು ಮಾತುಕತೆ ನಡೆಸಲು ಸಿದ್ಧತೆ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ವಾತಾವರಣ ಉತ್ತಮವಾಗಿಲ್ಲ. ಸಭೆಯನ್ನು ಮುಂದೂಡಲಾಗಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಜೋಸೆಫ್ ವಿಜಯ್ ಅವರನ್ನು ರಾಜ್ಯಕ್ಕೆ ಆಹ್ವಾನಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.‘ಕರ್ನಾಟಕ–ತಮಿಳುನಾಡು ನಡುವಿನ ನೀರು ಹಂಚಿಕೆ ಸಮಸ್ಯೆ ಕುರಿತು ನೇರ ಮಾತುಕತೆ ನಡೆಸಿ, ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಹಿಂದೆ ನಾನೇ ತಮಿಳುನಾಡಿಗೆ ಬರುತ್ತೇನೆ ಎಂದು ಅಲ್ಲಿನ ಸರ್ಕಾರಕ್ಕೆ ತಿಳಿಸಿದ್ದೆ. ಆದರೆ, ಡಿಎಂಕೆ ನೇತೃತ್ವದ ಸರ್ಕಾರ ಸಮ್ಮತಿ ಸೂಚಿಸಿರಲಿಲ್ಲ. ಈಗ ವಿಜಯ್ ಅವರ ಕಚೇರಿಯಿಂದಲೇ ನಮ್ಮ ಸರ್ಕಾರಕ್ಕೆ ಪತ್ರ ಬಂದಿತ್ತು. ಹೊರಗಿನಿಂದ ಅತಿಥಿಗಳು ಬರುವಾಗ ಗೌರವಪೂರ್ವಕವಾಗಿ ಆತಿಥ್ಯ ವಹಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕಾರಣ ಸಭೆಯನ್ನು ಮುಂದೂಡಲಾಗಿದೆ’ ಎಂದರು.ಸರ್ಕಾರದ ಮುಂದಿರುವ ದಾರಿಯೇನು?* ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬೇಕೇ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕೇ ಎಂಬ ಜಿಜ್ಞಾಸೆ ಕರ್ನಾಟಕ ಸರ್ಕಾರದ ಮುಂದಿದೆ.* ‘ಪ್ರಾಧಿಕಾರವು ನೀರಾವರಿ ತಜ್ಞರನ್ನೇ ಒಳಗೊಂಡಿದ್ದು, ಎರಡೂ ರಾಜ್ಯಗಳಲ್ಲಿನ ನೀರು ಸಂಗ್ರಹದ ಮಾಹಿತಿಯನ್ನು ಕಲೆಹಾಕಿಯೇ ಇಂತಹ ಆದೇಶ ಹೊರಡಿಸಿದೆ. ಹಿಂದೆಲ್ಲಾ, ಇಂತಹ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಸುಪ್ರೀಂ ಕೋರ್ಟ್ಗೆ ಹೋದಾಗ, ಸಿಡಬ್ಲ್ಯುಎಂಎ ಆದೇಶ ಪಾಲಿಸಿ ಎಂದು ‘ಛೀಮಾರಿ’ ಹಾಕಿ ಕಳುಹಿಸಿದ ನಿದರ್ಶನಗಳಿವೆ. ಈಗಲೂ ಅದನ್ನು ಮಾಡಿ, ಛೀಮಾರಿ ಹಾಕಿಸಿಕೊಳ್ಳಬೇಕೇ ಅಥವಾ ಸಿಡಬ್ಲ್ಯುಎಂಎ ಆದೇಶ ಪಾಲಿಸಬೇಕೇ ಎಂಬ ಇಕ್ಕಟ್ಟಿನಲ್ಲಿ ಸರ್ಕಾರ ಇದೆ’ ಎಂದು ಜಲಸಂಪನ್ಮೂಲ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.* ‘ರಾಜ್ಯದ ನಾಲ್ಕು ಜಲಾಶಯಗಳಲ್ಲಿ 66 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಒಳಹರಿವು ಹೆಚ್ಚುತ್ತಿದೆ. ಸಂಗ್ರಹಿತ ನೀರಿನಲ್ಲಿ 40 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗಾಗಿ ಬಳಸಬಹುದು. 10 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ನೀರನ್ನು ಹಾಗೆಯೇ ಬಿಟ್ಟರೂ, ಒಳಹರಿವಿನ ಅಂದಾಜು ಪ್ರಮಾಣ ಸೇರಿಸಿದರೆ 16ರಿಂದ 18 ಟಿಎಂಸಿ ಅಡಿ ನೀರು ಲಭ್ಯ ಇದೆ. ಹೀಗಿರುವಾಗ, ಈಗ ದಿನಕ್ಕೆ 3,500 ಕ್ಯುಸೆಕ್ನಂತೆ 4.5 ಟಿಎಂಸಿ ಅಡಿ ನೀರನ್ನು ಹರಿಸಿ, ಮತ್ತೆ ಸಿಡಬ್ಲ್ಯುಎಂಎಗೆ ಮೇಲ್ಮನವಿ ಮಾಡುವುದು. ಅಷ್ಟು ನೀರು ಹರಿಸಿದರೂ ರಾಜ್ಯಕ್ಕೆ ಹೆಚ್ಚುವರಿಯಾಗಿ 11.5ರಿಂದ 13.5 ಟಿಎಂಸಿ ಅಡಿ ನೀರು ಉಳಿಯುತ್ತದೆ’ ಎಂದೂ ಅವರು ಅಭಿಪ್ರಾಯಪಡುತ್ತಾರೆ.ತಮಿಳುನಾಡು ಜತೆ ‘ತುಂಗಭದ್ರಾ’ ಮಾದರಿ ಮಾತುಕತೆ‘ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರ ನೇತೃತ್ವದಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ, ತುಂಗಭದ್ರಾ ಜಲಾಶಯದ ನೀರಿನ ಸಮಸ್ಯೆ ಕುರಿತು ಚರ್ಚಿಸಲಾಗಿದೆ’ ಎಂದು ಶಿವಕುಮಾರ್ ಹೇಳಿದರು.‘ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು, 33 ಟಿಎಂಸಿ ಅಡಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿದಂತೆ ಪರ್ಯಾಯ ಆಯ್ಕೆಗಳ ಬಗ್ಗೆ ಚರ್ಚಿಸಲಾಗಿದೆ. ನದಿ ಜೋಡಣೆ ಕುರಿತು ಒಮ್ಮತದ ತೀರ್ಮಾನ ಮಾಡಲಾಗಿದೆ. ಈ ಕಾರ್ಯವನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಗುವುದು. ಕೇಂದ್ರ ಸರ್ಕಾರ ಶೇ 90ರಷ್ಟು ಹಣ ಭರಿಸಲಿದೆ. ಇದೇ ಮಾದರಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ತಮಿಳುನಾಡು ಮುಖ್ಯಮಂತ್ರಿ ಜತೆಗೂ ಮಾತುಕತೆ ನಡೆಸಲಾಗುವುದು’ ಎಂದರು. ಹೆಚ್ಚುವರಿ ಕುರುವೈ ಬೆಳೆಗೆ ಆಕ್ಷೇಪನವದೆಹಲಿ: ಕಾವೇರಿ ನ್ಯಾಯಮಂಡಳಿ ತೀರ್ಪು ಉಲ್ಲಂಘಿಸಿ ತಮಿಳುನಾಡಿನಲ್ಲಿ ದುಪ್ಪಟ್ಟು ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯಲಾಗಿದೆ ಎಂದು ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಗುರುವಾರ ಇಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ತಮಿಳುನಾಡು ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.ತಮಿಳುನಾಡಿನಲ್ಲಿ ವರ್ಷಕ್ಕೆ 4.40 ಲಕ್ಷ ಎಕರೆಯಲ್ಲಿ ಕುರುವೈ ಬೆಳೆ ಬೆಳೆಯಬಹುದು. ಆದರೆ, ಜೂನ್ ಹಾಗೂ ಜುಲೈ ತಿಂಗಳಿನಲ್ಲೇ 3.47 ಲಕ್ಷ ಎಕರೆಯಲ್ಲಿ ಕುರುವೈ ಬೆಳೆ ಬೆಳೆಯಲಾಗುತ್ತಿದೆ. ಇದು, ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ಅವರು ದೂಷಿಸಿದರು.ಈ ವರ್ಷ ಬರಗಾಲದ ಪರಿಸ್ಥಿತಿ ಇರಲಿದೆ; ಹೀಗಾಗಿ, ಕುಡಿಯುವ ನೀರಿನ ಬಳಕೆಗಷ್ಟೇ ಜಲಾಶಯಗಳ ನೀರನ್ನು ಬಳಸಿಕೊಳ್ಳಬೇಕು, ನೀರನ್ನು ಮಿತವಾಗಿ ಬಳಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿಯು ನಾಲ್ಕು ರಾಜ್ಯಗಳಿಗೆ ಸಲಹೆ ನೀಡಿದ್ದವು. ಈ ಸಲಹೆಯನ್ನು ಕರ್ನಾಟಕ ಸರ್ಕಾರ ಚಾಚೂತಪ್ಪದೆ ಪಾಲಿಸಿದೆ. ಆದರೆ, ತಮಿಳುನಾಡು ಸರ್ಕಾರವು ಕೃಷಿಗೆ ವ್ಯಾಪಕ ಪ್ರಮಾಣದಲ್ಲಿ ಜಲಾಶಯಗಳಿಂದ ನೀರನ್ನು ಬಿಡುತ್ತಿದೆ ಎಂದು ಅವರು ಆರೋಪಿಸಿದರು.ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಿಂದ ನೀರು ಹರಿದ ಪರಿಣಾಮವಾಗಿ ಮೆಟ್ಟೂರು ಜಲಾಶಯದಲ್ಲಿ ಜೂನ್ 1ರಂದು 41.25 ಟಿಎಂಸಿ ಅಡಿ ನೀರು ಇತ್ತು. ಸುಪ್ರೀಂ ಕೋರ್ಟ್ ಮಾರ್ಪಡಿಸಿದ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ, ಕ್ಯಾರಿ ಓವರ್ ಸಂಗ್ರಹವನ್ನೂ ಪರಿಗಣಿಸಬೇಕು. ಇದನ್ನು ಈ ವರ್ಷ ಕರ್ನಾಟಕ ಹರಿಸಿದ ನೀರು ಎಂದೇ ಪರಿಗಣಿಸಬೇಕು. ಈ ವರ್ಷ ಬರಗಾಲದ ವರ್ಷ. ಸಂಕಷ್ಟ ಸೂತ್ರ ಪರಿಗಣಿಸಿದರೆ, ಕರ್ನಾಟಕವು ತಮಿಳುನಾಡಿಗೆ ನಿಗದಿಗಿಂತ ಹೆಚ್ಚೇ ನೀರು ಹರಿಸಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.ಈ ಹಿಂದೆ ಏಪ್ರಿಲ್ –ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತು. ಈ ವರ್ಷ ಮಳೆಯಾಗಿಲ್ಲ. ಇದ ರಿಂದಾಗಿ, ಕೆಆರ್ಎಸ್ ಹಾಗೂ ಕಬಿನಿಯ ಕೆಳಗಿನ ಪ್ರದೇಶಗಳು ಏಪ್ರಿಲ್ನಿಂದ ಒಣಗಿವೆ. ಬಿಳಿಗುಂಡ್ಲು ವಿನಲ್ಲಿ 3,500 ಕ್ಯುಸೆಕ್ ನೀರಿನ ಹರಿವನ್ನು ಖಚಿತ ಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ’ಎಂದರು.