ಬೀದರ್ | ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಚುರುಕು
ಶಹಾಪುರ: ಬೀದರ್-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಭೀಮರಾಯನಗುಡಿ ಕೃಷ್ಣಾ ಜಲಭಾಗ್ಯ ನಿಗಮದ (ಕೆಬಿಜೆಎನ್ಎಲ್) ಆರು ಎಕರೆ ಜಮೀನು. ಕಂದಾಯ ಇಲಾಖೆಗೆ ಹಸ್ತಾಂತರಿಸಿ ₹17 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಸದ್ದಿಲ್ಲದೆ ಚುರುಕಿನಿಂದ ಸಾಗಿದೆ.ಈಗಾಗಲೇ ವಿಶಾಲ ಪ್ರದೇಶ ಸ್ವಚ್ಛತಗೊಳಿಸಿ ಕಟ್ಟಡ ಕಾಮಗಾರಿಗೆ ಬೇಕಾದ ಅಗತ್ಯ

ಶಹಾಪುರ: ಬೀದರ್-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಭೀಮರಾಯನಗುಡಿ ಕೃಷ್ಣಾ ಜಲಭಾಗ್ಯ ನಿಗಮದ (ಕೆಬಿಜೆಎನ್ಎಲ್) ಆರು ಎಕರೆ ಜಮೀನು. ಕಂದಾಯ ಇಲಾಖೆಗೆ ಹಸ್ತಾಂತರಿಸಿ ₹17 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಸದ್ದಿಲ್ಲದೆ ಚುರುಕಿನಿಂದ ಸಾಗಿದೆ.ಈಗಾಗಲೇ ವಿಶಾಲ ಪ್ರದೇಶ ಸ್ವಚ್ಛತಗೊಳಿಸಿ ಕಟ್ಟಡ ಕಾಮಗಾರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಅಡಿಪಾಯ ಹಾಕಲು ಜಮೀನು ಸಮತಟ್ಟು ಮಾಡಲಾಗುತ್ತಿದೆ. ನಿರಂತರ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆದು ಬೇರೆಡೆ ಸ್ಥಳಾಂತರಿಸುವ ಕೆಲಸ ಆರಂಭವಾಗಿದೆ.ತಾಲ್ಲೂಕಿನ ಶಖಾಪುರ ಗ್ರಾಮದ ವ್ಯಾಪ್ತಿಯಲ್ಲಿನ ಕೆಬಿಜೆಎನ್ಎಲ್ ನಿಗಮದ ವ್ಯಾಪ್ತಿಗೆ ಸೇರಿದ ಸರ್ವೆ ನಂಬರ 12/1ರಲ್ಲಿ 6.28 ಗುಂಟೆ ಜಮೀನು ಪ್ರಜಾಸೌಧ ನಿರ್ಮಾಣಕ್ಕಾಗಿ ನೀಡುವಂತೆ ಕೃಷ್ಣಾ ಕಾಡಾ ಆಡಳಿತಾಧಿಕಾರಿಗೆ ತಹಶೀಲ್ದಾರ್ ನಿವೇದಿಸಿಕೊಂಡಿದ್ದರು. ಸಧ್ಯ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಜಾಸೌಧ ನಿರ್ಮಾಣವಾಗಲಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ 4 ಎಕರೆ ಜಮೀನು ವಶಪಡಿಸಿಕೊಂಡು ಕಟ್ಟಡ ಕಾಮಗಾರಿಗೆ ಅಣಿಯಾಗಬೇಕು ಎನ್ನುವಷ್ಟರಲ್ಲಿ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರಿಂದ ಕಟ್ಟಡ ಬೇರೆ ಕಡೆ ನಿರ್ಮಿಸುವ ಸ್ಥಿತಿ ಬಂದಿತು. ಕೊನೆಗೆ ಸೂಕ್ತ ಸ್ಥಳದಲ್ಲಿ ಕೆಲಸ ಆರಂಭಿಸುವುದು ಅಭಿವೃದ್ಧಿಗೆ ಉತ್ತಮ ಬೆಳವಣಿಗೆಯಾಗಲಿದೆ. ಗ್ರಾಮೀಣ ಪ್ರದೇಶದ ಜನತೆಗೆ ಹಾಗೂ ಸಂಚಾರಕ್ಕೆ ಅಡೆತಡೆ ಇಲ್ಲ ಎನ್ನುತ್ತಾರೆ ಬಿಜೆಪಿಯ ಹಿರಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಹಾಗೂ ಅಶೋಕರಾವ ಮಲ್ಲಬಾದಿ.ಈಗ ನಿರ್ಮಿಸುತ್ತಿರುವ ಪ್ರಜಾಸೌಧ ನಗರದಿಂದ 5 ಕಿ.ಮೀ ದೂರದಲ್ಲಿದೆ. ತಹಶೀಲ್ದಾರ್ ಕಚೇರಿ ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಇರಬೇಕು. ಯಾವುದೇ ಅಭಿವೃದ್ಧಿ ಕೆಲಸ ಜನಪರ ಕೆಲಸವಾಗಬೇಕು. ಗ್ರಾಮೀಣ ಪ್ರದೇಶದ ಜನತೆ ತಹಶೀಲ್ದಾರ್ ಕಚೇರಿಗೆ ತೆರಳಬೇಕಾದರೆ ಹೆಚ್ಚಿನ ಹಣ ವೆಚ್ಚ ಮಾಡುವಂತೆ ಆಗುತ್ತದೆ. ಹಳೆ ತಹಶೀಲ್ದಾರ್ ಕಚೇರಿಯಲ್ಲಿ ಪ್ರಜಾಸೌಧ ನಿರ್ಮಾಣವಾದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ತಿಳಿಸಿದರು.ಭೂಮಿ ಪೂಜೆ ಇಲ್ಲದೆ ಕಾಮಗಾರಿಶಹಾಪುರ: ಜನರ ಆಶೋತ್ತರವಾಗಿ ₹17 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣದ ಕಟ್ಟಡ ಕಾಮಗಾರಿಗೆ ಶಿಷ್ಟಾಚಾರದ ಪ್ರಕಾರ ಭೂಮಿಪೂಜೆ ನೆರವೇರಿಸಿ ಕೆಲಸ ಆರಂಭಿಸಲಾಗುತ್ತದೆ. ಆದರೆ ಸದ್ಯ ಪ್ರಜಾಸೌಧ ನಿರ್ಮಾಣದ ಕೆಲಸಕ್ಕೆ ಯಾವುದೇ ಪೂಜೆ ಇಲ್ಲದೆ ನೇರವಾಗಿ ಕಟ್ಟಡ ಕೆಲಸ ಆರಂಭಿಸಿರುವುದು ಕೂತೂಹಲ ಮೂಡಿಸಿದೆ.ಸಿದ್ದಾರೂಢ ಬನ್ನಿಕೊಪ್ಪ, ತಹಶೀಲ್ದಾರ್ ಶಹಾಪುರಆರು ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಾಣದ ತಳಮಟ್ಟದ ಕಾಮಗಾರಿ ನಡೆದಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕಿದೆ ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260801-30-1448633118