ಬೆಳ್ತಂಗಡಿ | ಭಾರಿ ಮಳೆ, ಪ್ರವಾಹ ಭೀತಿ: ಲಾಯಿಲ - ಕಿಲ್ಲೂರು ರಸ್ತೆ ಬಂದ್
ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಶನಿವಾರ ಭಾರಿ ಮಳೆ ಸುರಿಯುತ್ತಿದ್ದು ಬಹುತೇಕ ಕಡೆ ಪ್ರವಾಹದ ಭೀತಿ ತಲೆದೋರಿದೆ.Karnataka Rains | ಮಡಿಕೇರಿಯಲ್ಲಿ ಭಾರಿ ಮಳೆ: ತಡೆಗೋಡೆ ಕುಸಿತಲಾಯಿಲ - ಕಿಲ್ಲೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆತಾಲ್ಲೂಕಿನ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ಸೇರಿಂದತೆ ಎಲ್ಲಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ
ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಶನಿವಾರ ಭಾರಿ ಮಳೆ ಸುರಿಯುತ್ತಿದ್ದು ಬಹುತೇಕ ಕಡೆ ಪ್ರವಾಹದ ಭೀತಿ ತಲೆದೋರಿದೆ.Karnataka Rains | ಮಡಿಕೇರಿಯಲ್ಲಿ ಭಾರಿ ಮಳೆ: ತಡೆಗೋಡೆ ಕುಸಿತಲಾಯಿಲ - ಕಿಲ್ಲೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆತಾಲ್ಲೂಕಿನ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ಸೇರಿಂದತೆ ಎಲ್ಲಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕೃಷಿ ಭೂಮಿಗಳು ಹಾಗೂ ಅಡಿಕೆ ತೋಟಗಳು ಕೃತಕ ನೆರೆಗೆ ಸಿಲುಕಿ ಭಾರೀ ಹಾನಿಯಾಗಿದೆ. ರಸ್ತೆಯಲ್ಲಿಯೇ ನದಿಯಂತೆ ನೀರು ಹರಿಯುತ್ತಿರುವುದರಿಂದ ಲಾಯಿಲ - ಕಿಲ್ಲೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಧರ್ಮಸ್ಥಳದ ಮಣ್ಣಸಂಕ ಪ್ರದೇಶ ಮುಳುಗಡೆಯಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ.ಫಲ್ಗುಣಿ ನದಿKarnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆಇನ್ನು ಸೋಮಂತಡ್ಕ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಎರಡೂ ಬದಿಯ ಮಳೆ ನೀರನ್ನು ಒಂದೇ ಚರಂಡಿಗೆ ಹರಿಸಿರುವುದರಿಂದ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಿಂದೆ ಇದ್ದಂತೆ ನೀರು ಹರಿಯುವ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.ತಾಲ್ಲೂಕಿನ ಬಹುತೇಕ ಎಲ್ಲಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಬಹುತೇಕ ಅಣೆಕಟ್ಟೆಗಳು ಮುಳುಗಿದ್ದು, ಮುಂಡಾಜೆ, ಪುದುವೆಟ್ಟು, ಕಿಲ್ಲೂರು, ಶಿರ್ಲಾಲು, ಸುಲ್ಕೇರಿಮೊಗ್ರು , ಚಾರ್ಮಾಡಿ, ನೆರಿಯ ಈ ಮುಂತಾದ ಭಾಗಗಳಲ್ಲಿ ಕೃಷಿ ತೋಟಗಳು ಭಾಗಶಃ ಮುಳುಗಡೆಯಾಗಿವೆ...ಮಲೆನಾಡಿನಲ್ಲಿ ಮಳೆ ಚುರುಕು: ತುಂಗಾ ಜಲಾಶಯದಿಂದ 55,197 ಕ್ಯುಸೆಕ್ ನೀರು ಹೊರಕ್ಕೆ