ಯುವಶಕ್ತಿ ರಾಷ್ಟ್ರದ ಆಸ್ತಿ: ಥಾವರಚಂದ್ ಗೆಹಲೋತ್
ಕೆಂಗೇರಿ: ದೇಶದ ಯುವಶಕ್ತಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿಕೊಂಡರೆ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ಅವಧಿಗೆ ಮೊದಲೇ ಸಾಕಾರಗೊಳ್ಳಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.ದಿಶಾಬೋಧ್ ಫೌಂಡೇಷನ್ನ ಸಹಯೋಗದೊಂದಿಗೆ ರಾಜರಾಜೇಶ್ವರಿ ಸಮೂಹ ಸಂಸ್ಥೆ ಆಯೋಜಿಸಿದ್ದ ನಶಾ ಮುಕ್ತ ಯುವ ಭಾರತ ಸಂಕಲ್ಪ ಅಭಿಯಾನದಲ್ಲಿ ಅವ
ಕೆಂಗೇರಿ: ದೇಶದ ಯುವಶಕ್ತಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿಕೊಂಡರೆ ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ಅವಧಿಗೆ ಮೊದಲೇ ಸಾಕಾರಗೊಳ್ಳಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.ದಿಶಾಬೋಧ್ ಫೌಂಡೇಷನ್ನ ಸಹಯೋಗದೊಂದಿಗೆ ರಾಜರಾಜೇಶ್ವರಿ ಸಮೂಹ ಸಂಸ್ಥೆ ಆಯೋಜಿಸಿದ್ದ ನಶಾ ಮುಕ್ತ ಯುವ ಭಾರತ ಸಂಕಲ್ಪ ಅಭಿಯಾನದಲ್ಲಿ ಅವರು ಮಾತನಾಡಿದರು.ಡ್ರಗ್ಸ್ ಸೇರಿದಂತೆ ಯುವ ಜನರನ್ನು ಕಾಡುತ್ತಿರುವ ಮಾರಕ ಚಟಗಳ ವಿರುದ್ದ ಜನಾಂದೋಲನ ಆರಂಭಿಸುವ ನಿಟ್ಟಿನಲ್ಲಿ ಮೋದಿ ಅವರು ರಾಷ್ಟ್ರ ವ್ಯಾಪಿ ಕಾರ್ಯಕ್ರಮ ಆಯೋಜನೆಗೆ ಒತ್ತು ನೀಡುತ್ತಿದ್ದಾರೆ. ಆರೋಗ್ಯವಂತ ಹಾಗೂ ಸುಶಿಕ್ಷಿತ ಯುವ ಜನಾಂಗವೇ ರಾಷ್ಟ್ರದ ನಿಜವಾದ ಆಸ್ತಿ ಮತ್ತು ಶಕ್ತಿಯಾಗಿದೆ. ಯುವಶಕ್ತಿಯನ್ನು ದುಶ್ಚಟಗಳಿಂದ, ನಕಾರಾತ್ಮಕ ಚಿಂತನೆಗಳಿಂದ ದೂರವಿರಿಸಿದರೆ ರಾಷ್ಟ್ರದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ತಿಳಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಭಗವಾನ್, ಆರ್.ಆರ್ ಮೆಡಿಕಲ್ ಕಾಲೇಜು ಅಧ್ಯಕ್ಷಎ.ಸಿ.ಎಸ್. ಅರುಣ್ ಕುಮಾರ್, ಸಿಇಒ ಸೀತಾರಾಮ್, ಡೀನ್ ಸತ್ಯಮೂರ್ತಿ ಬಿ., ವೈದ್ಯಕೀಯ ಸಲಹೆಗಾರ ಎಸ್. ನವೀನ್ ಉಪಸ್ಥಿತರಿದ್ದರು.