ಲಾಲ್ ಬಾಗ್ ಬಂಡೆ ಕೊರೆದು ಸುರಂಗ ಮಾಡುವ ಅಗತ್ಯವಿಲ್ಲ: ಸರ್ಕಾರಕ್ಕೆ ವಾಕರ್ಸ್ ಮನವಿ
ಬೆಂಗಳೂರು: ಲಾಲ್ಬಾಗ್ನ 50 ಅಡಿಯಿಂದ 100 ಅಡಿ ಕೆಳಭಾಗದಲ್ಲಿ ಎಕ್ಸ್ಪ್ರೆಸ್ ಹೈವೇಯಂತೆ ಒಟ್ಟು ಹತ್ತು ಪಥಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ಕ್ರಮವನ್ನು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಇಂದು (ಆಗಸ್ಟ್ 2) ಬೆಳಿಗ್ಗೆ ಲಾಲ್ ಬಾಗ್ ವಾಕರ್ಸ್ ಅಸೋಸಿಯೇಶನ್ ವತಿಯಿಂದ ‘ಲಾಲ್ ಬಾಗ್ ಬಂಡೆ ಉಳಿಸಿ’ ಜಾಗೃತಿ ಅಭಿಯಾನ ಹಂಬಿಕೊಳ್ಳಲಾಗಿತ್ತು. ಈ ವೇಳೆ

ಬೆಂಗಳೂರು: ಲಾಲ್ಬಾಗ್ನ 50 ಅಡಿಯಿಂದ 100 ಅಡಿ ಕೆಳಭಾಗದಲ್ಲಿ ಎಕ್ಸ್ಪ್ರೆಸ್ ಹೈವೇಯಂತೆ ಒಟ್ಟು ಹತ್ತು ಪಥಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ಕ್ರಮವನ್ನು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಇಂದು (ಆಗಸ್ಟ್ 2) ಬೆಳಿಗ್ಗೆ ಲಾಲ್ ಬಾಗ್ ವಾಕರ್ಸ್ ಅಸೋಸಿಯೇಶನ್ ವತಿಯಿಂದ ‘ಲಾಲ್ ಬಾಗ್ ಬಂಡೆ ಉಳಿಸಿ’ ಜಾಗೃತಿ ಅಭಿಯಾನ ಹಂಬಿಕೊಳ್ಳಲಾಗಿತ್ತು. ಈ ವೇಳೆ ಹಲವು ಸಾರ್ವಜನಿಕರು ಭಾಗಿಯಾಗಿ, ‘ಬೇಡ ಬೇಡ ಸುರಂಗ ಬೇಡ’ ಎಂಬ ಘೋಷಣೆ ಕೂಗಿದರು, ಮಾತ್ರವಲ್ಲ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಾಲ್ ಬಾಗ್ ಬಂಡೆಯನ್ನು ಉಳಿಸಿ ಎಂದು ಆಗ್ರಹಿಸಿದರು.ಸುರಂಗ ಮಾರ್ಗ ಯೋಜನೆ ವಿರೋಧಿಸಿ, ಲಾಲ್ಬಾಗ್ ವಾಕರ್ಸ್ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು.’ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿರುವ ಬಂಡೆಯನ್ನು ಹಾನಿ ಮಾಡುವ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಈ ಕಾಮಗಾರಿಯನ್ನು ಹಿಂಪಡೆಯಬೇಕು’ ಎಂದು ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಉಮೇಶ್ ಆಗ್ರಹಿಸಿದರು. ‘ಸರ್ಕಾರ ಜನರ ಹಿತದೃಷ್ಟಿಯಿಂದಲೇ ಕಾಮಗಾರಿ ಮಾಡಲು ಉದ್ದೇಶಿಸಿದೆ. ಆದರೆ, ಇದರಿಂದ ಪರಿಸರ ನಾಶ ಉಂಟಾಗುತ್ತದೆ. ಹಾಗಾಗಿ, ಈ ಜಾಗವನ್ನು ಬದಲಿಸಿ ಬೇರೆ ಟ್ರ್ಯಾಕ್ನಲ್ಲಿ ಕಾಮಗಾರಿ ಮಾಡಿ’ ಎಂದು ಮಹಿಳೆ ಒಬ್ಬರು ಆಗ್ರಹಿಸಿದರು.ಅಶೋಕ ಪಿಲ್ಲರ್ ವೃತ್ತದಲ್ಲಿ ಪ್ರವೇಶ ರ್ಯಾಂಪ್ ನಿರ್ಮಾಣಕ್ಕೆ ಪ್ರಸ್ತಾಪಿಸಿರುವ ಎರಡು ಪಥಗಳು, ಲಾಲ್ಬಾಗ್ ಕೆರೆಗೆ ಸಮೀಪವೇ ಹಾದುಹೋಗಿ, ಆರು ಪಥಗಗಳ ಸುರಂಗ ರಸ್ತೆಯನ್ನು ಹೆಬ್ಬಾಳದತ್ತ ಸೇರಿಕೊಳ್ಳಲಿವೆ. ಮತ್ತೊಂದು, 1.1 ಕಿ.ಮೀ ಉದ್ದದ ಎರಡು ಪಥಗಳ ರ್ಯಾಂಪ್, ಲಾಲ್ಬಾಗ್ ಒಳಗಿರುವ ಮೂರು ಶತಕೋಟಿ ವರ್ಷಗಳಿಗೂ ಹಿಂದೆ ನಿರ್ಮಾಣವಾಗಿರುವ ಬೃಹತ್ ಬಂಡೆಯ ಕೆಳಭಾಗದಲ್ಲಿ ಹಾದುಹೋಗಿ, ಸಿದ್ದಾಪುರ ರಸ್ತೆ ಮರಿಗೌಡ ಜಂಕ್ಷನ್ನಲ್ಲಿ ಈಗಾಗಲೇ ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿ ನಿರ್ಗಮನ ಹೊಂದಲಿದೆ.