ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ: ಹಲವು ರೈಲುಗಳ ಮಾರ್ಗ ಬದಲು
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲು ಹಳಿಯ ಬಳಿ ಶನಿವಾರ ರಾತ್ರಿ ಭೂಕುಸಿತ ಸಂಭವಿಸಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಭಾನುವಾರ ಸಂಚರಿಸಲಿದ್ದ ಹಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿರುವ ರೈಲುಗಳ ವಿವರ: ವಿಜಯಪುರ
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಭಾರಿ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲು ಹಳಿಯ ಬಳಿ ಶನಿವಾರ ರಾತ್ರಿ ಭೂಕುಸಿತ ಸಂಭವಿಸಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಭಾನುವಾರ ಸಂಚರಿಸಲಿದ್ದ ಹಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿರುವ ರೈಲುಗಳ ವಿವರ: ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲು (17377), ಎಸ್.ಎಸ್.ಎಸ್ ಹುಬ್ಬಳ್ಳಿ – ಅರಸೀಕೆರೆ – ಹಾಸನ – ಸಕಲೇಶಪುರ – ಸುಬ್ರಹ್ಮಣ್ಯ ರೋಡ್ – ಪಾಡಿಲ್ – ಮಂಗಳೂರು ಜಂಕ್ಷನ್ ಮಾರ್ಗದ ಬದಲು ಎಸ್.ಎಸ್.ಎಸ್ ಹುಬ್ಬಳ್ಳಿ – ಲೋಂಡಾ – ಕ್ಯಾಸಲ್ ರಾಕ್ – ಮಡಗಾಂವ್ – ಕಾರವಾರ – ತೋಕೂರು – ಮಂಗಳೂರು ಜಂಕ್ಷನ್ ಮಾರ್ಗದ ಮೂಲಕ ಸಂಚರಿಸಲಿದೆ. ಈ ರೈಲಿಗೆ ಯಳವಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ನಿಲ್ದಾಣಗಳ ಮೂಲಕ ಸಂಚರಿಸುವುದಿಲ್ಲ.ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್ಪ್ರೆಸ್ ರೈಲು (17378) ಮಂಗಳೂರು ಜಂಕ್ಷನ್ – ಪಡೀಲ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಅರಸೀಕೆರೆ – ಎಸ್.ಎಸ್.ಎಸ್ ಹುಬ್ಬಳ್ಳಿ ಮಾರ್ಗದ ಬದಲು ಮಂಗಳೂರು ಜಂಕ್ಷನ್ – ತೋಕೂರು – ಕಾರವಾರ – ಮಡಗಾಂವ್ – ಕ್ಯಾಸಲ್ ರಾಕ್ – ಲೋಂಡಾ – ಎಸ್.ಎಸ್.ಎಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಅರಸೀಕೆರೆ, ಬೀರೂರು, ಕಡೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಳವಗಿ ಮಾರ್ಗದ ಮೂಲಕಸಂಚರಿಸುವುದಿಲ್ಲ. ಮುರುಡೇಶ್ವರ – ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು (16586) ಮುರುಡೇಶ್ವರ – ತೋಕೂರು – ಮಂಗಳೂರು ಸೆಂಟ್ರಲ್ – ಪಡೀಲ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಮೈಸೂರು – ಕೆ.ಎಸ್.ಆರ್ ಬೆಂಗಳೂರು ಮಾರ್ಗದ ಬದಲು ಮುರುಡೇಶ್ವರ – ತೋಕೂರು – ಮಂಗಳೂರು ಸೆಂಟ್ರಲ್ – ಕಣ್ಣೂರು – ಶೋರನೂರು – ಪಾಲಕ್ಕಾಡ್ – ಪೋದನೂರು – ಜೊಳರಪೇಟೆ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಮ್ವಿಟಿ) ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಹೊಳೆ ನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಗಳ ಮೂಲಕ ಸಂಚರಿಸುವುದಿಲ್ಲ. ಈ ರೈಲು ಬೆಂಗಳೂರಿನ ಕೆ.ಎಸ್.ಆರ್ ನಿಲ್ದಾಣದ ಬದಲಿಗೆ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ (ಎಸ್ಎಂವಿಟಿ) ಪ್ರಯಾಣ ಕೊನೆಗೊಳಿಸಲಿದೆ.ಕೋಯಿಕ್ಕೋಡ್ – ಕೆ.ಎಸ್.ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು (16512) ಕಣ್ಣೂರು – ಮಂಗಳೂರು ಸೆಂಟ್ರಲ್ – ಮಂಗಳೂರು ಜಂಕ್ಷನ್ – ಪಡೀಲ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಚನ್ನರಾಯಪಟ್ಟಣ – ಯಶವಂತಪುರ ಮಾರ್ಗದ ಬದಲು ಮಂಗಳೂರು ಸೆಂಟ್ರಲ್ – ಕಣ್ಣೂರು – ಶ್ವರ್ಣೂರು – ಪಾಲಕ್ಕಾಡ್ – ಪೋದನೂರು – ಜೋಳರಪೇಟೆ ಮಾರ್ಗವಾಗಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ತಲುಪಲಿದೆ.ಈ ರೈಲು ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಬಿ. ಜಿ. ನಗರ, ಕುಣಿಗಲ್, ಯಶವಂತಪುರ, ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಗಳಿಗೆ ತಲುಪುವುದಿಲ್ಲ. ಈ ರೈಲು ಕೂಡ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಮ್ವಿಟಿ)ನಲ್ಲಿ ಪ್ರಯಾಣ ಕೊನೆಗೊಳಿಸಲಲಿದೆ. ಕೆ.ಎಸ್.ಆರ್ ಬೆಂಗಳೂರು – ಕೋಯಿಕ್ಕೋಡ್ ಎಕ್ಸ್ಪ್ರೆಸ್ ರೈಲು ( 16511) ಬೆಂಗಳೂರಿನ ಕೆ.ಎಸ್.ಆರ್ (ಎಸ್ ಬಿಸಿ) ಬದಲಿಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಡಲಿದೆ. ಯಶವಂತಪುರ – ಚನ್ನರಾಯಪಟ್ಟಣ – ಹಾಸನ – ಸಕಲೇಶಪುರ – ಸುಬ್ರಹ್ಮಣ್ಯ ರೋಡ್ – ಪಾಡಿಲ್ – ಮಂಗಳೂರು ಜಂಕ್ಷನ್ – ಮಂಗಳೂರು ಸೆಂಟ್ರಲ್ – ಕಣ್ಣೂರು – ಕೋಯಿಕ್ಕೋಡ್ ಮಾರ್ಗದ ಬದಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಜೋಳರಪೇಟೆ ಜಂಕ್ಷನ್ – ಪೋದನೂರು ಜಂಕ್ಷನ್ – ಪಾಲಕ್ಕಾಡ್ ಜಂಕ್ಷನ್ – ಶ್ವರ್ಣೂರು ಜಂಕ್ಷನ್ – ಕೋಯಿಕ್ಕೋಡ್ – ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ. ಈ ರೈಲು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಬಿ. ಜಿ. ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳನ್ನು ತಲುಪುವುದಿಲ್ಲ. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ – ಮುರುಡೇಶ್ವರ ಎಕ್ಸ್ಪ್ರೆಸ್ ರೈಲು (16585), ಕೆ.ಎಸ್.ಆರ್ ಬೆಂಗಳೂರು – ಮೈಸೂರು – ಹಾಸನ – ಸಕಲೇಶಪುರ – ಸುಬ್ರಹ್ಮಣ್ಯ ರೋಡ್ – ಪಡೀಲ್ – ಮಂಗಳೂರು ಜಂಕ್ಷನ್ – ತೋಕೂರು – ಮುರುಡೇಶ್ವರ ಮಾರ್ಗದ ಬದಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಒಮಲೂರು ಜಂಕ್ಷನ್ – ಪೋದನೂರು ಜಂಕ್ಷನ್ – ಪಾಲಕ್ಕಾಡ್ ಜಂಕ್ಷನ್ – ಶ್ವರ್ಣೂರು ಜಂಕ್ಷನ್ – ಕಣ್ಣೂರು – ತೋಕೂರು – ಮುರುಡೇಶ್ವರ ಮಾರ್ಗವಾಗಿ ಸಂಚರಿಸಲಿದೆ.ಈ ರೈಲು ಕೆ.ಎಸ್.ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಜಂಕ್ಷನ್, ಕೃಷ್ಣರಾಜನಗರ, ಹೊಳೆ ನರಸೀಪುರ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳನ್ನು ತಲುಪುವುದಿಲ್ಲ.ಪ್ರಯಾಣಿಕರು ರೈಲು ವೇಳಾಪಟ್ಟಿಯ ಈ ಬದಲಾವಣೆಗಳನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಮರುಯೋಜಿಸುವಂತೆ ನೈರುತ್ಯ ರೈಲ್ವೆ ಕೋರಿದೆ. ತಾಜಾ ವಿವರಗಳಿಗಾಗಿ ಅಧಿಕೃತ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (ಎನ್ ಟಿ ಇಎಸ್) ಆ್ಯಪ್ ಅಥವಾ ರೈಲ್ವೆ ಇಲಾಖೆಯ ವೆಬ್ಸೈಟ್ ನೋಡಬಹುದು ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.