ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರ ಸಾವು
ತಿ.ನರಸೀಪುರ (ಮೈಸೂರು): ತಾಲ್ಲೂಕಿನ ಬೂದಹಳ್ಳಿಯಲ್ಲಿ ಶನಿವಾರ ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.ಬೂದಹಳ್ಳಿಯ ರಾಜೇಶ್(32), ನಾಗರಾಜು(62) ಹಾಗೂ ನಾರಾಯಣ(53) ಮೃತ ಕಾರ್ಮಿಕರು. ಗ್ರಾಮದ ಸಿದ್ದರಾಜು ಎಂಬುವರಿಗೆ ಸೇರಿದ ಇಟ್ಟಿಗೆಗೂಡಲ್ಲಿ ಇಟ್ಟಿಗೆ ಸುಡಲು ಹಾಕಿದ್ದ ಬೆಂಕಿಯನ್ನು ಪೂರ್ಣ ನಂದಿಸುವ ಮೊದಲೇ ಇಟ್ಟಿಗೆಗೂಡನ್ನು ಬಿಚ್ಚಿದ್ದರಿಂ

ತಿ.ನರಸೀಪುರ (ಮೈಸೂರು): ತಾಲ್ಲೂಕಿನ ಬೂದಹಳ್ಳಿಯಲ್ಲಿ ಶನಿವಾರ ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.ಬೂದಹಳ್ಳಿಯ ರಾಜೇಶ್(32), ನಾಗರಾಜು(62) ಹಾಗೂ ನಾರಾಯಣ(53) ಮೃತ ಕಾರ್ಮಿಕರು. ಗ್ರಾಮದ ಸಿದ್ದರಾಜು ಎಂಬುವರಿಗೆ ಸೇರಿದ ಇಟ್ಟಿಗೆಗೂಡಲ್ಲಿ ಇಟ್ಟಿಗೆ ಸುಡಲು ಹಾಕಿದ್ದ ಬೆಂಕಿಯನ್ನು ಪೂರ್ಣ ನಂದಿಸುವ ಮೊದಲೇ ಇಟ್ಟಿಗೆಗೂಡನ್ನು ಬಿಚ್ಚಿದ್ದರಿಂದ ಅದು ಕಾರ್ಮಿಕರ ಮೇಲೆ ಕುಸಿದಿದೆ. ರಾಜೇಶ್ ಮತ್ತು ನಾರಾಯಣ ಅವರಿಗೆ ಮುಖದಿಂದ ಕಾಲಿನವರೆಗೆ ಬೆಂಕಿಯಿಂದ ಸುಟ್ಟಗಾಯಗಳಾಗಿದ್ದು, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ನಾಗರಾಜು ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಾಗರಾಜು ಆಸ್ಪತ್ರೆಯಲ್ಲಿ ಮೃತಪಟ್ಟರು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read the complete story at Prajavani