ಗ್ಲಾಸ್ಗೊದಲ್ಲಿ ಭಾರತದ ಕ್ರೀಡಾಪಟುಗಳ ಜಯದ ಓಟ
ಗ್ಲಾಸ್ಗೊ/ಬೆಂಗಳೂರು: ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ಹನ್ನೊಂದು ದಿನಗಳ ಹಿಂದೆ ಭಾರತದ ಕ್ರೀಡಾಪಟುಗಳ ತಂಡವು ಬಂದಿಳಿದಿತ್ತು. ಆಗ ಈ ತಂಡವು ಪ್ರತಿ ಸಲದಂತೆ ಹೆಚ್ಚು ಪದಕಗಳನ್ನು ಜಯಿಸುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಏಕೆಂದರೆ ಈ ಸಲದ ಕ್ರೀಡಾಕೂಟದಲ್ಲಿ ಕೇವಲ ಹತ್ತು ಕ್ರೀಡಾಪ್ರಕಾರಗಳಲ್ಲಿ ಸ್ಪರ್ಧೆಗಳು ಏರ್ಪಟ್ಟಿದ್ದವು. ಮಿತವ್ಯಯದ ಕೂಟ ಇದ್
ಗ್ಲಾಸ್ಗೊ/ಬೆಂಗಳೂರು: ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ಹನ್ನೊಂದು ದಿನಗಳ ಹಿಂದೆ ಭಾರತದ ಕ್ರೀಡಾಪಟುಗಳ ತಂಡವು ಬಂದಿಳಿದಿತ್ತು. ಆಗ ಈ ತಂಡವು ಪ್ರತಿ ಸಲದಂತೆ ಹೆಚ್ಚು ಪದಕಗಳನ್ನು ಜಯಿಸುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಏಕೆಂದರೆ ಈ ಸಲದ ಕ್ರೀಡಾಕೂಟದಲ್ಲಿ ಕೇವಲ ಹತ್ತು ಕ್ರೀಡಾಪ್ರಕಾರಗಳಲ್ಲಿ ಸ್ಪರ್ಧೆಗಳು ಏರ್ಪಟ್ಟಿದ್ದವು. ಮಿತವ್ಯಯದ ಕೂಟ ಇದ್ದಾಗಿದ್ದ ಕಾರಣ ಹಲವು ಪ್ರಮುಖ ಕ್ರೀಡಾಪ್ರಕಾರಗಳನ್ನು ಆಯೋಜಿಸಿರಲಿಲ್ಲ. ಅದರಲ್ಲೂ ಭಾರತಕ್ಕೆ ಪ್ರತಿವರ್ಷವೂ ಪದಕಗಳ ಕಾಣಿಕೆ ನೀಡುತ್ತಿದ್ದ ಕುಸ್ತಿ, ಶೂಟಿಂಗ್, ಆರ್ಚರಿ, ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳು ಈ ಬಾರಿ ಇರಲಿಲ್ಲ. ಆದ್ದರಿಂದ ಹೆಚ್ಚೆಂದರೆ 15–20 ಪದಕ ಬರಬಹುದು ಎಂಬ ಲೆಕ್ಕಾಚಾರ ಮಾಡಲಾಗಿತ್ತು. ಆದರೆ; ಕ್ರೀಡಾಪಟುಗಳು ತಮ್ಮ ಛಲ, ಬಲದ ಸಾಮರ್ಥ್ಯ ಮೆರೆದರು. ಭರ್ಜರಿ 39 ಪದಕಗಳ ಬೇಟೆಯಾಡಿದರು. ಈ ಸಲವೂ ಪದಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು. 2022ರಲ್ಲಿಯೂ ನಾಲ್ಕನೇ ಸ್ಥಾನ ಪಡೆದಿತ್ತು. ಆಗ 60 ಪದಕಗಳನ್ನು ಗೆದ್ದಿತ್ತು. ಈ ಸಲ ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ನಲ್ಲಿ ಹೆಚ್ಚು ಪದಕಗಳು ಒಲಿದಿದ್ದು ವಿಶೇಷ. ಅದರಲ್ಲಿಯೂ ಭಾರತ ಗೆದ್ದ 13 ಚಿನ್ನದ ಪದಕಗಳ ಪೈಕಿ ಮಹಿಳೆಯರ ಕಾಣಿಕೆಯು ಎಂಟು. ಮಹಿಳೆಯರ ಬಾಕ್ಸಿಂಗ್ನಲ್ಲಿ ಒಲಿಂಪಿಯನ್ ಲವ್ಲಿನಾ ಬೋರ್ಗೊಹೈನ್ ಬಿಟ್ಟರೆ ಉಳಿದೆಲ್ಲ ಬಾಕ್ಸರ್ಗಳೂ ಚಿನ್ನ ಗೆದ್ದರು. ಲವ್ಲಿನಾ ಬೆಳ್ಳಿ ಪಡೆದರು. ಟ್ರ್ಯಾಕ್ ಮತ್ತು ಫೀಲ್ಡ್ ಅಂಗಳದಲ್ಲಿಯೂ ಈ ಸಲ 3 ಚಿನ್ನದ ಪದಕಗಳು ಒಲಿದವು. ಆದರೆ ‘ಸೂಪರ್ಸ್ಟಾರ್’ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಜಯಿಸಲು ಮಾತ್ರ ಸಾಧ್ಯವಾಯಿತು. ಯಶ್ವೀರ್ ಸಿಂಗ್ ಅವರು ಕಂಚು ಪಡೆದರು. ಈ ಸಲ ಸಾಮಾನ್ಯ ಮತ್ತುಪ್ಯಾರಾ ವಿಭಾಗಗಳ ಸ್ಪರ್ಧೆಗಳು ಏಕಕಾಲದಲ್ಲಿ ನಡೆದವು. ಕೂಟದ ಮೊದಲ ದಿನ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡುಕುಮಾರ್ ಅವರು ಕಂಚಿನಪದಕ ಜಯಿಸುವ ಮೂಲಕ ಭಾರತ ಶುಭಾರಂಭ ಮಾಡಿತ್ತು. ನಂತರ ಮಹಿಳೆಯರ ವೇಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಜಯಿಸಿದರು. ಸತತ ಮೂರನೇ ಬಾರಿ ಅವರು ಈ ಸಾಧನೆ ಮಾಡಿದರು. ಶನಿವಾರವಂತೂ ಒಟಟು 16 ಪದಕಗಳ ಸರಮಾಲೆಯೇ ಭಾರತಕ್ಕೆ ಒಲಿಯುವ ಮೂಲಕ ಪಟ್ಟಿಯಲ್ಲಿ ಮೇಲೆರಿತು. ಮುಂದಿನ ತಿಂಗಳು ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಅದರಿಂದಾಗಿ ಭಾರತದ ಕ್ರೀಡಾಪಟುಗಳಲ್ಲಿ ಗ್ಲಾಸ್ಗೊ ಸಾಧನೆಯು ಹೊಸ ಹುಮ್ಮಸ್ಸು ತುಂಬಿರುವುದಂತೂ ಸತ್ಯ. ಅಲ್ಲದೇ 2030ರಲ್ಲಿ ಭಾರತವೇ ಕಾಮನ್ವೆಲ್ತ್ ಕೂಟ ಏರ್ಪಡಿಸಲು ಈ ಸಲದ 39 ಪದಕಗಳ ಸಾಧನೆಯು ಮುನ್ನುಡಿಯಾಗಲಿದೆ.