ಅಂತರಶಾಲಾ ಇಂಗ್ಲಿಷ್ ಉತ್ಸವ: ಕ್ರೈಸ್ಟ್ ಸ್ಕೂಲ್, ಹಿಲ್ವ್ಯೂ ಅಕಾಡೆಮಿ ಚಾಂಪಿಯನ್ಸ್
ಮೈಸೂರು: ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ಹಾಗೂ ಪ್ರಮತಿ ಹಿಲ್ವ್ಯೂ ಅಕಾಡೆಮಿ ಮಕ್ಕಳು ‘ಪ್ರಮತಿ ಲುಮಿನ–2026’ ಅಂತರಶಾಲಾ ಇಂಗ್ಲಿಷ್ ಉತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಪಡೆದು ಜಂಟಿ-ಚಾಂಪಿಯನ್ ಆಗಿ ರೋಲಿಂಗ್ ಟ್ರೋಫಿ ತಮ್ಮದಾಗಿಸಿಕೊಂಡಿರು. ಕುವೆಂಪುನಗರದ ಪ್ರಮತಿ ಹಿಲ್ವ್ಯೂ ಅಕಾಡೆಮಿಯಲ್ಲಿ ಸ್ಪರ್ಧೆ ನಡೆಯಿತು. ನಗರದ ವಿವಿಧ

ಮೈಸೂರು: ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ಹಾಗೂ ಪ್ರಮತಿ ಹಿಲ್ವ್ಯೂ ಅಕಾಡೆಮಿ ಮಕ್ಕಳು ‘ಪ್ರಮತಿ ಲುಮಿನ–2026’ ಅಂತರಶಾಲಾ ಇಂಗ್ಲಿಷ್ ಉತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಪಡೆದು ಜಂಟಿ-ಚಾಂಪಿಯನ್ ಆಗಿ ರೋಲಿಂಗ್ ಟ್ರೋಫಿ ತಮ್ಮದಾಗಿಸಿಕೊಂಡಿರು. ಕುವೆಂಪುನಗರದ ಪ್ರಮತಿ ಹಿಲ್ವ್ಯೂ ಅಕಾಡೆಮಿಯಲ್ಲಿ ಸ್ಪರ್ಧೆ ನಡೆಯಿತು. ನಗರದ ವಿವಿಧ 15 ಶಾಲೆಗಳಿಂದ 150 ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ಲಿಟರೇಚರ್ ಫೆಸ್ಟಿವಲ್ ಟ್ರಸ್ಟ್ ಸಂಸ್ಥಾಪಕಿ ಶುಭಾ ಸಂಜಯ್ ಅರಸ್ ಮಾತನಾಡಿ, ‘ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.‘ಇಂಗ್ಲಿಷ್ ಭಾಷೆಯು ಜಗತ್ತನ್ನು ನೋಡಲು ಇರುವ ಕಿಟಕಿ. ಅದನ್ನು ಕಲಿತು ಜಗತ್ತನ್ನು ನೋಡಿದಾಗ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯ. ಅದು ಇಂದಿನ ಅಗತ್ಯವೂ ಆಗಿದೆ’ ಎಂದರು. ಪ್ರಮತಿ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಎಸ್. ಫಣಿರಾಜ್, ಮುಖ್ಯ ಶಿಕ್ಷಣಾಧಿಕಾರಿ ಸಿ.ಎಸ್. ಸುದರ್ಶನ, ಪ್ರಾಂಶುಪಾಲೆ ಜರಿತಾ ವಿ.ಆರ್. ಪಾಲ್ಗೊಂಡಿದ್ದರು.ವಿಜೇತರ ವಿವರ ಇಂತಿದೆ (ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು).* ಸ್ಕ್ರಿಪ್ಟ್ ಮಾಸ್ಟರ್ಸ್: ಚಿರಸ್ವಿ ಎನ್.ಕೆ. (ಮಹರ್ಷಿ ಪಬ್ಲಿಕ್ ಸ್ಕೂಲ್), ಅದಿತಿ ಎಂ.ಆರ್. (ಕ್ರೈಸ್ಟ್ ಪಬ್ಲಿಕ್ ಸ್ಕೂಲ್), ಆರಾಧ್ಯಾ ರಂಗನಾಥ (ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್).* ಕರ್ಸಿವ್ ರೈಟಿಂಗ್: ಸ್ನೇಹಾ ಪಿ. (ಶಾರದಾ ಪಬ್ಲಿಕ್ ಸ್ಕೂಲ್), ಆರ್ಯ ಪ್ರಶಾಂತ್ (ಪ್ರಮತಿ ಹಿಲ್ವ್ಯೂ ಅಕಾಡೆಮಿ), ಮೇಘನಾ ಎಂ.ವಿ. (ಕ್ರೈಸ್ಟ್ ಪಬ್ಲಿಕ್ ಸ್ಕೂಲ್).* ಕಥೆ ಹೇಳುವುದು: ತನಿಷಾ ಕಾಮತ್ (ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್), ಆಲಿಯಾ ರೆಹೆಮಾ (ಪ್ರಮತಿ ಹಿಲ್ವ್ಯೂ ಅಕಾಡೆಮಿ) ಕಾರ್ತಿಕ್ ಎ. (ಮಾನಸಸರೋವರ ಪುಷ್ಕರಿಣಿ).* ಪಪ್ಪೆಟ್ ಷೊ: ಕ್ರೈಸ್ಟ್ ಪಬ್ಲಿಕ್ ಸ್ಕೂಲ್, ಶಾರದಾ ಪಬ್ಲಿಕ್ ಸ್ಕೂಲ್, ಮಹರ್ಷಿ ಪಬ್ಲಿಕ್ ಸ್ಕೂಲ್.* ಇಂಗ್ಲಿಷ್ ಸಮೂಹ ಗಾಯನ: ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್, ಕ್ರೈಸ್ಟ್ ಪಬ್ಲಿಕ್ ಸ್ಕೂಲ್, ಬಿಎಸ್ಎಸ್ ವಿದ್ಯೋದಯ.* ಸ್ಪೆಲ್-ಬಿ: ಎಕ್ಸೆಲ್ ಪಬ್ಲಿಕ್ ಸ್ಕೂಲ್, ಪ್ರಮತಿ ಹಿಲ್ವ್ಯೂ ಅಕಾಡೆಮಿ, ಮಾನಸಸರೋವರ ಪುಷ್ಕರಿಣಿ.* ಪಾಡ್ಕಾಸ್ಟ್: ಮಾನಸಸರೋವರ ಪುಷ್ಕರಿಣಿ, ಪ್ರಮತಿ ಹಿಲ್ವ್ಯೂ ಅಕಾಡೆಮಿ, ಶಾರದಾ ಪಬ್ಲಿಕ್ ಸ್ಕೂಲ್.